Ramnagar: ಹಟ್ಟಿಯಲ್ಲಿದ್ದ ಗೋವನ್ನು ಕದ್ದೊಯ್ದು, ಪಕ್ಕದ ಜಾಗದಲ್ಲಿ ವಧೆ ಮಾಡಿ ಮಾಂಸ, ಚರ್ಮ ಕೊಂಡೊಯ್ದ ದುಷ್ಟರು!!!

Latest news Four cows tied up in the barn of a house were stolen in Ramnagar

ರಾಮನಗರ: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ. ಈ ನಡುವೆ ಮನುಷ್ಯರ ಮೇಲೆ ವಿಕೃತಿ ತೋರುವುದಲ್ಲದೆ ಏನು ಅರಿಯದ ಮುಗ್ಧ ಜೀವಿಗಳ ಮೇಲೆ ಕೂಡ ದೌರ್ಜನ್ಯ ಎಸಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.

ರಾಮನಗರ ಜಿಲ್ಲೆಯಲ್ಲಿ (Ramanagara news) ದನಗಳ್ಳರು ಅಟ್ಟಹಾಸ (Cow slaughter) ಮೆರೆದಿದ್ದು, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ನಾಲ್ಕು ಹಸುಗಳನ್ನು (Four Cows stolen) ಕಳವು ಮಾಡಿರುವ ದುರುಳರು, ಪಕ್ಕದ ತೋಟದಲ್ಲೇ ಅದನ್ನು ಮಾಂಸ ಮಾಡಿರುವ ಹೇಯ ಕೃತ್ಯ ಬೆಳಕಿಗೆ ಬಂದಿದ್ದು, ಅಷ್ಟೇ ಅಲ್ಲದೇ, ಗೋವಿನ ದೇಹದ ಉಳಿದ ಭಾಗಗಳನ್ನು ಅಲ್ಲೇ ಬಿಟ್ಟು ಹೋಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ವರದಿಯಾಗಿದೆ.

ರಾಮನಗರದ ಮಾಗಡಿ ತಾಲೂಕಿನ ಬಗೀನಗೆರೆ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ರೈತರಾಗಿರುವ ರಾಮಯ್ಯ ಎಂಬುವವರಿಗೆ ಸೇರಿದ ಮನೆಯ ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಕೊಟ್ಟಿಗೆಯಿಂದಲೇ ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡಿದ್ದಾರೆ. ರಾಮಯ್ಯನವರು ಬೆಳಿಗ್ಗೆ ಎಂದಿನಂತೆ ಎದ್ದು ಕೊಟ್ಟಿಗೆಗೆ ಹೋದಾಗ ಗೋವುಗಳು ಕಾಣಿಸದೆ ಕಂಗಾಲಾಗಿದ್ದಾರೆ. ಈ ವಿಚಾರ ಅಕ್ಕಪಕ್ಕದ ಮನೆಯವರಿಗೆ ಕೂಡ ತಿಳಿದು ಎಲ್ಲರೂ ಹಸುವಿಗಾಗಿ ಹುಡುಕಾಟ ನಡೆಸಿದ್ದಾರೆ.

ಹೀಗೆ ಹುಡುಕುತ್ತಾ ಅನತಿ ದೂರದ ತೋಟಕ್ಕೆ ಬಂದಾಗ ಕಳ್ಳರು ಹಸುಗಳನ್ನು ಕದ್ದು, ಸ್ವಲ್ಪ ದೂರಕ್ಕೆ ಎತ್ತಿಕೊಂಡು ಹೋಗಿ ಅದನ್ನು ವಧೆ ಮಾಡಿ, ಮಾಂಸ ಮಾಡಿ ಅಟ್ಟಹಾಸ ಮೆರೆದಿರುವ ವಿಚಾರ ಬಯಲಾಗಿದೆ. ದನಗಳನ್ನು ಕೊಂದು ಅದರ ಚರ್ಮ ಮತ್ತು ಮಾಂಸ ಒಯ್ದು ಉಳಿದ ದೇಹದ ಭಾಗಗಳನ್ನ ಅಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ರೈತ ರಾಮಯ್ಯ ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 2ಲಕ್ಷ ಬೆಲೆಬಾಳುವ ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತ ರೈತ ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.