Vehicle tax hike: ಹಾಲು,ಮದ್ಯದ ಬೆಲೆ ಏರಿಕೆ ನಡುವೆ ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಸರಕು ವಾಹನಗಳ ತೆರಿಗೆ ಏರಿಕೆ!

Latest news Vehicle tax hike goods and services tax hike news

Vehicle tax hike: ರಾಜ್ಯದ ಜನತೆಗೆ ತರಕಾರಿ, ಬೇಳೆ-ಕಾಳು ಬೆಲೆ ಏರಿಕೆಯ ನಡುವೆ ಇನ್ನೊಂದೆಡೆ ಕೆಎಂಎಫ್‌ ಅಧಿಕಾರಿಗಳು (KMF Officer) ಬರೆ ನೀಡಲು ಮುಂದಾಗಿದ್ದಾರೆ. ಈ ನಡುವೆ ರಾಜ್ಯದ ಜನತೆಯ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ರಾಜ್ಯ ಬಜೆಟ್‌ನಲ್ಲಿ ಉಲ್ಲೇಖಿಸಿರುವ ಹಾಗೆ ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧಾರ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.

ಹಾಲಿನ ದರ (Milk Price) ಏರಿಸುವಂತೆ ಸಿಎಂ ಸಿದ್ದರಾಮಯ್ಯಗೆ(CM Siddaramaiah) ಕೆಎಂಎಫ್‌(KMF )ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ, ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂಪಾಯಿ (Nandini Milk Price Hike)ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್‌ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಪರಿಷ್ಕೃತ ದರ ಆಗಸ್ಟ್‌ 1ರಿಂದ ಜಾರಿಗೆ ಬರಲಿದೆ.

ಸರಕು ವಾಹನಗಳಿಗೆ ಪೂರ್ಣಾವಧಿ ತೆರಿಗೆ ಪರಿಷ್ಕರಿಸುವ 2023ನೇ ಸಾಲಿನ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧಾರ ತಿದ್ದುಪಡಿ ಒಟ್ಟಾರೆ ತೂಕವು 1500 ಕಿ.ಗ್ರಾಂ.ಗಳಿಂದ 12 ಸಾವಿರ ಕಿ.ಗ್ರಾಂ. ಇರುವ ಸರಕು ವಾಹನಗಳಿಗೆ ವಿಧಿಸುವ ಪೂರ್ಣಾವಧಿ ತೆರಿಗೆ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಂಡಿಸಿದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಕ್ಕೆ ಸದನ ಒಪ್ಪಿಗೆ ಸೂಚಿಸಿದ್ದು,ಹೀಗಾಗಿ, ಶಾಲಾ ವಾಹನಗಳಿಗೆ (10ನೇ ತರಗತಿವರೆಗೆ) ಪ್ರತಿ ಚದರ ಮೀಟರ್‌ಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು 20 ರೂ.ನಿಂದ 100 ರೂ.ಗೆ ಹೆಚ್ಚಿಸಲಾಗಿದೆ. ಅಂದರೆ ಶಾಲಾ ಬಸ್‌ ವಾರ್ಷಿಕ 2,000 ರೂ. ತೆರಿಗೆ ಪಾವತಿಸುತ್ತಿದ್ದರೆ ಇನ್ನು ಮುಂದೆ ಸುಮಾರು 10,000 ರೂ. ತೆರಿಗೆ ಪಾವತಿಸಬೇಕಾಗುತ್ತದೆ.

ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500- 2 ಸಾವಿರ ಕಿ.ಗ್ರಾಂ. ಮೀರದೆ ಹೋದಲ್ಲಿ ಅವುಗಳಿಗೆ ಹಿಂದೆ 10 ಸಾವಿರ ರೂಪಾಯಿದ್ದರು ಕೂಡ 20 ಸಾವಿರ ರೂಪಾಯಿ ಆಗಲಿದೆ. 2 ಸಾವಿರ ಕಿ.ಗ್ರಾಂ.ನಿಂದ 3 ಸಾವಿರ ಕಿ.ಗ್ರಾಂ. ಮೀರದೇ ಹೋದಲ್ಲಿ 15 ಸಾವಿರ ರೂಪಾಯಿದ್ದರು ಕೂಡ 30 ಸಾವಿರ ರೂಪಾಯಿ ಆಗಲಿದೆ. 3 ಸಾವಿರ ಕಿ.ಗ್ರಾಂ.ನಿಂದ 5500 ಕಿ.ಗ್ರಾಂ. ಮೀರದಿದ್ದರೆ 40 ಸಾವಿರ ರೂಪಾಯಿ ಆಗಲಿದೆ. ಪೂರ್ಣಾವಧಿ ತೆರಿಗೆ ಪಾವತಿಸಬೇಕು. 5000 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ. ಮೀರದಿದ್ದರೆ 60 ಸಾವಿರ ರೂಪಾಯಿ ತೆರಿಗೆ ಪಾವತಿ ಆಗಲಿದೆ. 750 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ. ಮೀರದಿದ್ದರೆ 80 ಸಾವಿರ ರೂಪಾಯಿ ಆಗಲಿದೆ. 9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ. ಮೀರದಿದ್ದರೆ ಒಂದ ಲಕ್ಷ ರು. ಪೂರ್ಣಾವಧಿ ತೆರಿಗೆ ಪಾವತಿ ಆಗಲಿದೆ.

ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಯಾಣದ ಸಲುವಾಗಿ ಮಾತ್ರ ಓಮ್ನಿ ಬಸ್‌ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಕೆ ಮಾಡುತ್ತಿದ್ದರೆ ಫ್ಲೋರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 80 ರೂಪಾಯಿಗಳಿಂದ 200 ರೂಪಾಯಿಗೆ ಏರಿಕೆ ಮಾಡಲಾಗಿದೆ. ಸಂಚಾರಿ ಕ್ಯಾಂಟೀನ್‌, ಸಂಚಾರಿ ಗ್ರಂಥಾಲಯ ವಾಹನ, ಸಂಚಾರಿ ಕಾರ್ಯಾಗಾರ, ಸಂಚಾರಿ ಕ್ಲಿನಿಕ್‌, ಎಕ್ಸ್‌ರೇ ವಾಹನ, ಕ್ಯಾಷ್‌ ವಾಹನಗಳಲ್ಲಿ ಸರಕು ವಾಹನಗಳ ಪೈಕಿ 5,500 ಕೆ.ಜಿ.ಯಿಂದ 12 ಸಾವಿರ ಕೆ.ಜಿ.ವರೆಗಿನ ವಾಹನಗಳಿಗೆ ವಿಧಿಸಲಾಗುತ್ತಿದ್ದ 1,800 ರು. ತ್ರೈಮಾಸಿಕ ತೆರಿಗೆಯನ್ನು ನಿಲ್ಲಿಸಲಾಗಿದೆ.

Leave A Reply

Your email address will not be published.