Bangladesh: ಅಧಿಕ ಲೋಡ್ ತುಂಬಿದ ಬಸ್ ಹೊಂಡವೊಂದಕ್ಕೆ ಉರುಳಿ, 17 ಮಂದಿ ದಾರುಣ ಸಾವು! 35 ಮಂದಿಗೆ ಗಾಯ!!!

Latest international news 17 killed 35 injured as bus false into lake in Bangladesh

Bangladesh: ಬಾಂಗ್ಲಾದೇಶದ(Bangladesh) ಛತ್ರಕಾಂಡ ಪ್ರದೇಶದ ಜಲಕತಿ ಸದ‌ ಉಪಜಿಲ್ಲಾ ವ್ಯಾಪ್ತಿಯಲ್ಲಿ ಹೊಂಡಕ್ಕೆ ಬಸ್ ಉರುಳಿ ಬಿದ್ದು 17 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಶನಿವಾರ ಮುಂಜಾನೆ 9:00 ಗಂಟೆ ಸುಮಾರಿಗೆ ಪಿರೋಜ್‌ಪುರದ ಭಂಡಾರಿಯಾದಿಂದ 10:00 ಗಂಟೆ ಸುಮಾರಿಗೆ ಹೊರಟ ಬಸ್ ಬಾರಿಶಾಲ್-ಖುಲ್ಲಾ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭ ಛತ್ರಕಾಂಡದಲ್ಲಿ ರಸ್ತೆ ಬದಿಯ ನೀರಿನ ಹೊಂಡಕ್ಕೆ ಬಸ್‌ ಉರುಳಿಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಮೂವರು ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದು,35 ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.ಚಾಲಕನ ನಿರ್ಲಕ್ಯ ಧೋರಣೆಯಿಂದ ಘಟನೆ ಸಂಭವಿಸಿದೆ. 52 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಇರುವ ಬಸ್ಸಿನಲ್ಲಿ 60 ಕ್ಕೂ ಹೆಚ್ಚಿನ ಮಂದಿಯನ್ನು ಹೊತ್ತುಕೊಂಡು ಹೋದ ಹಿನ್ನೆಲೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಂಗೀತ ಶಿಕ್ಷಕನೊಂದಿಗೆ ಶಿಕ್ಷಕನ ರಾಸಲೀಲೆ! ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮಸ್ಥರು, ಮುಂದೆ…

Leave A Reply

Your email address will not be published.