Manipur Violence: ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ನಂತರ ದಾಖಲಾಯ್ತು ಶೂನ್ಯ ಎಫ್‌ಐಆರ್‌! ಏನಿದು ಎಫ್‌ಐಆರ್‌? ಇಲ್ಲಿದೆ ವಿವರ

Manipur violence what is zero FIR and why it is registered

Manipur Violence: ಮಣಿಪುರದಲ್ಲಿ ಬೆತ್ತಲೆಯಾಗಿ ಯುವತಿಯರಿಬ್ಬರ ಮೆರವಣಿಗೆ ಮಾಡಿದ ಪ್ರಕರಣ(Manipur Violence) ಮಾತ್ರವಲ್ಲದೇ, ಇದಾದ ನಂತರ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೇ ಅತ್ಯಾಚಾರದ ನಂತರ ಕೊಲೆ ಕೂಡಾ ಮಾಡಲಾಗಿದೆ. ಮೇ 16 ರಂದು ಸಂತ್ರಸ್ತೆಯ ತಾಯಿ ಕಾಂಗ್‌ಪೋಕಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಿದ್ದಾರೆ. ಮೇ 4 ರಂದು ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಬಹುಸಂಖ್ಯಾತ ಸಮುದಾಯದ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವುದಾಗಿ ಸಂತ್ರಸ್ತೆಯ ತಾಯಿ ಹೇಳಿಕೆ ನೀಡಿದ ದೂರು ದಾಖಲಿಸಿದ್ದಾರೆ.

ಜೂನ್ 13 ರಂದು, ಈ ಎಫ್ಐಆರ್ ಅನ್ನು ಇಂಫಾಲ್ ಪೂರ್ವ ಜಿಲ್ಲೆಯ ಪೊರೊಂಪಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಮನೆಯವರಿಗೆ ತನಿಖೆ ಯಾವ ರೀತಿ ನಡೆಯುತ್ತಿದೆ ಎಂದು ಇನ್ನೂ ತಿಳಿದು ಬಂದಿಲ್ಲ, ಹಾಗಾಗಿ ಈ ಸಂದರ್ಭದಲ್ಲಿ, ಶೂನ್ಯ ಎಫ್‌ಐಆರ್(Zero Fir) ಮಾಡಲಾಗಿದೆ. ಇದು ಯಾವಾಗ ನೋಂದಾಯಿಸಲ್ಪಟ್ಟಿದೆ ಮತ್ತು ಅದು ದೇಶದಲ್ಲಿ ಏಕೆ ಮತ್ತು ಹೇಗೆ ಪ್ರಾರಂಭವಾಯಿತು ಎಂಬ ಪ್ರಶ್ನೆ ನಿಮಗೆ ಕಾಡಬಹುದು. ಅದೇನೆಂದು ತಿಳಿಯುವ.

ಜೀರೋ ಎಫ್‌ಐಆರ್‌ನ ಉದ್ದೇಶವು ಸಂತ್ರಸ್ತೆಯ ಕುಟುಂಬಸ್ಥರು ಅಥವಾ ಸಂತ್ರಸ್ತರು ಪೊಲೀಸ್ ದೂರು ನೀಡಲು ಅಲೆದಾಡುವ ಪರಿಸ್ಥಿತಿ ಬರದಂತೆ, ಹಾಗೂ ಸಂತ್ರಸ್ತರಿಗೆ ತಕ್ಷಣವೇ ಸಹಾಯ ಮಾಡಲು ಈ ನಿಬಂಧನೆಯನ್ನು ಪರಿಚಯಿಸಲಾಗಿದೆ. ಇದರಿಂದ ಎಫ್‌ಐಆರ್ ನೋಂದಣಿಯ ನಂತರ ಸಕಾಲಿಕ ಕ್ರಮವನ್ನು ತೆಗೆದುಕೊಳ್ಳಬಹುದು.

ಪೊಲೀಸ್ ಠಾಣೆಯು ತನ್ನ ವ್ಯಾಪ್ತಿಯ ಹೊರಗೆ ನಡೆದ ಅಪರಾಧದ ದೂರನ್ನು ದಾಖಲಿಸಿದಾಗ, ಅದು ಶೂನ್ಯ ಎಫ್‌ಐಆರ್ ರೂಪದಲ್ಲಿರುತ್ತದೆ. ಅಪರಾಧದ ಸಂದರ್ಭದಲ್ಲಿ, ಘಟನೆಯ ಸ್ಥಳವು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಮೂಲಕ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸುವಂತಿಲ್ಲ. ಅಪರಾಧದ ಸಂದರ್ಭದಲ್ಲಿ, ಪೊಲೀಸರು ಆ ಸಮಯದಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ನಂತರ ಅದನ್ನು ತನಿಖೆಗಾಗಿ ಮೂಲ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ ಇದರಿಂದ ತನಿಖೆಯನ್ನು ಪ್ರಾರಂಭಿಸಬಹುದು.

ಈ ರೀತಿಯಾಗಿ, ತುರ್ತು ಪರಿಸ್ಥಿತಿಯಲ್ಲಿ, ಪೊಲೀಸರು ಶೂನ್ಯ ಎಫ್‌ಐಆರ್ ಅನ್ನು ದಾಖಲಿಸಬೇಕಾಗುತ್ತದೆ, ನಂತರ ಅದನ್ನು ಘಟನೆಯ ಪ್ರದೇಶದಲ್ಲಿ ಬರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಶಿಕ್ಷೆಯಾಗಬಹುದು ಎಂಬಂತಹ ನಿಬಂಧನೆಯನ್ನು ಸೇರಿಸಲು ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ಮಾಡಲು ನ್ಯಾಯಮೂರ್ತಿ ವರ್ಮಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿಯಲ್ಲಿ ಶೂನ್ಯ ಎಫ್‌ಐಆರ್‌ಗೆ ಶಿಫಾರಸು ಮಾಡಲಾಗಿದೆ. ಇದರ ನಂತರ, ಶೂನ್ಯ ಎಫ್‌ಐಆರ್ ಅನ್ನು ಜಾರಿಗೊಳಿಸಲಾಯಿತು. ಈ ಸಮಿತಿಯನ್ನು 2012 ರಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರದ ನಂತರ ರಚಿಸಲಾಯಿತು.

ಸಿಆರ್‌ಪಿಸಿಯ ಸೆಕ್ಷನ್ 154 ರ ಪ್ರಕಾರ, ಘಟನೆಯ ಪ್ರದೇಶದೊಂದಿಗೆ ಸಂಬಂಧವಿಲ್ಲದಿದ್ದರೂ ಸಹ ಪೊಲೀಸ್ ಠಾಣೆಯು ಎಫ್‌ಐಆರ್ ಅನ್ನು ದಾಖಲಿಸಬೇಕು. ಅಂತಹ ಸಂದರ್ಭಗಳಲ್ಲಿ, ಇನ್ಸ್‌ಪೆಕ್ಟರ್ ಅಥವಾ ಹಿರಿಯ ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಯೊಬ್ಬರು ಫಾರ್ವರ್ಡ್ ಮಾಡುವ ಪತ್ರವನ್ನು ನೀಡುತ್ತಾರೆ, ಅದನ್ನು ಕಾನ್‌ಸ್ಟೆಬಲ್ ಅವರು ಪ್ರಕರಣ ಸಂಬಂಧವಿರು ಪೊಲೀಸ್ ಠಾಣೆಗೆ ಕೊಂಡೊಯ್ಯುತ್ತಾರೆ.

Leave A Reply

Your email address will not be published.