108 ಕ್ಕೆ ಕರೆಮಾಡಿ ಕಾಟ ಕೊಡೋ ಪುಂಡರು! ಹುಡುಗಿ ಸ್ವರ ಕೇಳಿದರಂತೂ….

Problem faced by staff working in ambulance service

Ambulence Service: ಎಲ್ಲರಿಗೂ ಗೊತ್ತಿರುವ ಹಾಗೆ, ತುರ್ತು ವೈದ್ಯಕೀಯ ಸೇವೆಗಾಗಿ ಆಂಬುಲೆನ್ಸ್ ಸೇವೆ (108 Ambulance Service) ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ನಿಜಕ್ಕು ಯಾರಿಗೆ ಸಮಸ್ಯೆಯಾಗಿದೆ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಮಂದಿಗೆ ಆಗುತ್ತಿರುವ ಸಮಸ್ಯೆಗಳು ಜಗತ್ತಿಗೆ ಗೊತ್ತಾಗುತ್ತಿಲ್ಲ.

ಆಂಬುಲೆನ್ಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ (Problem) ಯಾರಿಗೂ ತಿಳಿದಿಲ್ಲ. ಕಂಟ್ರೋಲ್ ರೂಂನಲ್ಲಿ (Control Room) ಕರೆ ಸ್ವೀಕರಿಸುವವರಿಗೆ ತುರ್ತು ವೈದ್ಯಕೀಯ ಸೇವೆಯ ಮಾಹಿತಿ ಬಿಟ್ಟು ಸುಮ್ಮನೆ ಕರೆ ಮಾಡುವ ಮಂದಿಯೇ ಹೆಚ್ಚು.

108 ಆಂಬುಲೆನ್ಸ್ ಸಹಾಯವಾಣಿಯಲ್ಲಿ (Helpline) ಕೆಲಸ ಮಾಡುವ ಸಿಬ್ಬಂದಿ ಹಗಲಿರುಳು ಅಂದರೆ (24*7)ಸೇವೆ ನೀಡುವ ಆರೋಗ್ಯ ಇಲಾಖೆಗೆ (Health Department ) ಬರುವ 100 ಕರೆಗಳಲ್ಲಿ ಶೇಕಡ 70 ರಷ್ಟು ಫೇಕ್ ಕಾಲ್ಸ್‌ ಎನ್ನಲಾಗಿದೆ. ಕರೆ ಮಾಡುವ ಮಂದಿ ವಿನಾ ಕಾರಣ ಸಹಾಯವಾಣಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುವುದಲ್ಲದೆ ಮಹಿಳೆಯರೆಂದು ತಿಳಿದ ಕೂಡಲೇ ಫೋನ್ ನಂಬರ್, ಅಡ್ರೆಸ್ಗಾಗಿ ಪೀಡಿಸುತ್ತಾರಂತೆ.ಅನಾವಶ್ಯಕವಾಗಿ ಕರೆ ಮಾಡಿ ಕಾಟ ಕೊಡುವವರು ಕೂಡ ಇದ್ದಾರಂತೆ. ಇದರಿಂದಾಗಿ ನಿಜವಾಗಿಯೂ ಯಾರಿಗೆ ಸಮಸ್ಯೆಯಿದೆ ಅವರಿಗೆ ನೆರವಾಗಲು
ಆಂಬುಲೆನ್ಸ್ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ.ಆರೋಗ್ಯ ಇಲಾಖೆ ಈ ಕುರಿತು ಕ್ರಮ ಕೈಗೊಂಡು ಅನಾವಶ್ಯಕ ಮಾತುಗಳಿಂದ ಹೈರಾಣಾಗಿರುವ ಆಂಬುಲೆನ್ಸ್ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿಗಳಿಗೆ ಸಹಕರಿಸುವುದು ಉತ್ತಮ.

ಇದನ್ನೂ ಓದಿ: ಈ ಊಮ್ಮನ್‌ ಚಾಂಡಿ ಯಾರು? ಇವರ ನಿಧನಕ್ಕೇಕೆ 3 ದಿನಗಳ ಕಾಲ ಶೋಕಾಚರಣೆ?’- ಖ್ಯಾತ ನಟನೋರ್ವನ ಮಾತು, ಪೋಲೀಸ್ ದಾಳಿ

Leave A Reply

Your email address will not be published.