Oommen chandy: ಈ ಊಮ್ಮನ್‌ ಚಾಂಡಿ ಯಾರು? ಇವರ ನಿಧನಕ್ಕೇಕೆ 3 ದಿನಗಳ ಕಾಲ ಶೋಕಾಚರಣೆ?’- ಖ್ಯಾತ ನಟನೋರ್ವನ ಮಾತು, ಪೋಲೀಸ್ ದಾಳಿ

Remarks against Oommen chandy police raids Malayalam actor Vinayakan house

Oommen chandy: ಕೇರಳದ (Kerala)ಮಾಜಿ ಮುಖ್ಯ ಮಂತ್ರಿಯಾಗಿದ್ದ(Former Chief Minister of Kerala) ಊಮ್ಮನ್ ಚಾಂಡಿ(Oommen Chandy) ಅಸೌಖ್ಯದಿಂದ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ನಡುವೆ,ಮಲಯಾಳಂ ನಟ ವಿನಾಯಕನ್ ಊಮ್ಮನ್ ಚಾಂಡಿ ಅವರ ನಿಧನಕ್ಕೆ 3 ದಿನಗಳ ಕಾಲ ಶೋಕಾಚರಣೆ ಮಾಡುವುದಾದರೂ ಯಾಕೆ ಎಂದು ಪ್ರಶ್ನೆ ಮಾಡಿದ್ದು, ಸದ್ಯ ಇವರ ಮನೆಗೆ ಪೋಲಿಸರು ದಾಳಿ ನಡೆಸಿದ ಘಟನೆ ನಡೆದಿದೆ.

Oommen chandy

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೊತೆಗೆ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಅಷ್ಟೆ ಅಲ್ಲದೇ,ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನಿರಂತರವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಊಮ್ಮನ್ ಚಾಂಡಿ ಬಗ್ಗೆ ಮಲಯಾಳಂ ನಟ ಕೇವಲವಾಗಿ ಮಾತನಾಡಿದ್ದು,ಸದ್ಯ, ಎ ವಿಚಾರ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಫೇಸ್ಬುಕ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ವಿನಾಯಕನ್ ಈ ಊಮ್ಮನ್ ಚಾಂಡಿ ಯಾರು ?ಇವರ ನಿಧನಕ್ಕೇಕೆ 3 ದಿನಗಳ ಕಾಲ ಶೋಕಾಚರಣೆ?’ ಎಂದು ಪ್ರಶ್ನಿಸಿದ್ದರು. ಹೀಗಾಗಿ, ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಲ್ಲದೆ ಶುಕ್ರವಾರ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನೋಟಿಸ್ ನೀಡಿದ್ದರು ಎನ್ನಲಾಗಿದೆ. ವಿನಾಯಕನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ನಂತರ ದಾಖಲಾಯ್ತು ಶೂನ್ಯ ಎಫ್‌ಐಆರ್‌! ಏನಿದು ಎಫ್‌ಐಆರ್‌? ಇಲ್ಲಿದೆ ವಿವರ

Leave A Reply

Your email address will not be published.