Human breast milk: ತಾಯಿಯ ಎದೆಹಾಲೇ ವಿಷವಾಯಿತೇ!? ಅಧ್ಯಯನದಿಂದ ಶಾಕಿಂಗ್ ಮಾಹಿತಿ!

Researchers warn after toxic flame retardant found in Human breast milk

Human breast milk: ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಹರಸಾಹಸ ಪಡುವುದು ಸಹಜ. ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದು ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇರುತ್ತವೆ. ಇದೀಗ, ಯುಎಸ್ನಲ್ಲಿ(US )ಮಾನವ ಎದೆ ಹಾಲಿನಲ್ಲಿ ಜ್ವಾಲೆ ನಿರೋಧಕ(Flame retardant) ಇರುವ ಕುರಿತು ಹೊಸ ಸಂಶೋಧನೆಯೊಂದು ಮಾಹಿತಿ ನೀಡಿದೆ.

ಮಾನವನ ಎದೆ ಹಾಲಿನಲ್ಲಿ( Human breast milk) ಈ ರಾಸಾಯನಿಕಗಳು ಇರುವ ಕುರಿತು ಮಾಹಿತಿ ಹೊರ ಬಿದ್ದಿದ್ದು ಇದೇ ಮೊದಲು ಎನ್ನಲಾಗಿದ್ದು, ಜ್ವಾಲೆ ಪ್ರತಿರೋಧಕಗಳು ಹೆಚ್ಚಾಗಿ ಅನಿಯಂತ್ರಿತ ಉಪವರ್ಗವಾದ ಬ್ರೋಮೋಫೆನಾಲ್ಗಳು ಎದೆ ಹಾಲಿನಲ್ಲಿ ಇರುವುದಾಗಿ ಸಂಶೋಧನೆ ಮಾಹಿತಿ ನೀಡಿದೆ. ರಾಸಾಯನಿಕಗಳು ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಪ್ರಬಲ ನ್ಯೂರೋಟಾಕ್ಸಿನ್ ಎಂದು ಹೇಳಲಾಗಿದೆ.

ಈ ರಾಸಾಯನಿಕಗಳನ್ನು ಸಾಮಾನ್ಯವಾಗಿ ಪ್ಲಾಸ್ಟಿಕ್, ಟೆಲಿವಿಷನ್, ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಉಪಯೋಗಿಸಲಾಗುತ್ತದೆ. ಎಲ್ಲಾ ಮಾದರಿಗಳು ಕನಿಷ್ಠ ಕೆಲವು ಮಟ್ಟದ ಅಪಾಯಕಾರಿ ರಾಸಾಯನಿಕಗಳನ್ನು ಒಳಗೊಂಡ ಕುರಿತಂತೆ ವರದಿಯಾಗಿದ್ದು, ಈ ಅಪಾಯಕಾರಿ ಸಂಯುಕ್ತಗಳು ಬ್ರೋಮಿನೇಟೆಡ್ ಜ್ವಾಲೆ ನಿರೋಧಕ ವರ್ಗದ ಭಾಗ ಎನ್ನಲಾಗಿದೆ.

ಇದನ್ನೂ ಓದಿ: Gruhalakshmi Scheme: ಗೃಹ ಲಕ್ಷ್ಮಿ ಯೋಜನೆಯ ಕುರಿತು ಇಲ್ಲಿದೆ ಮಹತ್ವದ ಮಾಹಿತಿ!

Leave A Reply

Your email address will not be published.