Udupi News: ರೀಲ್ಸ್​ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದ ಯುವಕ! ಸ್ನೇಹಿತನ ಮೊಬೈಲ್‌ನಲ್ಲಿ ದೃಶ್ಯ ಸೆರೆ

23-year-old-youth-drawn-in-to-water-while-shooting-for-reels-at-udupi

Udupi News: ಮಳೆ ಮಳೆ ಎಲ್ಲಾ ಕಡೆ ಮಳೆ. ಹಾಗಾಗಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರುವಂತೆ ಎಲ್ಲರಿಗೂ ಮನವಿ ಕೂಡಾ ಮಾಡಿದೆ. ಆದರೂ ಕೆಲವೊಬ್ಬರು ಅಲ್ಲೋ ಇಲ್ಲೋ ಈ ಮಾತನ್ನು ಕೇಳದೆ ತಮ್ಮದೇ ಆಟಾಟೋಪ ಮಾಡುತ್ತಿದ್ದಾರೆ. ಇದಕ್ಕೆ ಉದಾಹುರಣೆ ಎನ್ನುವಂತೆ ಇಲ್ಲೊಬ್ಬ ಯುವಕನೋರ್ವ ರೀಲ್ಸ್‌ (Reels) ಮಾಡಲೆಂದು ಹೋಗಿ, ತನ್ನ ಪ್ರಾಣಕ್ಕೆ ಅಪಾಯ ತಂದೊಂಡಿದ್ದಾನೆ.

ಈ ರೀಲ್ಸ್‌ ಮಾಡೋ ಕ್ರೇಜ್‌ ಗೆ ಅನೇಕ ಮಂದಿ ಏನಾದರೊಂದು ಎಡವಟ್ಟು ಮಾಡಿ ತಮ್ಮ ಪ್ರಾಣ ಕಳೆದುಕೊಂಡ ಘಟನೆಯನ್ನು ನೀವು ಓದಿರಬಹುದು. ಇಲ್ಲೂ ಕೂಡಾ ಆಗಿರುವುದು ಅಂತಹುದೇ.
ಈ ಘಟನೆ ನಡೆದಿರುವುದು ಉಡುಪಿಯಲ್ಲಿ. ಯುವಕನೋರ್ವ ರೀಲ್ಸ್‌ ಮಾಡಲು ಹೋಗಿ ಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಮೇಲೆ ಬರಲಾರದೆ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಭದ್ರಾವತಿ ಮೂಲದ ಶರತ್‌ ಕುಮಾರ್‌ (23) ಎಂದು ಗುರುತಿಸಲಾಗಿದೆ. ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಅರಶಿನಗುಂಡಿ ಜಲಪಾತದಲ್ಲಿ (Arasinagundi Falls)ನಲ್ಲಿ ನಡೆದಿದೆ.

ಈ ಯುವಕ ಅರಶಿನಗುಂಡಿ ಜಲಪಾತ ವೀಕ್ಷಣೆಗೆಂದು ಬಂದಿದ್ದು, ಈತ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಗ್ನಿಶಾಮಕದಳ ಕಾರ್ಯಾಚಾರಣೆ ನಡೆಸುತ್ತಿದ್ದು, ಘಟನಾ ಸ್ಥಳಕ್ಕೆ ಕೊಲ್ಲೂರು ಪೊಲೀಸರು ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.

 

Leave A Reply

Your email address will not be published.