Maharashtra: ಪತ್ನಿ, ಸೋದರಳಿಯನ ತಲೆಗೆ ಗುಂಡೇಟು, ನಂತರ ತನಗೆ ಗುಂಡು ಹಾರಿಸಿದ ಎಸಿಪಿ!!!

Latest news ACP shot wife, nephew in head and then shot himself in Maharashtra

Maharashtra: ಮಹಾರಾಷ್ಟ್ರದ (Maharashtra)ಪುಣೆಯಲ್ಲಿ ಸೋಮವಾರ ಮುಂಜಾನೆ ವೇಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಮಡದಿ ಮತ್ತು ಸೋದರಳಿಯನನ್ನು ತನ್ನ ರಿವಾಲ್ವರ್‌ನಿಂದ ಗುಂಡಿಕ್ಕಿ ಕೊನೆಗೆ ತಾನೂ ಹಣೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ(Suicide )ಮಾಡಿಕೊಂಡ ಘಟನೆ ನಡೆದಿದೆ.

ಮೃತರಾಗಿರುವ ಮೂವರಲ್ಲಿ, ಗುಂಡು ಹೊಡೆದುಕೊಂಡ ಅಧಿಕಾರಿಯನ್ನು ಎಸಿಪಿ ಭರತ್ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಅವರ ಮಡದಿ ಮೋನಿ ಗಾಯಕ್ವಾಡ್ (44) ಮತ್ತು ಸೋದರಳಿಯ ದೀಪಕ್ (35) ಎಂದು ತಿಳಿದು ಬಂದಿದೆ.ಪೊಲೀಸರ ಪ್ರಕಾರ, ಗಾಯಕ್ವಾಡ್ ಅವರನ್ನು ಅಮರಾವತಿಯಲ್ಲಿ ಎಸಿಪಿಯಾಗಿ (ACP)ನಿಯೋಜನೆ ಮಾಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಪತ್ನಿ(Wife) ಮತ್ತು ಸೋದರಳಿಯನೊಂದಿಗೆ ಪುಣೆಯ ಬನೇರ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಬಾನೇರ್ ಪ್ರದೇಶದ ಎಸಿಪಿ ಭರತ್ ಗಾಯಕ್ವಾಡ್ ಅವರ ಬಂಗಲೆಯಲ್ಲಿ ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ಎಸಿಪಿ ಮೊದಲು ಪತ್ನಿಯ ತಲೆಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗುಂಡಿನ ಸದ್ದನ್ನು ಕೇಳಿ ಆಗಮಿಸಿದ ಮಗ ಮತ್ತು ಸೋದರಳಿಯ ಓಡಿ ಬಂದು ಬಾಗಿಲನ್ನು ತೆರೆದಿದ್ದಾರೆ. ಅವರು ಬಾಗಿಲು ತೆರೆದ ತಕ್ಷಣವೇ ಗಾಯಕ್ವಾಡ್ ತಮ್ಮ ಸೋದರಳಿಯನ ಮೇಲೆ ಗುಂಡು ಹಾರಿಸಿದ್ದಲ್ಲದೆ ಕೊನೆಗೆ ತನ್ನ ಹಣೆಯ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ಅಸಲಿ ಕಾರಣವೇನು ಎಂಬುದು ತಿಳಿದಿಲ್ಲ. ಚತುರ್ಶೃಂಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.