Crime News: ಕುಡಿತಕ್ಕೆ ಹಣವಿಲ್ಲವೆಂದು ಸ್ವಂತ ಹೆತ್ತ ಕಂದನನ್ನೇ ಮಾರಿದ ಪೋಷಕರು!!!

Latest news Crime News Parents sold their 6 month old baby to drink alcohol

Crime News: ಕುಡಿತದ ಚಟದಿಂದ ಆಗುವ ಅವಾಂತರ ಅಷ್ಟಿಷ್ಟಲ್ಲ. ಕುಡಿದ ಮತ್ತಿನಲ್ಲಿ ಜಗಳ ಗಲಾಟೆ ಮಾಡುವುದು ಕೊನೆಗೆ ಕೊಲೆ ಮಾಡುವ ಪ್ರಕರಣವು ಇದೆ.ಆದ್ರೆ, ಕುಡಿಯುವ ದುರಾಸೆಯಿಂದ ಪಾಪಿಗಳು ಮಾಡಿರುವ ಕೃತ್ಯ ನಿಜಕ್ಕೂ ಊಹೆಗೂ ಮೀರಿದ್ದು. ಹೌದು!!,ಮದ್ಯ ಸೇವನೆ ಮಾಡುವ ಸಲುವಾಗಿ ತನ್ನ 6 ತಿಂಗಳ ಕಂದಮ್ಮನನ್ನೇ ಮಾರಿದ ಹೇಯ ಕೃತ್ಯ ಬೆಳಕಿಗೆ ಬಂದಿದೆ.

ಕೆಲ ಸಮಯದಿಂದ ಮಗು ಕಾಣೆಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆರೆಹೊರೆಯವರು ಈ ದಂಪತಿಗೆ ಮಗುವಿನ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ಮಗು ಸಂಬಂಧಿಕರ ಮನೆಯಲ್ಲಿ ಎಂದು ಹೇಳಿಕೊಂಡು ಬರುತ್ತಿದ್ದರಂತೆ.ಹೀಗಿದ್ದರೂ ಕೂಡ ಅನುಮಾನಗೊಂಡ ಸ್ಥಳೀಯರು ಸ್ಥಳೀಯ ಕೌನ್ಸಿಲರ್ ಗಮನಕ್ಕೆ ತಂದಿದ್ದು, ಈ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದಿನವಿಡೀ ಕುಡಿಯುತ್ತಾ ಕುಟುಂಬದವರ ಜೊತೆಗೆ ಹಾಗೆಯೇ ಕೆಲವೊಮ್ಮೆ ನೆರೆಹೊರೆಯವರೊಂದಿಗೆ ಜಗಳವಾಡುವ ಅಭ್ಯಾಸ ಕೂಡ ಇತ್ತು. ಮದ್ಯ ಖರೀದಿಸಲು ಹಣದ ವ್ಯವಸ್ಥೆ ಇಲ್ಲದೆ ಇದ್ದಾಗ ತಮ್ಮ ಮಗುವನ್ನೇ ಮಾರಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾನಿಹತಿ ಮೂಲದ ದಂಪತಿ ಮದ್ಯ ಖರೀದಿಗೆ ತಮ್ಮ 6 ತಿಂಗಳ ಮಗುವನ್ನೇ ಮಾರಾಟ ಮಾಡಿದ್ದಾರೆ. ಸದ್ಯ ಪಶ್ಚಿಮ ಬಂಗಾಳ ಪೊಲೀಸರು ಈ ಪಾಪಿ ದಂಪತಿಯನ್ನು ಬಂಧಿಸಿದ್ದಾರೆ.

ಕುಡಿತದ ಚಟದಿಂದ ತಮ್ಮ ಸ್ವಂತ ಮಗುವನ್ನು ಮಾರಾಟ ಮಾಡುವ ಮಟ್ಟ ಕೀಳು ಮಟ್ಟಕ್ಕೆ ಪೋಷಕರು ತಲುಪಿದ್ದು ಶೋಚನೀಯ. ಮಗುವನ್ನು ಮಾರಾಟ ಮಾಡಿದ ಘಟನೆಯ ಕುರಿತಂತೆ ಪೊಲೀಸರು ಜೈದೇಬ್ ಚೌಧರಿ (ತಂದೆ), ಸತಿ ಚೌಧರಿ (ತಾಯಿ) ಮತ್ತು ಕನೈ ಚೌಧರಿ (ತಾತ) ಬಂಧಿಸಿದ್ದಾರೆ. ಪೊಲೀಸರು ಆ ಮಗುವನ್ನು ಮಾರಾಟ ಮಾಡಿದ ವ್ಯಕ್ತಿಯ ಬಗ್ಗೆ ತಿಳಿಯಲು ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.

ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ವರ್ತಿಸಿದ ಮಗುವಿನ ಅಜ್ಜನನ್ನು ಪೋಲಿಸರು ಬಂಧಿಸಿದ್ದಾರೆ. ಇಡೀ ಪ್ರಕರಣದಲ್ಲಿ ಮಕ್ಕಳ ಕಳ್ಳಸಾಗಣೆ ದಂಧೆಯ ಕೈವಾಡ ಇರುವ ಅನುಮಾನ ಭುಗಿಲೆದ್ದಿದೆ. ಈ ನಡುವೆ ಮಾರಾಟವಾದ ಮಗುವಿನ ರಕ್ಷಣೆ ಮಾಡಿಲ್ಲ ಎನ್ನಲಾಗುತ್ತಿದೆ. ಬಂಧಿತ ಮೂವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಮಗುವಿನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

Leave A Reply

Your email address will not be published.