OMG! ಈ ಒಂದು ಸಣ್ಣ ಕೀಟ ವ್ಯಕ್ತಿಯ ಜೀವನವನ್ನೇ ಹಾಳು ಮಾಡಿತು, ವ್ಯಕ್ತಿ ಬದುಕಿದರೂ, ದೇಹದ ಈ ಎರಡು ಭಾಗ ಕತ್ತರಿಸಬೇಕಾಯಿತು!

Latest news flea bite which led a man losing his hands and feet

ಪ್ರಪಂಚದಲ್ಲಿ ಅನೇಕ ಕೀಟಗಳು ಕಂಡು ಬರುತ್ತದೆ. ಕೆಲವೊಂದು ಕಚ್ಚಿದರಂತೂ ಕೊನೆಗೆ ದೇವರೇ ಕಾಪಾಡಬೇಕು ಎನ್ನುವ ಪರಿಸ್ಥಿತಿಯಲ್ಲಿಯವರೆಗೆ ತೆಗೆದುಕೊಂಡು ಹೋಗುತ್ತದೆ. ಇಂತಹ ಅಪಾಯಕಾರಿ ಕೀಟಗಳು ಸಾಮಾನ್ಯವಾಗಿ ಕಾಡು ಪ್ರದೇಶದಲ್ಲಿ ಮಾತ್ರ ಕಾಣ ಸಿಗುತ್ತದೆ. ಆದರೆ ಅನೇಕ ಬಾರಿ ಈ ಕೀಟಗಳು ಮಾನವ ಇರುವ ಜಾಗವನ್ನು ಕೂಡಾ ತಲುಪಿ ರೋಗ ಹರಡುತ್ತದೆ. ಕೀಟಗಳ ಕಡಿತದಿಂದ ಒಬ್ಬರ ಜೀವಕ್ಕೆ ಅಪಾಯವಾಗುವುದು ಬಹಳ ಅಪರೂಪವಾದರೂ, ಅಮೆರಿಕದ ಟೆಕ್ಸಾಸ್‌ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಇದೇ ರೀತಿಯದು ಸಂಭವಿಸಿದೆ. ಅದರ ಬಗ್ಗೆ ತಿಳಿದಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು.

ಒಂದು ಸಣ್ಣ ಕೀಟ ಆ ವ್ಯಕ್ತಿಯನ್ನು ಕಚ್ಚಿದ್ದು, ಆತ ಜೀವನ್ಮರಣದ ಹೋರಾಟದಲ್ಲಿ ಬದುಕುಳಿದರೂ, ಆ ಕೀಟದ ಕಡಿತದಿಂದ ಅವನಿಗೆ ಗಂಭೀರವಾದ ಕಾಯಿಲೆ ಬಂತು. ನಂತರ ಆತನ ಕೈ ಕಾಲುಗಳನ್ನು ಕತ್ತರಿಸಿ ತೆಗೆಯಬೇಕಾದಂತಹ ಪರಿಸ್ಥಿತಿ ಕೂಡಾ ನಿರ್ಮಾಣವಾಯಿತು.

ಕೀಟದಿಂದ ಕಚ್ಚಿಸಿಕೊಂಡ ವ್ಯಕ್ತಿಯ ಹೆಸರು ಮೈಕೆಲ್ ಕೊಹ್ಲ್ಹೋಫ್. ಮಾಧ್ಯಮ ವರದಿಗಳ ಪ್ರಕಾರ, ಆತನಿಗೆ ಟೈಫಸ್ ಎಂಬ ಕಾಯಿಲೆ ಇದೆ ಮತ್ತು ಈ ರೋಗವು ಸಣ್ಣ ಪರಾವಲಂಬಿ ಹುಳುಗಳ ಕಡಿತದಿಂದ ಮನುಷ್ಯರಿಗೆ ಹರಡುತ್ತದೆ. ಸಮಸ್ಯೆ ಎಂದರೆ ಈ ರೋಗ ಬೇಗ ಗುಣವಾಗುವುದಿಲ್ಲ ಮತ್ತು ಇದರ ಚಿಕಿತ್ಸೆಗೆ ಲಕ್ಷ ಕೋಟಿ ರೂ. ಬೇಕು. ಈಗ ಈ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತಿದೆಯಾದರೂ, ಶತಮಾನಗಳ ಹಿಂದೆ ಇದಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. 1812 ರಲ್ಲಿ, ಅನೇಕ ಫ್ರೆಂಚ್ ಸೈನಿಕರು ಈ ರೋಗವನ್ನು ಹೊಂದಿದ್ದರು ಮತ್ತು ಚಿಕಿತ್ಸೆಯ ಕೊರತೆಯಿಂದಾಗಿ ಅವರು ಪ್ರಾಣ ಕಳೆದುಕೊಂಡರು ಎಂದು ಹೇಳಲಾಗುತ್ತದೆ.

ಕೀಟ ಕಚ್ಚಿದ ನಂತರ ಮೈಕೆಲ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹಲವು ದಿನಗಳ ಚಿಕಿತ್ಸೆ, ಔಷಧಿ ನೀಡಿದ ನಂತರ ಆತನ ಕೈ, ಕಾಲುಗಳು ನಿಧಾನವಾಗಿ ಕರಗಲು ಶುರುವಾದವು. ಕೂಡಲೇ ವೈದ್ಯರು ಆತನ ಕಾಲು, ಮತ್ತು ಕೈಯನ್ನು ಕತ್ತರಿಸಲೇಬೇಕೆಂದು ಹೇಳಿದರು, ಇದರಿಂದ ಆತನ ಪ್ರಾಣ ಉಳಿಸಬಹುದು ಎಂಬ ಮಾತನ್ನು ಹೇಳಿದರು. ಇಲ್ಲಿಯವರೆಗೆ ಈ ಚಿಕಿತ್ಸೆಗೆ ರೂ.52 ಲಕ್ಷ ಹಣ ಖರ್ಚಾಗಿದೆ ಎಂದರೆ ನೀವು ನಂಬಲು ಕಷ್ಟ. ಈ ವ್ಯಕ್ತಿಯ ಕುಟುಂಬ ಇಷ್ಟು ಹಣ ಭರಿಸಲು ಸಾಧ್ಯವಿಲ್ಲದೆ, ದೇಣಿಗೆ ಮೂಲಕ ಹಣ ಸಂಗ್ರಹಿಸಿ ಮೈಕೆಲ್‌ಗೆ ಚಿಕಿತ್ಸೆ ನೀಡಿದ್ದರು.

Leave A Reply

Your email address will not be published.