Rules Changes From 1st August: ಜನಸಾಮಾನ್ಯರೇ ಗಮನಿಸಿ, ಆಗಸ್ಟ್‌ 1 ರಿಂದ ಯಾವೆಲ್ಲ ನಿಯಮ ನಿಮಗೆ ಹೊರೆಯಾಗಲಿದೆ? ಗ್ಯಾಸ್‌ ಬೆಲೆ ಸೇರಿ ಈ ಎಲ್ಲಾ ನಿಯಮಗಳು ಬದಲಾಗಲಿದೆ!!!

Latest news From August 1 all these rules including gas price will change

Rules Changes From 1st August: ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಹೈರಾಣಾಗಿ ಹೋಗಿದ್ದಾರೆ. ಒಂದೆಡೆ ವಿದ್ಯುತ್ ದರ ಹೆಚ್ಚಳ, ಹಾಲಿನ ದರ ಏರಿಕೆ, ಟೊಮ್ಯಾಟೋ, ಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ತಿಂಗಳ ಮೊದಲ ದಿನ ಇನ್ನೇನು ಶಾಕ್ ಕಾದಿದೆ ಎಂದು ಚಿಂತಿಸುವ ಸ್ಥಿತಿ ಎದುರಾಗಿದೆ.

ದೇಶಾದ್ಯಂತ ಸರ್ಕಾರವು ಪ್ರತಿ ತಿಂಗಳ ಮೊದಲ ದಿನದಂದು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ಪೆಟ್ರೋಲ್ ,ಡೀಸೆಲ್, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಮತ್ತು ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ಬದಲಾವಣೆ ಮಾಡಲಾಗುತ್ತದೆ. ಇದರ ನಡುವೆ ಜುಲೈ ತಿಂಗಳು ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಸ್ಟ್ 1, 2023 ರಿಂದ ದೇಶಾದ್ಯಂತ ಅನೇಕ ನಿಯಮಗಳು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ.

ಆಗಸ್ಟ್ 1 ರಿಂದ ಯಾವುದೆಲ್ಲ ನಿಯಮಗಳು ಬದಲಾಗಲಿವೆ:

#ಗ್ಯಾಸ್ ಸಿಲಿಂಡರ್
ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಈ ಪರಿಸ್ಥಿತಿಯಲ್ಲಿ ಆಗಸ್ಟ್ 1, 2023 ರಿಂದ, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಮತ್ತು ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ದೇಶಾದ್ಯಂತ ಬದಲಾಯಿಸುವ ಸಾಧ್ಯತೆ ಹೆಚ್ಚಿದೆ.

#ಪಿಎಂ ಕಿಸಾನ್ ಸಮ್ಮಾನ್ ಯೋಜನೆ
ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯ ನಿಯಮಗಳನ್ನು ಆಗಸ್ಟ್ 1, 2023 ರಿಂದ ಬದಲಾಯಿಸುವ ಸಾಧ್ಯತೆ ಇದೆ. ನೀವೇನಾದರೂ ಈ ಯೋಜನೆಯಡಿ,ಇನ್ನೂ ಕೂಡ ಇ-ಕೆವೈಸಿ (E -KYC) ಮಾಡಿಲ್ಲ ಎಂದಾದರೆ ಈ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಹಣ ಖಾತೆಗೆ ಜಮೆಯಾಗದು.

#ವಾಹನ ಚಾಲನೆಯ ನಿಯಮಗಳು
ಆಗಸ್ಟ್ 1, 2023ರ ನಂತರ ನೀವೇನಾದರೂ ಕುಡಿದು ವಾಹನ ಚಲಾಯಿಸಿ ತಗಲಾಕಿಕೊಂಡರೆ, ಕುಡಿದ ಮತ್ತಿನಲ್ಲಿ ಚಲಾಯಿಸಿದ್ದಕ್ಕಾಗಿ( Drink And Drive)ನೀವು ₹ 10,000 ದಂಡದ ಜೊತೆಗೆ 6 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನೀವು ವಿಮೆ ಇಲ್ಲದೆ ವಾಹನ ಚಲಾಯಿಸಿದರೆ, 5,000 ದಂಡವನ್ನು ಪಾವತಿ ಮಾಡಬೇಕಾಗಬಹುದು.ಇದರ ಜೊತೆಗೆ ಆಗಾಗ ಕುಡಿದು ಮತ್ತೆ ಮತ್ತೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ,ನಿಮಗೆ 15,000 ದಂಡದ ಜೊತೆಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಹೀಗಾಗಿ, ವಾಹನ ಚಾಲನೆ ವೇಳೆ ಎಚ್ಚರವಿರಲಿ.

# ಎಲೆಕ್ಟ್ರಿಕ್ ಕಾರುಗಳಿಗೆ ರಿಯಾಯಿತಿ
ಕೆಲವು ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ಸೈಕಲ್ಗಳ ಖರೀದಿಗೆ ಆಗಸ್ಟ್ 1, 2023 ರಿಂದ ಸರ್ಕಾರ ಸಬ್ಸಿಡಿ ನೀಡುವ ಸಾಧ್ಯತೆ ಇದೆ. ಒಂದು ವೇಳೆ, ಸಬ್ಸಿಡಿ ಸಿಕ್ಕರೆ ಎಲೆಕ್ಟ್ರಿಕ್ ಕಾರುಗಳು ಮತ್ತು ಮೋಟಾರ್ ಸೈಕಲ್ ಖರೀದಿ ಸುಲಭವಾಗಲಿದೆ.

# ರೈಲ್ವೆ ಟಿಕೆಟ್ ನಿಯಮ
ಆಗಸ್ಟ್ 1, 2023 ರಿಂದ ನೀವು ರೈಲು ಟಿಕೆಟ್ ಕಾಯ್ದಿರಿಸಿ ನಿಗದಿತ ಸಮಯಕ್ಕಿಂತ 10 ನಿಮಿಷಗಳ ಮುಂಚಿತವಾಗಿ ನೀವು ಬುಕ್ ಮಾಡಿದ ನಿಮ್ಮ ಆಸನವನ್ನು ತಲುಪದಿದ್ದರೆ, ಈ ಆಸನ ಮತ್ತೊಬ್ಬರ ಪಾಲಾಗುವ ಸಂಭವವಿದೆ.

#ಬ್ಯಾಂಕ್ ಖಾತೆ
ನೀವೇನಾದರೂ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಆಗಸ್ಟ್ 1, 2023 ರಿಂದ ಹಣದ ವಹಿವಾಟಿನ ನಿಯಮಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಬ್ಯಾಂಕ್ ಆಫ್ ಬರೋಡಾ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಆರಂಭಿಸುವ ಸಂಭವವಿದೆ.

Leave A Reply

Your email address will not be published.