Karnataka Rain: ಕರಾವಳಿಗರೇ ಗಮನಿಸಿ; ಜುಲೈ 28 ರವರೆಗೆ ಮಳೆರಾಯನ ಅಬ್ಬರವಿರೋ ಸಾಧ್ಯತೆ! ಸಮುದ್ರ ತಟದಲ್ಲಿರುವವರೇ ಎಚ್ಚರ!

latest news rain news Karnataka Rain Weather Report

Karnataka Rain: ರಾಜ್ಯದಲ್ಲಿ ಮಳೆ(Karnataka Rain) ಮತ್ತೆ ತೀವ್ರಗೊಂಡಿದ್ದು, ಕರಾವಳಿ ಕರ್ನಾಟಕದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜುಲೈ 23 ರಿಂದ ಜುಲೈ 28ರ ವರೆಗೆ ಮಳೆಯ ಆರ್ಭಟ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 24 ಮತ್ತು 25 ರಂದ ಭಾರೀ ಮಳೆಯಾಗುವ ಸಂಭವವಿದೆ. ಈ ನಡುವೆ ಕರಾವಳಿಯಾದ್ಯಂತ ಜುಲೈ 23 ರಿಂದ ಜುಲೈ 28 ರವರೆಗೆ ಬಿರುಗಾಳಿಯ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 40 ರಿಂದ 50 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ (IMD)ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದವರೆಗೆ ಎಡೆಬಿಡದೆ ಸುರಿದ ಮಳೆ ವಿರಾಮ ತೆಗೆದುಕೊಂಡ ಬಳಿಕ ಇದೀಗ ಮತ್ತೆ ವರುಣನ ಆರ್ಭಟ ಜೋರಾಗಿದೆ. ಕಳೆದೆರಡು ದಿನಗಳಿಂದ ವರುಣನ ಅಬ್ಬರ ಜೋರಾಗಿದ್ದು, ಕೆರೆ, ಹಳ್ಳಗಳು ತುಂಬಿದ್ದು, ಕೆಲವೆಡೆ ರಸ್ತೆಗಳು ಮಳೆಯ ನೀರಿನಿಂದ ಜಲಾವೃತಗೊಂಡಿದೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಅಡಚಣೆ ಕೂಡ ಉಂಟಾಗಿದೆ. ಮಂಗಳೂರಿನಿಂದ ಕಾರವಾರದವರೆಗೆ ಕಡಲಿನ ಅಲೆಗಳ ಅಬ್ಬರ ಹೆಚ್ಚಿರಲಿದ್ದು, 3.5 ಯಿಂದ 4 ಮೀಟರ್‌ ಎತ್ತರದವರೆಗೆ ಅಲೆಗಳು ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.ಈ ಹಿನ್ನೆಲೆ ಮೀನುಗಾರರು, ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

Leave A Reply

Your email address will not be published.