Canara Bank ATM ನಲ್ಲಿ ಗ್ಯಾಸ್ ಕಟ್ಟರ್ ಬಳಸಿ ಲಕ್ಷಗಟ್ಟಲೇ ಹಣ ದೋಚಿದ ಕಳ್ಳರು!

Latest news Thieves stole money from Canara Bank ATM using gas cutter

Hanchala Gate in Bangarpet: ಹಣ ಕೊಳ್ಳೆ ಕೊಡೆಯಲು ಖದೀಮರು ನಾನಾ ತಂತ್ರಗಳನ್ನು ಬಳಕೆ ಮಾಡುವುದು ಸಹಜ. ಅದರಲ್ಲಿ ಬ್ಯಾಂಕಿಗೆ ದಾಳಿ ಮಾಡುವುದು, ದೇವಾಲಯದ ಹುಂಡಿಯ ಹಣ ಎಗರಿಸುವುದು,ಇಲ್ಲವೇ ಎಟಿಎಂ ಹಣ ಲೂಟಿ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ ಬಳಿ ಎಟಿಎಂ ನಲ್ಲಿ ಖದೀಮರು ಭಾರೀ ಮೊತ್ತದ ಹಣ ಲೂಟಿ ಮಾಡಿರುವ ಘಟನೆ ವರದಿಯಾಗಿದೆ.

ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ (Hanchala Gate in Bangarpet) ಬಳಿ ಎಟಿಎಂ ನಲ್ಲಿ ಗ್ಯಾಸ್ ಕಟ್ಟರ್ ಉಪಯೋಗಿಸಿ ಎಟಿಎಂನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಕಳ್ಳತನ (dacoity) ಮಾಡಿರುವ ಘಟನೆ ನಡೆದಿದೆ.

ಹಂಚಾಳಗೇಟ್ ಸಮೀಪದ ಕೆನರಾ ಬ್ಯಾಂಕ್ (Canara Bank) ಗೆ ಸೇರಿದ ATM ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಲೂಟಿ ಮಾಡಿ ಖದೀಮರು ಪರಾರಿಯಾಗಿದ್ದು, ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಹಾಗೂ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.