Uttar Pradesh: ಕಾಲೇಜಿನಲ್ಲೇ ವಿದ್ಯಾರ್ಥಿಗಳ ಕುಚುಕು, ಕುಚುಕು; ಇದೇನಾ ಸಭ್ಯತೆ? ವೀಡಿಯೋ ವೈರಲ್

Latest news Uttar Pradesh Obscene videos of students in govt medical college

ಲಖನೌ : ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಒಳ್ಳೆಯ ನಡೆ, ನುಡಿ ನಡವಳಿಕೆ ಕೂಡ ಕಾಲೇಜಿನ ಘನತೆಯನ್ನು ಎತ್ತಿ ಹಿಡಿಯುತ್ತದೆ. ಅದೇ ವಿದ್ಯಾರ್ಥಿ ತಪ್ಪು ಮಾಡಿದಾಗ ಕಾಲೇಜಿನ ಮರ್ಯಾದೆ ಕೂಡ ಬೀದಿ ಪಾಲಾಗುತ್ತದೆ. ಇದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ (Uttar Pradesh)ಶಹಜಹಾನ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಎಂಬುದನ್ನು ಮರೆತು ಚುಂಬಿಸುವ ಜೊತೆಗೆ ಅಶ್ಲೀಲ ಕೃತ್ಯದಲ್ಲಿ ಭಾಗಿಯಾಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

ಮೆಡಿಕಲ್ ಕಾಲೇಜಿನ(Medical College )ವಿದ್ಯಾರ್ಥಿಗಳು ಕಾಲೇಜಿನಲ್ಲೇ ರೋಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಕಾಲೇಜು ಅನ್ನೋದನ್ನ ಮರೆತ ವಿದ್ಯಾರ್ಥಿಗಳು ತರಗತಿಯೊಳಗೆ ಅಪ್ಪಿರುವ ಜೊತೆಗೆ ಚುಂಬಿಸುವ ಹಾಗೆಯೇ ಬೆಡ್ ರೂಮ್ ರೋಮ್ಯಾನ್ಸ್ (Romance )ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಚಿತ್ರಣಗಳು ಎಲ್ಲೆಡೆ ವೈರಲ್ ಆಗಿ ವಿದ್ಯಾರ್ಥಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣ ಗಂಭೀರ ಸ್ವರೂಪ ಪಡೆಯು ವುದನ್ನರಿತ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ತನಿಖೆಗೆ ಆದೇಶ ನೀಡಿದ್ದಾರೆ .

ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಅಶ್ಲೀಲ ಕೃತ್ಯ ಎಸಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ (Viral Video)ಅರೆವೈದ್ಯಕೀಯ ವಿದ್ಯಾರ್ಥಿಗಳ ಗುಂಪು ಸಭಾಂಗಣದಲ್ಲಿ ಕುಳಿತಿರುವ ದೃಶ್ಯಗಳು ಸೆರೆಯಾಗಿದೆ. ಅವರಲ್ಲಿ ಒಬ್ಬರು ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಅಶ್ಲೀಲ ಕೃತ್ಯಗಳನ್ನು ಮಾಡುತ್ತಿರುವುದು ಕೂಡ ಕಾಣುತ್ತಿದೆ.ವೈದ್ಯಕೀಯ ಕಾಲೇಜು ಪ್ರಾಂಶುಪಾಲರು ಕಾಲೇಜಿನ ಘನತೆಗೆ ಧಕ್ಕೆ ತರುವ ಜೊತೆಗೆ ಶಿಸ್ತುಪಾಲನೆ ಮಾಡದ ವಿದ್ಯಾರ್ಥಿಗಳ( Students)ಪತ್ತೆಗೆ ಆದೇಶ ನೀಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ತಕ್ಕ ಶಿಕ್ಷೆ ವಿಧಿಸುವ ಕುರಿತು ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ರಾಜೇಶ್ ಕುಮಾರ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.