ಬಸ್‌ ಕಂಡಕ್ಟರ್‌- ಪ್ರಯಾಣಿಕನ ಮಧ್ಯೆ ವಾಗ್ವಾದ, ಕಪಾಳಮೋಕ್ಷ!!! ವೀಡಿಯೋ ವೈರಲ್‌

Latest news viral video Argument between bus conductor and passenger in Bengaluru

Bengaluru : ಬೆಂಗಳೂರು (Bengaluru)ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ವಾಗ್ವಾದ ನಡೆದು ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರು (Bengaluru)ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ಸಿನಲ್ಲಿ ಪ್ರಯಾಣಿಕನೊಬ್ಬ ಟಿಕೆಟ್ ಶುಲ್ಕ ನೀಡದೆ ಬಸ್ ಕಂಡಕ್ಟರ್ ಜೊತೆಗೆ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಇಬ್ಬರ ನಡುವೆ ವಿಡಿಯೋದಲ್ಲಿ ಕಾಣಿಸುವಂತೆ ಹೊಡೆದಾಟ ನಡೆದಿದೆ.ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.

ಟಿಕೆಟ್ ಶುಲ್ಕ(Bus Ticket)ನೀಡದ ಪ್ರಯಾಣಿಕ ಉತ್ತರ ಪ್ರದೇಶದ ವಲಸಿಗ ಎನ್ನಲಾಗಿದೆ. ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಹೊಡೆದಾಟ ನಡೆದಾಗ ಇಬ್ಬರು ಮಹಿಳೆಯರು ಇವರನ್ನು ತಡೆಯಲು ಮುಂದಾದರು ಕೂಡ ಏನು ಪ್ರಯೋಜನವಾಗಿಲ್ಲ. ಇಬ್ಬರ ನಡುವೆ ಜಗಳ ತಾರಕಕ್ಕೇರುವುದನ್ನು ಗಮನಿಸಿದ ಚಾಲಕ ಇವರಿಬ್ಬರ ನಡುವೆ ಮಧ್ಯಪ್ರವೇಶಿಸಿ ಪ್ರಯಾಣಿಕನನ್ನು ತರಾಟೆಗೆ ತೆಗೆದುಕೊಂಡು ಬಸ್ ಶುಲ್ಕ ಪಾವತಿಸುವಂತೆ ಸೂಚಿಸಿದ್ದಾರೆ.

ಬಸ್ ಚಾಲಕ ಮತ್ತು ಕಂಡಕ್ಟರ್ ‘ಪ್ರಯಾಣಿಕನನ್ನು ಠಾಣೆಗೆ ಕರೆದೊಯ್ಯುವ ಕುರಿತು ಮಾತನಾಡುತ್ತಿರುವುದು ವೀಡಿಯೋದಲ್ಲಿ ಕೇಳುತ್ತದೆ. ಈ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರ ಟ್ವೀಟ್ ಅನ್ನು ಗಮನಿಸಿದ ನಗರ ಪೊಲೀಸರು, ರೀಟ್ವೀಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋದ ಘಟನೆ ಯಾವಾಗ ನಡೆದದ್ದು? ಎಲ್ಲಿ ನಡೆದಿದೆ ಎಂಬ ವಿಚಾರ ಇನ್ನೂ ಬಯಲಾಗಿಲ್ಲ. ಹೀಗಾಗಿ, ಪೊಲೀಸರು ಘಟನೆ ನಡೆದ ನಿಖರವಾದ ಪ್ರದೇಶದ ಸ್ಥಳದ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ

Leave A Reply

Your email address will not be published.