Gruhajyothi Scheme: ಗೃಹ ಜ್ಯೋತಿ ಯೋಜನೆಯ ಈ ಕೆಲಸ ನೀವು ಇಂದೇ ಮಾಡಿಬಿಡಿ, ಇಲ್ಲದಿದ್ದರೆ, ಆಗಸ್ಟ್ ತಿಂಗಳಲ್ಲಿ ಝೀರೋ ಬ್ಯಾಲೆನ್ಸ್ ಬಿಲ್ ಬರೋದು ಡೌಟ್!

Gruha Jyoti Scheme You need to register first to get zero electricity bill for the month of August

Gruha Jyoti Scheme: ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದು ಜನರಿಗೆ ನೀಡಿದ್ದ ಭರವಸೆ ಅನುಸಾರ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ.ರಾಜ್ಯ ಸರ್ಕಾರದ ( Karnataka Government ) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ ( Gruha Jyoti Scheme ) ಕೂಡ ಒಂದಾಗಿದ್ದು, ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಅನುಸಾರ ‘ಗೃಹಜ್ಯೋತಿ’ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದ್ದು, ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್‌ಗಳ ತನಕ ಉಚಿತ ವಿದ್ಯುತ್ ನೀಡುವ ಈ ಯೋಜನೆಯ ಪ್ರಯೋಜನ ನಿಮಗೆ ಸಿಗಬೇಕು ಎಂದಾದರೆ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಇದೀಗ, ಸರ್ಕಾರ ಯೋಜನೆ ನೋಂದಣಿಗೆ ಮತ್ತೊಂದು ಅಪ್‌ಡೇಟ್‌ ನೀಡಿದೆ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಬೇಕಾದರೆ ನೀವು ಇಂದೇ ನೋಂದಾವಣಿ ಮಾಡಿಸಿಕೊಳ್ಳಬೇಕು.

ಆಗಸ್ಟ್ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕು ಎಂದಾದರೆ ನೀವು ಮೊದಲು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ನೋಂದಣಿಗೆ ಜುಲೈ 26 ಅಥವಾ 27 ರ ಒಳಗೆ ಅಂತಿಮ ಗಡುವು ನೀಡಲಾಗಿದೆ. ಈ ದಿನಾಂಕದೊಳಗೆ ನೀವು ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರಲಿದ್ದು, ಹೀಗಾಗಿ, ಜುಲೈ 27 ರೊಳಗೆ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಇತ್ತೀಚೆಗಷ್ಟೇ ಮಾಹಿತಿ ನೀಡಿದ್ದಾರೆ. ಹೀಗಾಗಿ, ಇಂದು ನೋಂದಾಯಿಸಿಕೊಂಡವರಿಗೆ ಮಾತ್ರವೇ ಆಗಸ್ಟ್ ತಿಂಗಳ ಬಿಲ್ ಮೊತ್ತ ಶೂನ್ಯ ಬರಲಿದೆ.

ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭ ಗ್ರಾಹಕರು ಹೆಚ್ಚು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅವಶ್ಯಕ. ರಾಜ್ಯದಲ್ಲಿ ಇದೀಗ ಸೈಬರ್ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ನಕಲಿ ಆ್ಯಪ್ ಗಳ ಮುಖಾಂತರ ನಿಮ್ಮ ಖಾಸಗಿ ಮಾಹಿತಿ ಕಳ್ಳತನ ಮಾಡಿ ನಿಮ್ಮ ಖಾತೆಯ ಹಣವನ್ನು ಖೋತಾ ಮಾಡಿದರು ಅಚ್ಚರಿಯಿಲ್ಲ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಗೃಹಜ್ಯೋತಿ ಯೋಜನೆಗೆ ಯಾವುದೇ ಅಂತಿಮ ಗಡುವು ನಿಗದಿಪಡಿಸಿಲ್ಲ. ಹೀಗಿದ್ದರೂ ಕೂಡ ನೀವು ನೋಂದಾವಣಿ ಈಗಲೇ ಮಾಡಿಕೊಂಡರೆ ಬರುವ ತಿಂಗಳ ಬಿಲ್ ಪಾವತಿ ಮಾಡಬೇಕಾದ ಅವಶ್ಯಕತೆ ಎದುರಾಗದು.ಇಲ್ಲದಿದ್ದರೆ, ನೀವು ಎಷ್ಟು ತಡವಾಗಿ ನೋಂದಾವಣಿ ಮಾಡುತ್ತೀರೋ ಅಲ್ಲಿಯವರೆಗೆ ನಿಮಗೆ ಬಿಲ್ ಬರಲಿದ್ದು,ಅದನ್ನು ಪಾವತಿ ಮಾಡಬೇಕಾಗುತ್ತದೆ.

Leave A Reply

Your email address will not be published.