ಮಂಗಳೂರು: ಮುಡಿಪು ಜಂಕ್ಷನ್‌ನಲ್ಲಿ ಕಾರು-ಬಸ್ಸು ಮಧ್ಯೆ ಅಪಘಾತ! ಕಾರು ಚಾಲಕ ಪವಾಡಸದೃಶ ಪಾರು!

Latest Dakshina Kannada news ullal car bus accident in Mudipu junction

Ullal: ನಿನ್ನೆ ರಾತ್ರಿ ಮುಡಿಪು ಜಂಕ್ಷನ್ನಿನಲ್ಲಿ (Mudipu junction, Ullal) ಬಸ್‌ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಕಾರು ಚಾಲಕ ಈ ಘಟನೆಯಲ್ಲಿ ಯಾವುದೇ ಗಂಭೀರ ಅಪಾಯಗಳಿಲ್ಲದೆ ಪಾರಾಗಿದ್ದಾರೆ.

ಎನ್‌ ಎಸ್‌ ಟ್ರಾವೆಲ್ಸ್‌ ಎಂಬ ಬಸ್ಸು ಮಂಗಳೂರಿನಿಂದ ಬಿ ಸಿ ರೋಡಿನತ್ತ ಸಂಚರಿಸುತ್ತಿದ್ದಾಗ, ಮುಡಿಪು ಜಂಕ್ಷನ್ನಿನಲ್ಲಿ ತಿರುಗುವ ಸಂದರ್ಭದಲ್ಲಿ ಭಾರತಿ ಶಾಲೆ ಕಡೆಯಿಂದ ಬಂದ ಝೆನ್‌ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರು ಸೀದಾ ಬಸ್ಸಿನ ಮುಂಭಾಗಕ್ಕೆ ನುಗ್ಗಿದ್ದು, ಕಾರು ಚಾಲಕ ಪಾರಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: World IVF Day 2023: ಮಹಿಳೆಯರೇ ನೀವೇನಾದರೂ ಐವಿಎಫ್‌ ಚಿಕಿತ್ಸೆಗೆ ಒಳಗಾಗಲು ಬಯಸುತ್ತೀರಾ? ಹಾಗಾದರೆ ಈ ತಪ್ಪು ಮಾಡಬೇಡಿ!

Leave A Reply

Your email address will not be published.