Best Mileage Car: ಒಮ್ಮೆ ಚಾರ್ಜ್ ಮಾಡಿದ್ರೆ, 1000 Km ನಾನ್ ಸ್ಟಾಪ್ ನಾಗಾಲೋಟ ಓಡೋ ಕಾರು, ಬುಕ್ಕಿಂಗ್’ಗೆ ನೂಕು ನುಗ್ಗಾಟ !

latest news Best Mileage Car technology car can run 1000 Km once charged

MG Comet EV: ಬ್ರಿಟನ್‌ ಮೂಲದ ಕಾರು ಕಂಪನಿ ಎಂಜಿ ಮೋಟಾರ್‌ ಇಂಡಿಯಾ (MG Motor India) ಏಪ್ರಿಲ್‌ 2023 ರಲ್ಲಿ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು ಎಂಜಿ ಕಾಮೆಟ್‌ ಇವಿ (MG Comet EV)ಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಇದೀಗ ಎಂಜಿ ಕಾಮೆಟ್‌ ಇವಿಯು ಒಟ್ಟು 3 ರೂಪಾಂತರಗಳಲ್ಲಿ ಲಭ್ಯವಿದ್ದು, ಮಾರಾಟದ ವಿಷಯದಲ್ಲಿ, MG ಕಾಮೆಟ್ MG ಶ್ರೇಣಿಯ ಎಲ್ಲಾ ಕಾರುಗಳಲ್ಲಿ ಎರಡನೇ ಸ್ಥಾನವನ್ನು ಬಾಚಿಕೊಂಡಿದೆ.

ಕಾಮೆಟ್ EV ಯಲ್ಲಿ ಕಂಪನಿಯು ಮರುಖರೀದಿ (Buyback) ಕೊಡುಗೆಯನ್ನು ಕೂಡ ನೀಡಿದ್ದು, ಮಾಹಿತಿಯ ಪ್ರಕಾರ, ಖರೀದಿ ಸಮಯದಲ್ಲಿ buyback ಆಯ್ಕೆಯನ್ನು ಪಡೆದುಕೊಂಡರೆ, ಕಂಪನಿಯು ಮೂರು ವರ್ಷಗಳ ಬಳಿಕ ವೆಚ್ಚದ ಶೇ.60ರಷ್ಟನ್ನು ಹಿಂದಿರುಗಿಸುವ ವಿಶೇಷ ಆಫರ್ ಕೂಡ ನೀಡಿದೆ. ಈ ಬೆಲೆಯನ್ನು ಕಾರಿನ ಎಕ್ಸ್ ಶೋ ರೂಂ ಬೆಲೆಯ ಮೇಲೆ ಮರುಪಾವತಿ ಮಾಡಲಾಗುತ್ತದೆ. ಇದರಿಂದ ಗ್ರಾಹಕರು ಮತ್ತೊಂದು MG ಕಾರಿನೊಂದಿಗೆ ಅಪ್‌ಗ್ರೇಡ್ ಮಾಡಲು ಅವಕಾಶ ಸಿಗಲಿದೆ.

ಎಂಜಿ ಕಾಮೆಟ್‌ ಎಲೆಕ್ಟ್ರಿಕ್ ಕಾರು ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಇವುಗಳನ್ನು ಪೇಸ್, ಪ್ಲೇ ಮತ್ತು ಪ್ಲಶ್ ಎಂದು ಹೆಸರಿಸಲಾಗಿದೆ.ದೇಶದ ಅತ್ಯಂತ ಚಿಕ್ಕ ಕಾರುಗಳಲ್ಲಿ ಒಂದಾಗಿರುವ ಎಂಜಿ ಕಾಮೆಟ್ ಇವಿಯ ಒಟ್ಟು ಉದ್ದ 2974 ಮಿಮೀ. ಆಗಿದ್ದು,ಅದೇ ರೀತಿ ಅಗಲ 1505 ಮಿಮೀ, ಮತ್ತು ಎತ್ತರ 1640 ಮಿಮೀ. ಕಾರಿನ ವೀಲ್ ಬೇಸ್ 2010 ಎಂಎಂ ಮತ್ತು ಅದರ ಟರ್ನಿಂಗ್ ತ್ರಿಜ್ಯ 4.2 ಮೀಟರ್ ನಷ್ಟಿದೆ. ಈ ಕಾರನ್ನು ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 1000 Km ನಾನ್ ಸ್ಟಾಪ್ ನಾಗಾಲೋಟದವರೆಗು ಕಾರು ಓಡುತ್ತೆ. ಹೀಗಾಗಿಯೇ, ಈ ಕಾರಿನ ಖರೀದಿಗೆ ಜನ ಕಿಕ್ಕಿರಿದು ನಿಲ್ಲುತ್ತಿದ್ದು ಬುಕ್ಕಿಂಗ್’ಗೆ ನೂಕು ನುಗ್ಗಾಟ ಕೂಡ ಆಗುತ್ತಿದೆ ಎನ್ನಲಾಗುತ್ತಿದೆ.

ಕಂಪನಿಯು ಕಾರಿನಲ್ಲಿ 17.3 Kwh ಮೋಟಾರ್ ಅನ್ನು ಒದಗಿಸಿದ್ದು, ಇದು ಚಾರ್ಜ್ ಮಾಡಲು ಸುಮಾರು 7 ಗಂಟೆ ಬೇಕಾಗುತ್ತದೆ. ಕಂಪನಿಯ ಪ್ರಕಾರ, ಪೂರ್ಣ ಚಾರ್ಜ್ ಮಾಡಿದ ನಂತರ ಇದನ್ನು 230 ಕಿಲೋಮೀಟರ್ ವರೆಗೆ ಓಡಿಸಬಹುದು.ಇದರ ಪ್ರಭಾವಶಾಲಿ ವೇಗವರ್ಧನೆಯ ಜೊತೆಗೆ MG ಕಾಮೆಟ್ ಗಂಟೆಗೆ ಕನಿಷ್ಠ 100 ಕಿಲೋಮೀಟರ್ ವೇಗವನ್ನು ಸಾಧಿಸುತ್ತದೆ. ಇದಲ್ಲದೆ, ಕಾಮೆಟ್‌ನ ನಿರ್ವಹಣಾ ವೆಚ್ಚವು ಪ್ರತಿ ಸಾವಿರ ಕಿಲೋಮೀಟರ್‌ಗಳಿಗೆ ರೂ 519 ಎಂದು ಅಂದಾಜು ಮಾಡಲಾಗಿದೆ. MG ಕಾಮೆಟ್ EV ಶಕ್ತಿಯು 17.3 kWh ಬ್ಯಾಟರಿಯನ್ನು ಹೊಂದಿದೆ.ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಒಳಗೊಂಡಿದೆ.

MG ಮೋಟಾರ್ಸ್ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬಲವಾದ ಮತ್ತು ವೈಶಿಷ್ಟ್ಯ-ಸಮೃದ್ಧವಾದ ಎಲೆಕ್ಟ್ರಿಕ್ ವಾಹನವನ್ನು ಒದಗಿಸುವ ಗುರಿಯನ್ನು ಹೊಂದಿದೆ. MG ಕಾಮೆಟ್ ಮೂರು ರೂಪಾಂತರಗಳನ್ನು ಹೊಂದಿದ್ದು , ಇವುಗಳ ಬೆಲೆಯನ್ನು ಗಮನಿಸಿದರೆ, ಫೇಸ್ ವೇರಿಯಂಟ್ ಎಂದು ಕರೆಯಲ್ಪಡುವ ಬೇಸ್ ವೆರಿಯಂಟ್ 7.98 ಲಕ್ಷ ಎಕ್ಸ್ ಶೋರೂಂ ಬೆಲೆ ಒಳಗೊಂಡಿದೆ. ಪ್ಲೇ ವೆರಿಯಂಟ್ ಬೆಲೆ 9.28 ಲಕ್ಷ ರೂಪಾಯಿಗಳಾಗಿದ್ದು, ಟಾಪ್ ವೇರಿಯಂಟ್ ಲೈನ್ ಪ್ಲಸ್ ಟ್ರಿಮ್ 9.98 ಲಕ್ಷ ಎಕ್ಸ್ ಶೋರೂಂನಲ್ಲಿ ಲಭ್ಯವಿದೆ. ಆರಂಭಿಕ 5000 ಬುಕಿಂಗ್‌ಗಳಿಗೆ ಈ ಬೆಲೆಗಳು ಸ್ಥಿರವಾಗಿರಲಿದೆ.

ಎಂಜಿಯ ಹೊಸ ಕಾಮೆಟ್ ಎಲೆಕ್ಟ್ರಿಕ್ ಕಾರಿನಲ್ಲಿ ಅನೇಕ ವೈಶಿಷ್ಟ್ಯಗಳಿದ್ದು, ಕಾರಿನ ಹೊರಭಾಗದಲ್ಲಿ ಸಂಪರ್ಕಿತ LED DRL, LED ಹೆಡ್‌ಲೈಟ್‌ಗಳು, LED ಟೈಲ್‌ಲೈಟ್‌ಗಳನ್ನು ಒದಗಿಸಲಾಗಿದೆ. ಇದರ ಜೊತೆಗೆ ಒಳಭಾಗವು ಆಪಲ್ ಐಪಾಡ್ ಪ್ರೇರಿತ ಸ್ಟೀರಿಂಗ್ ಬಟನ್‌ಗಳು, 10.25-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಪೀಕರ್‌ಗಳು, ಆಟೋ ಟ್ರಾನ್ಸ್‌ಮಿಷನ್‌, ಡ್ಯುಯಲ್ ಕಲರ್ ಇಂಟೀರಿಯರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋವನ್ನು ಒಳಗೊಂಡಿದೆ.

ಕಾರಿನ ಸುರಕ್ಷತೆಯ ಬಗ್ಗೆ ಗಮನ ಹರಿಸಿದರೆ, ಇದರಲ್ಲಿ ಏರ್ ಬ್ಯಾಗ್, ಟಿಪಿಎಂಎಸ್, ಎಬಿಎಸ್, ಇಬಿಡಿ ಮುಂತಾದ ಫೀಚರ್‌ಗಳನ್ನು ಒದಗಿಸಲಾಗಿದೆ. ಇದರ ಜೊತೆಗೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್ ಆಂಕಾರೇಜ್, ಮೂರು ಪಾಯಿಂಟ್ ಸೀಟ್‌ಬೆಲ್ಟ್ ಅನ್ನು ಕೂಡ ನೀಡಲಾಗಿದೆ. ಕಾರಿನ ಇನ್ನಿತರ ವೈಶಿಷ್ಟ್ಯತೆ ಗಮನಿಸಿದರೆ, ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ. ಇದರ USB ಪೋರ್ಟ್‌ 55 ಕ್ಕೂ ಹೆಚ್ಚು ಸಂಪರ್ಕಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. MG ಕಾಮೆಂಟ್ ಟಿವಿ ನೂರಕ್ಕೂ ಹೆಚ್ಚು ಧ್ವನಿ ಆಜ್ಞೆಗಳನ್ನು ಮತ್ತು iSmart ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ವಿಶಿಷ್ಟ ವಿಶೇಷತೆಯಿಂದ ಜನರು ಈ ಖರೀದಿ ಮಾಡಲು ಮುಂದಾಗಿದ್ದು, ಬುಕ್ಕಿಂಗ್ ನಲ್ಲಂತೂ ಜನರು ಕಿಕ್ಕಿರಿದು ನಿಲ್ಲುತ್ತಿದ್ದಾರೆ.

Leave A Reply

Your email address will not be published.