Ration Card Holder: ಇಂಥವರಿಗೆ ಸಿಗಲ್ಲ ರೇಶನ್ ಕಾರ್ಡ್, ಇದ್ರೂ ಯಾವುದೇ ಕ್ಷಣ ರದ್ದಾಗಬಹುದು – ಸರ್ಕಾರದಿಂದ ಮಹತ್ವದ ಆದೇಶ

Latest news BPL Ration Card important news about Ration Card

Ration Card Holder: ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಅನ್ನಭಾಗ್ಯ ಯೋಜನೆಯಡಿಯಲ್ಲಿ(Annabhagya Scheme) ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿಯ ಹಾಗೆ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ. ಆದರೆ, ಈ ಪಡಿತರ ವಿತರಣೆಯ(Ration Card)ಪ್ರಯೋಜನ ಪಡೆಯಲು ಚೀಟಿದಾರರು ಕೆಲವೊಂದು ಕೆಲಸಗಳನ್ನು ತುರ್ತಾಗಿ ಮಾಡಲೇಬೇಕಾಗುತ್ತದೆ.

ರಾಜ್ಯ ಕಾಂಗ್ರೆಸ್(Congress Government) ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅತ್ಯವಶ್ಯಕ. ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಹೀಗೆ ಸರ್ಕಾರದ ಗ್ಯಾರಂಟೀ ಯೋಜನೆಗಳ ಪ್ರಯೋಜನ ಪಡೆಯಲು ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ,ಅದೇ ರೀತಿ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್‌ ಲಿಂಕ್ (Aadhar Card Linked to bank Account) ಆಗಿರಬೇಕಾಗುತ್ತದೆ.

ಭಾರತದ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹ ಜನರಿಗೆ ಪಡಿತರ ಚೀಟಿಗಳನ್ನು ನೀಡುತ್ತದೆ. ಅನೇಕ ಜನರಿಗೆ, ಪಡಿತರ ಚೀಟಿಗಳು ಗುರುತಿನ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಬಳಕೆದಾರರು ಅನೇಕ ಪಡಿತರ ಚೀಟಿಗಳನ್ನು ಹೊಂದಿರುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಪಡಿತರ ಮತ್ತು ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ. ಅನರ್ಹ ಜನರ ಆದಾಯದ ಮಿತಿ ಮೀರಿದ್ದರು ಕೂಡ ಪಡಿತರದ ಪ್ರಯೋಜನ ಪಡೆಯಿತ್ತಿರುವವರ ವಿರುದ್ದ ಮೇಲ್ವಿಚಾರಣೆ ಮಾಡಲು ಇದು ಅಧಿಕಾರಿಗಳಿಗೆ ನೆರವಾಗುತ್ತದೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ಕೆಲವರು ನಕಲಿ ದಾಖಲೆಗಳನ್ನು ನೀಡಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ (BPL Card Application) ಸಲ್ಲಿಸುತ್ತಿದ್ದಾರೆ. ಈ ರೀತಿ ಮೋಸ ಮಾಡುವವರ ಪತ್ತೆಗಾಗಿ ಶೀಘ್ರದಲ್ಲೇ ಹೊಸ ಮಾರ್ಗಸೂಚಿ (New Rules) ಬಿಡುಗಡೆ ಮಾಡಲಾಗುತ್ತದೆ. ಅಂಥವರ ಕಾರ್ಡನ್ನು ರದ್ದು ಮಾಡಲಾಗುತ್ತದೆ.

ರಾಜ್ಯದಲ್ಲಿ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಆರಂಭವಾಗಬಹುದು. ಆಗ ಹೊಸ ನಿಯಮಗಳು ಜಾರಿಗೆ ಬಂದರೆ, ಕೆಲವರ ರೇಷನ್ ಕಾರ್ಡ್ ದಂಡದ ಜೊತೆಗೆ ರದ್ದಾಗುವ (Ration Card cancellation)ಸಾಧ್ಯತೆ ದಟ್ಟವಾಗಿದೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಸರ್ಕಾರದ ಯೋಜನೆಗಳ ಸೌಲಭ್ಯ ದೊರೆಯಲಿದೆ. ಈ ನಡುವೆ, ಯೋಜನೆಯ ಲಾಭ ಪಡೆಯುವ ನಿಟ್ಟಿನಲ್ಲಿ ಅನೇಕ ಮಂದಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ.

ಸರ್ಕಾರ ಹೊರತರಬಹುದಾದ ಹೊಸ ಮಾರ್ಗಸೂಚಿ ಅನುಸಾರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಪ್ರಯೋಜನಗಳ ದುರುಪಯೋಗ ಮಾಡಿಸಿಕೊಂಡರೆ ರೇಷನ್ ಕಾರ್ಡ್ ನಿಷ್ಕ್ರಿಯವಾಗಬಹುದು. ಇಷ್ಟೇ ಅಲ್ಲದೆ, ಯಾರದೆಲ್ಲ ಬಿಪಿಎಲ್ ಕಾರ್ಡ್ ನಿಷ್ಕ್ರಿಯವಾಗಬಹುದು ಗೊತ್ತಾ?

*ಟ್ಯಾಕ್ಸ್ ಕಟ್ಟುವ ಕುಟುಂಬಗಳು (Tax Paying Family)
*ಕಾರ್ ಅಥವಾ ಟ್ರ್ಯಾಕ್ಟರ್ ಇರುವ ಕುಟುಂಬದವರು
*AC ಇರುವ ಮನೆಗಳು
*5 ಹೆಚ್ಚು ಜೆನೆರೇಟರ್ ಇರುವ ಮನೆ
*5 ಎಕರೆಗಿಂತ ಜಾಸ್ತಿ ಭೂಮಿ ಇರುವವರು
*ಶಸ್ತ್ರ ಲೈಸೆನ್ಸ್ ಇರುವವರು
*ಸರ್ಕಾರದ ಪೆನ್ಯನ್ (Government Pension) ಪಡೆಯುವ ಕುಟುಂಬಗಳು
*ನಗರ ಪ್ರದೇಶದಲ್ಲಿ ವಾಸ ಮಾಡಿ, 3ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವ ಕುಟುಂಬ
ಮೇಲೆ ತಿಳಿಸಿದವರು ಬಿಪಿಎಲ್ ಕಾರ್ಡ್ ಹೊಂದಿದ್ದು, ಸರಕಾರದ ಸೌಲಭ್ಯ ಪಡೆಯುತ್ತಿದ್ದರೆ,ಇವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂದು ಹೇಳಲಾಗುತ್ತಿದೆ. ಬಿಪಿಎಲ್ ರೇಷನ್ ಕಾರ್ಡ್‌ ಗೆ ಸರ್ಕಾರ ಈ ಎಲ್ಲಾ ನಿಯಮಗಳನ್ನು ಜಾರಿಗೆ ತರಬಹುದು ಎನ್ನಲಾಗುತ್ತಿದ್ದು, ಒಂದು ವೇಳೆ ಈ ನಿಯಮಗಳು ಜಾರಿಗೆ ಬಂದಲ್ಲಿ ಅನೇಕ ಮಂದಿಯ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ.

Leave A Reply

Your email address will not be published.