Udupi: ಉಡುಪಿ ಕಾಲೇಜು ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ಚಿತ್ರೀಕರಣ ಪ್ರಕರಣ: ಸ್ಪಷ್ಟನೆ ನೀಡಿದ ಎಸ್ಪಿ ಅಕ್ಷಯ್ ಮಚ್ಚೀಂದ್ರ !

Latest news camera was placed in the toilet of Udupi College and a video was taken

Udupi: ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ ವಿಚಾರದ ಕುರಿತಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ವೇಳೆ, ಈ ಪ್ರಕರಣದ ಕುರಿತಂತೆ ದಾಖಲೆ ಇದ್ದರೆ ಪೊಲೀಸರಿಗೆ ನೀಡಿ ನೆರವಾಗುವಂತೆ ಅಕ್ಷಯ್ ಮಚ್ಚೀಂದ್ರ ರವರು ತಿಳಿಸಿದ್ದಾರೆ.

ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಕದ್ದಮುಚ್ಚಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು( Students)ಹಿಂದೂ ಯುವತಿಯರು ಶೌಚಾಲಯಕ್ಕೆ(Toilet )ತೆರಳಿದ್ದ ಸಂದರ್ಭ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ಮಾಹಿತಿ ನೀಡಿದ್ದಾರೆ.ಈ ಘಟನೆಯ ಕುರಿತಂತೆ ಮಾತನಾಡಿದ ಎಸ್ಪಿ ಅಕ್ಷಯ್, ಬೇರೆ ಬೇರೆ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಈ ಪ್ರಕರಣದ ಕುರಿತು ಚರ್ಚೆಯಾಗಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ,ಈ ಘಟನೆಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಬೇರೆ ಕಡೆಯ ವಿಡಿಯೋವೊಂದನ್ನು ಈ ಘಟನೆಗೆ ಸಂಬಂಧಿಸಿದಂತೆ ಬಿಂಬಿಸುವ ಪ್ರಯತ್ನದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ವೀಡಿಯೋ ಎಲ್ಲೆಡೆ ಶೇರ್ ಆಗುತ್ತಿದ್ದು ಇದರಲ್ಲಿರುವ ವಾಯ್ಸ್ ಅನ್ನು ಎಡಿಟ್ ಮಾಡಲಾಗಿದೆ. ಹೀಗಾಗಿ, ಈ ಘಟನೆಯ ಅಸಲಿಯತ್ತು ತಿಳಿಯದೇ ಮಾಹಿತಿ ಹಂಚಿಕೊಳ್ಳುವುದು ತಪ್ಪು. ಹಿಡನ್ ಕ್ಯಾಮರಾ ಮೂಲಕ ವೀಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ನಮ್ಮ ಗಮನಕ್ಕೆ ಈ ರೀತಿ ಯಾವ ಪ್ರಕರಣ ಕೂಡ ಬಂದಿಲ್ಲ.

ಹಲವಾರು ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಉಡುಪಿಯಲ್ಲಿ ನಡೆದ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ. ಕೆಲವರು ಈ ವಿಚಾರದ ಕುರಿತು ಕಾಳಜಿಗೆಂದು ಬರೆಯುತ್ತಿದ್ದಾರೆ. ಮತ್ತೆ ಕೆಲವರ ಉದ್ದೇಶ ಬೇರೆಯದ್ದೇ ಎಂದು ನಮಗೆ ಗೊತ್ತಾಗಿದೆ. ಇದರ ಮೇಲೆ ಕೂಡ ನಾವು ನಿಗಾ ಇರಿಸಿದ್ದು, ನಾವೂ ನಮ್ಮ ಕಡೆಯಿಂದ ಸಾಮಾಜಿಕ ಜಾಲತಾಣಗಳ ಕುರಿತು ಗಮನ ಹರಿಸಿದ್ದೇವೆ.

ಟ್ವೀಟ್ ಮಾಡಿದವರು ಈ ಘಟನೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕಾಗಿತ್ತು. ಅವರನ್ನು ಪೊಲೀಸರು ಸಂಪರ್ಕಿಸಿದ್ದು, ಕರೆ ಮಾಡಿ ಕೇವಲ ಮಾಹಿತಿ ಪಡೆದಿದ್ದೇವೆ. ಇದು ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದ್ದು, ಇದಕ್ಕೂ ಯಾವುದೇ ವಿಡಿಯೋ ಸಾಕ್ಷಿಗಳು ದೊರಕಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಅಷ್ಟೆ ಅಲ್ಲದೇ, ಈ ಘಟನೆಯ ಕುರಿತು ದೂರೇ ದಾಖಲಾಗಿಲ್ಲ ಎಂಬುದನ್ನು ಕೂಡ ಖಾತ್ರಿ ಪಡಿಸಿದ್ದಾರೆ.

ಎಲ್ಲ ಕಡೆಗೆ ಮಾಹಿತಿ ಹಂಚಿದರು ಕೂಡ ಈ ಕುರಿತು ಇಲಾಖೆಗೆ ಮಾಹಿತಿ ಬಂದಿಲ್ಲ. ಬೇರೆ ಬೇರೆ ಸನ್ನಿವೇಶಗಳ ಮೂಲಕ ಇದನ್ನು ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದೆ. ಜನರ ಮನಸ್ಸಿನಲ್ಲಿ ಆತಂಕ ಉಂಟು ಮಾಡುವ ದೆಸೆಯಲ್ಲಿ ಬೇರೆ ವಿಚಾರಕ್ಕೂ ಈ ವಿಚಾರಕ್ಕೂ ತಳಕು ಹಾಕಬೇಡಿ ಎಂದುಎಸ್ಪಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕರಿಗೆ ಈ ಕುರಿತು ಯಾವುದಾದರೂ ಖಚಿತ ಮಾಹಿತಿ ಸಿಕ್ಕಿದ್ದಲ್ಲಿ ತಮಗೆ ತಿಳಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ತೀರ್ಮಾನವನ್ನು ನೀವೇ ತೆಗೆದುಕೊಳ್ಳಬೇಡಿ ಎಂದು ಎಸ್ಪಿ ಇದೆ ವೇಳೆ ಸೂಚಿಸಿದ್ದಾರೆ.

Leave A Reply

Your email address will not be published.