Job Opportunities: ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! 1876 SI ಹುದ್ದೆಗೆ ಅರ್ಜಿ ಆಹ್ವಾನ! ಈ ಕೂಡಲೇ ಅರ್ಜಿ ಸಲ್ಲಿಸಿ

Latest news Job opportunity Job Recruitment notification 2023

Job opportunity:ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಸ್ಟಾಪ್‌ ಸೆಲೆಕ್ಷನ್‌ ಕಮೀಷನ್‌ನಲ್ಲಿ(SSC) ಖಾಲಿ ಇರುವ 1876 SI ಹುದ್ದೆಗಳಿಗೆ(Job opportunity) ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಹುದ್ದೆಯ ವಿವರ
ಇಲಾಖೆ: ಮಿನಿಸ್ಟ್ರಿ ಆಫ್ ಪರ್ಸನಲ್‌, ಭಾರತ ಸರ್ಕಾರ
ಸಂಸ್ಥೆ: ಸ್ಟಾಪ್‌ ಸೆಲೆಕ್ಷನ್‌ ಕಮೀಷನ್‌ನಲ್ಲಿ (ಎಸ್‌ಎಸ್‌ಸಿ)
ಖಾಲಿ ಹುದ್ದೆಗಳು:
ದೆಹಲಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪುರುಷ)-109,
ಸಬ್‌ ಇನ್ಸ್‌ಪೆಕ್ಟರ್‌(ಮಹಿಳೆ)-53
(ಸೆಂಟ್ರಲ್‌ ಆರ್ಮ್ಡ್ ಪೊಲೀಸ್‌ ಫೋರ್ಸ್‌ನಲ್ಲಿ) ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು- 1714
ಸ್ಥಳ: ಭಾರತ
ಅಧಿಕೃತ ವೆಬ್‌ಸೈಟ್‌: https://ssc.nic.in/

ಮೇಲಿನ ಹುದ್ದೆಗೆ ಅರ್ಜಿ ಸಲ್ಲಿಸಲು 15.08.2023 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ 15.08.2023ರ ಮೊದಲು ಅರ್ಜಿ ಸಲ್ಲಿಸಬೇಕಾಗಿದ್ದು, ಸಾಮಾನ್ಯ ಅಭ್ಯರ್ಥಿಗಳು 100 ರೂ.ಅರ್ಜಿ ಶುಲ್ಕ ಪಾವತಿಸಬೇಕು. ಪರಿಶಿಷ್ಟ ವರ್ಗದವರಿಗೆ ಯಾವುದೇ ಶುಲ್ಕವಿರುವುದಿಲ್ಲ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌: https://ssc.nic.in/ ಭೇಟಿ ನೀಡಬಹುದು.

ಮೇಲೆ ತಿಳಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಇದರ ಜೊತೆಗೆ, ಕನಿಷ್ಠ 20ರಿಂದ ಗರಿಷ್ಠ 25 ವರ್ಷದವರು ಅರ್ಜಿ ಸಲ್ಲಿಸಬಹುದು.(ಪರಿಶಿಷ್ಟ, ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿರಲಿದೆ). ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಗೆ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ, ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದಾದ್ಯಂತ ಪೋಸ್ಟಿಂಗ್ ಮಾಡಲಾಗುತ್ತದೆ.

Leave A Reply

Your email address will not be published.