DHFWS Jobs: ರಾಜ್ಯ ಸರಕಾರದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್‌, ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿ, ಜುಲೈ 27ರಂದು ನೇರ ಸಂದರ್ಶನ

Latest news jobs news government jobs DHFWS Recruitment 2023

DHFS Recruitment 2023: ರಾಜ್ಯ ಸರಕಾರದ ಹುದ್ದೆ ಹುಡುಕುವವರಿಗೆ ಭರ್ಜರಿ ಸಿಹಿ ಸುದ್ದಿ. ಹೌದು, ನಿಮ್ಮೆಲ್ಲರ ಕನಸು ನನಸಾಗುವ ಸಮಯವಿದೆ. ಹೌದು, ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (District Health and Family Welfare Society Ramanagara-DHFS) ಇಲ್ಲಿ ಉದ್ಯೋಗ ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಜುಲೈ 27ರಂದು ರಾಮನಗರದಲ್ಲಿ ಸಂದರ್ಶನವಿದೆ. ರಾಮನಗರ, ಚನ್ನಪಟ್ಟಣ, ಕನಕಪುರ ದಲ್ಲಿ ಪೋಸ್ಟಿಂಗ್‌ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬಿಡುಗಡೆಯಾದ ದಿನಾಂಕ 17-07-2023
ಸಂದರ್ಶನ ನಡೆಯುವ ದಿನ ಜುಲೈ 27, 2023

ಸಂದರ್ಶನ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ
ರಾಮನಗರ – 562159

ಹುದ್ದೆಯ ವಿವರ:
ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕ (STLS)- 2
ಪ್ರಯೋಗಾಲಯ ತಂತ್ರಜ್ಞ- 1
ಔಷಧ ವಿತರಕರು (ಫಾರ್ಮಾಸಿಸ್ಟ್)-1
ನೇತ್ರ ಸಹಾಯಕರು- 1

ವಿದ್ಯಾರ್ಹತೆ:
ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕ (STLS) ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ, ಲ್ಯಾಬೊರೇಟರಿ ಟೆಕ್ನಿಷಿಯನ್​ನಲ್ಲಿ ಡಿಪ್ಲೊಮಾ ಮಾಡಿರಬೇಕು.
ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ SSLC, PUC, ಡಿಪ್ಲೊಮಾ ತೇರ್ಗಡೆ ಹೊಂದಿರಬೇಕು.
ಔಷಧ ವಿತರಕರು (ಫಾರ್ಮಾಸಿಸ್ಟ್) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛೆ ಪಡುವವರು ಡಿ.ಫಾರ್ಮಾ, ಬಿ.ಫಾರ್ಮಾ ಮಾಡಿರಬೇಕು.
ನೇತ್ರ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸುವವರು ಆಪ್ಟಿಮೆಟ್ರಿ/ಆಫ್ತಾಲ್ಮಿಕ್ ಅಸಿಸ್ಟೆಂಟ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು.

ವಯೋಮಿತಿ: ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಜುಲೈ, 17,2023ರಕ್ಕೆ ಗರಿಷ್ಠ 40ಮೀರಿರಬಾರದು. ವಯೋಮಿತಿ ಸಡಿಲಿಕೆಯನ್ನು ಮೀಸಲಾತಿ ಅನುಸಾರ ನೀಡಲಾಗಿದೆ.

ಮಾಸಿಕ ವೇತನ:
ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕ (STLS)- ಮಾಸಿಕ ₹ 21,000
ಪ್ರಯೋಗಾಲಯ ತಂತ್ರಜ್ಞ- ಮಾಸಿ ₹ 16,100
ಔಷಧ ವಿತರಕರು (ಫಾರ್ಮಾಸಿಸ್ಟ್)- ಮಾಸಿಕ ₹ 13,800
ನೇತ್ರ ಸಹಾಯಕರು- ಮಾಸಿಕ ₹ 13,800

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

 

Leave A Reply

Your email address will not be published.