KPSC apply for technical posts 2023: KPSC ಇಂದ ನೇಮಕ ಅಧಿಸೂಚನೆ; ವಿವಿಧ ಟೆಕ್ನಿಕಲ್ ಪೋಸ್ಟ್ ಗಳ ನೇಮಕ, ಇಲ್ಲಿದೆ ಸಂಪೂರ್ಣ ವಿವರ!

latest news jobs news KPSC Recruitment 2023 for Technical Posts

KPSC apply for technical posts 2023: ಕರ್ನಾಟಕ ಲೋಕಸೇವಾ ಆಯೋಗವು (KPSC) ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ.ಜೂನಿಯರ್ ಪ್ರೋಗ್ರಾಮರ್, ಡಾಟಾ ಬೇಸ್ ಅಡ್ಮಿನ್, ನೆಟ್ವರ್ಕ್ ಅಡ್ಮಿನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು(KPSC apply for technical posts 2023) ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಉದ್ಯೋಗ ವಿವರ
ಸಂಸ್ಥೆಯ ಹೆಸರು – ಕರ್ನಾಟಕ ಲೋಕಸೇವಾ ಆಯೋಗ
ವೆಬ್ಸೈಟ್ ವಿಳಾಸ- https://www.kpsc.kar.nic.in/
ಹುದ್ದೆಯ ಹೆಸರು – ವಿವಿಧ ತಾಂತ್ರಿಕ ಹುದ್ದೆಗಳು
ವಿವರ – ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ವಿಧ – ಗುತ್ತಿಗೆ

ಹುದ್ದೆಗಳ ವಿವರ
ಜೂನಿಯರ್ ಪ್ರೋಗ್ರಾಮರ್: 01
ಡಾಟಾ ಬೇಸ್ ಅಡ್ಮಿನ್ : 01
ನೆಟ್ವರ್ಕ್ ಅಡ್ಮಿನ್ : 01
ಹಾರ್ಡ್ವೇರ್ ಟೆಕ್ನೀಷಿಯನ್ : 01

ಅಭ್ಯರ್ಥಿಗಳು ತಮ್ಮ ಅರ್ಜಿಯ ಜೊತೆಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರ ಒಳಗೊಂಡ ಸಂಪೂರ್ಣ ಮಾಹಿತಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸೇರಿಸಿ, ಅಧಿಸೂಚನೆ ಪ್ರಕಟಗೊಂಡ 07 ದಿನದ ಒಳಗೆ ‘To be opened by Secretary only’ ಎಂದು ನಮೂದಿಸಿದ ಮುಚ್ಚಿದ ಲಕೋಟೆಯಲ್ಲಿ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.ಈ ವಿಳಾಸಕ್ಕೆ ಅಂಚೆ ಮೂಲಕ ಇಲ್ಲವೇ ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಗಸ್ಟ್ 30 ಕೊನೆಯ ದಿನವಾಗಿದೆ.
ವಿಳಾಸ: ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001

ಮೇಲೆ ತಿಳಿಸಿದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಯೋಗದಿಂದ ನೇರವಾಗಿ ನೇಮಕ ಮಾಡಲು ಮತ್ತು 01 ಹಾರ್ಡ್ವೇರ್ ಟೆಕ್ನೀಷಿಯನ್ ಹುದ್ದೆಯನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಲಾಗುತ್ತದೆ. ಈ ಹುದ್ದೆಗೆ ವಿದ್ಯಾರ್ಹತೆ ಗಮನಿಸಿದರೆ, ಬಿಇ / ಬಿ.ಟೆಕ್ / ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಶನ್ ಸೈನ್ಸ್ / ಇನ್ಫಾರ್ಮೇಶನ್ ಟೆಕ್ನಾಲಜಿ / ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ / ಕಂಪ್ಯೂಟರ್ ಅಪ್ಲಿಕೇಶನ್ / ಎಂಎಸ್ಸಿ ಇನ್ ಇನ್ಫಾರ್ಮೇಶನ್ ಸೈನ್ಸ್ / ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಥವಾ ಎಂಇ, ಎಂ.ಟೆಕ್ ಪಾಸ್ ಮಾಡಿರಬೇಕು.ಇದರ ಜೊತೆಗೆ ASP.net ಮತ್ತು ಡಾಟಾಬೇಸ್ (MS-SQL) ಅರಿವಿರಬೇಕು

ಕಾರ್ಯಾನುಭವ 0-5 ವರ್ಷಗಳಾಗಿದ್ದು, ಈ ಹುದ್ದೆಯ ಆಯ್ಕೆ ಪ್ರಕ್ರಿಯೆಗೆ ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ನಡೆಸುವ ಸ್ಕಿಲ್ ಟೆಸ್ಟ್ ನಡೆಸಲಾಗುತ್ತದೆ. ಈ ಹುದ್ದೆಗೆ ಮಾಸಿಕ ವೇತನ INR 40000 to 60000 ಆಗಿರಲಿದೆ. ಮೇಲೆ ತಿಳಿಸಿದ ಹುದ್ದೆಗೆ 03 ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದು, 01 ವರ್ಷದ ಬಳಿಕ ಅವರ ಕಾರ್ಯನಿರ್ವಹಣೆಯ ಆಧಾರದ ಮೇಲೆ ಅವಧಿ ವಿಸ್ತರಣೆ ಮಾಡಲಾಗುತ್ತದೆ.

 

https://www.kpsc.kar.nic.in/

Leave A Reply

Your email address will not be published.