Relaince: ಡೇಟಾ ಸೆಂಟರ್ ಅಭಿವೃದ್ದಿಗೆ ಹೊಸ ಒಪ್ಪಂದಕ್ಕೆ ಮುಂದಾದ ರಿಲಯನ್ಸ್!

Latest news Reliance signs new deal for data center development

Reliance Jio: ಟೆಲಿಕಾಮ್ ಕಂಪನಿಗಳಲ್ಲಿ(Telocom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿದೆ.ಈ ನಡುವೆ ರಿಲಯನ್ಸ್(Relaince )ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಡೇಟಾ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ತಮ್ಮ ಭಾರತೀಯ ಸ್ಪೆಷಲ್ ಪರ್ಪಸ್ ವೆಹಿಕಲ್ (SPV) ಗಳನ್ನು ಸ್ಥಾಪಿಸಲಾಗಿದೆ. ಬ್ರೂಕ್‌ಫೀಲ್ಡ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡಿಜಿಟಲ್ ರಿಯಾಲ್ಟಿ ಜೊತೆಗೆ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿರುವ ಕುರಿತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಹಿತಿ ನೀಡಿದೆ. ಪ್ರತಿ ಭಾರತೀಯ SPV ಗಳಲ್ಲಿ ಸಂಸ್ಥೆಯು ಶೇ 33.33 ರಷ್ಟು ಪಾಲನ್ನು ಒಳಗೊಂಡಿದ್ದು ಆ ಮೂಲಕ ಸಮಾನ ಪಾಲುದಾರ ಆಗಲಿದೆ ಎಂದು ಮಾಹಿತಿ ನೀಡಿದೆ.

ಡಿಜಿಟಲ್ ರಿಯಾಲ್ಟಿ ಟ್ರಸ್ಟ್, ಇಂಕ್ ಎಂಬುದು 27 ದೇಶಗಳಾದ್ಯಂತ 300+ ಡೇಟಾ ಕೇಂದ್ರಗಳೊಂದಿಗೆ ಜಾಗತಿಕವಾಗಿ ಕ್ಲೌಡ್ ಮತ್ತು ಕ್ಯಾರಿಯರ್-ನ್ಯೂಟ್ರಲ್ ಡೇಟಾ ಸೆಂಟರ್, ಸಂಪರ್ಕ ಮತ್ತು ಅಂತರ್ ಸಂಪರ್ಕ ಸಲ್ಯೂಷನ್ ಒದಗಿಸುವ ಅತಿದೊಡ್ಡ ಪೂರೈಕೆದಾರ ಎನ್ನಲಾಗಿದೆ. ಬ್ರೂಕ್‌ಫೀಲ್ಡ್ ಇನ್‌ಫ್ರಾಸ್ಟ್ರಕ್ಚರ್‌ನೊಂದಿಗೆ ಜಂಟಿ ಉದ್ಯಮವನ್ನು ಒಳಗೊಂಡಿರುವ ಹಿನ್ನೆಲೆ ಅದು ಭಾರತದಲ್ಲಿನ ಉದ್ಯಮಗಳು ಮತ್ತು ಡಿಜಿಟಲ್ ಸೇವೆಗಳ ಸಂಸ್ಥೆಗಳ ನಿರ್ಣಾಯಕ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸಲು ಉತ್ತಮ-ಗುಣಮಟ್ಟದ, ಹೆಚ್ಚು-ಸಂಪರ್ಕಿತ, ವ್ಯಾಪಕ ಡೇಟಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.

ದೇಶದಲ್ಲಿ ಡೇಟಾ ಸೆಂಟರ್ ಸಾಮರ್ಥ್ಯವು ಮುಂದಿನ ಕೆಲವು ವರ್ಷಗಳಲ್ಲಿ ಬಹು-ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ದೇಶದ ಡೇಟಾ ಕೇಂದ್ರಗಳು ಮತ್ತು ಇತರ ಸಂಸ್ಥೆಗಳಿಗೆ ಜಂಟಿ ಉದ್ಯಮವು ಸಂಪರ್ಕವನ್ನು ಕಾರ್ಯತಂತ್ರವಾಗಿ ವಿಸ್ತರಿಸುತ್ತದೆ. ಬ್ರೂಕ್‌ಫೀಲ್ಡ್‌ನ (Brookfield) ಅತ್ಯುತ್ತಮ ಜ್ಞಾನವು ಭಾರತೀಯ ಮೂಲಸೌಕರ್ಯ ಮಾರುಕಟ್ಟೆಯ ಜೊತೆಗೆ ಭಾರತದಲ್ಲಿ ಜಿಯೋದ ಅಸ್ತಿತ್ವದಲ್ಲಿರುವ ಶೇ 80ರಷ್ಟು ದೊಡ್ಡ ಖಾಸಗಿ ಉದ್ಯಮಗಳ ಗ್ರಾಹಕರ ಜತೆ ಪ್ರಬಲ ಸಂಪರ್ಕ ಮತ್ತು ಡಿಜಿಟಲ್ ಸಂಪರ್ಕ ಹೊಂದಿದೆ.ಡಿಜಿಟಲ್ ರಿಯಾಲ್ಟಿಯ ಬೆಸ್ಟ್‌ ಜಾಗತಿಕ ಡೇಟಾ ಸೆಂಟರ್ ಪ್ಲಾಟ್‌ಫಾರ್ಮ್ 300+ ಡೇಟಾ ಸೆಂಟರ್‌ಗಳು, 50+ ಮೆಟ್ರೋಗಳಲ್ಲಿ, 27 ದೇಶಗಳು ಮತ್ತು 6 ಖಂಡಗಳಲ್ಲಿ ಗ್ರಾಹಕರಿಗೆ ಸಂಪರ್ಕಿತ ಡೇಟಾ ಸಮುದಾಯದ ಪಾಲುದಾರಿಕೆಯನ್ನು ಒಳಗೊಂಡಿರುತ್ತದೆ.ಇದರ ಜೊತೆಗೆ ಪರಿಹಾರಗಳು ಹಾಗೂ ಸೇವೆಗಳು, ಜಿಯೋದ ನೆಟ್‌ವರ್ಕ್, ಕ್ಲೌಡ್ ಸೇರಿದಂತೆ ಇತರ ಸೇವಾ ಪರಿಹಾರವನ್ನು ನೀಡುತ್ತದೆ.

Leave A Reply

Your email address will not be published.