ಆಗುಂಬೆ ಘಾಟಿಯಲ್ಲಿ ಜು.27ರಿಂದ ಸೆ.15 ರವರೆಗೆ ಭಾರೀ ವಾಹನ ಸಂಚಾರ ನಿಷೇಧ!

heavy-vehicles-ban-on-agumbe-ghat-from-july-27th

ಉಡುಪಿ: ಭಾರೀ ಮಳೆ, ಹಾಗೂ ಭಾರೀ ವಾಹನಗಳ ಓಡಾಟದಿಂದಾಗಿ ಆಗುಂಬೆ ಘಾಟಿಯ 6,7 ಹಾಗೂ 11ನೇ ತಿರುವಿನಲ್ಲಿ ಬಿರುಕುಗಳು, ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಉಂಟಾಗಿದೆ. ಆಗುಂಬೆ ಘಾಟಿಯಲ್ಲಿ ಬಿರುಕು ಬಿಟ್ಟಿರುವುದರಿಂದ ಹಾಗೂ ರಸ್ತೆ ಕುಸಿತ ಹಿನ್ನೆಲೆ ಜು.27ರಿಂದ ಸೆ.15ರವರೆಗೆ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ವಾಹನಗಳು ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಾಘಾಟ್- ಕಾರ್ಕಳ- ಉಡುಪಿ ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ- ಸಿದ್ಧಾಪುರ- ಕುಂದಾಪುರ- ಉಡುಪಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲಘು ವಾಹನಗಳ ಸಂಚಾರಕ್ಕೆ ಮಾತ್ರ ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.

ಹಾಗಾಗಿ ಜು.27ರಿಂದ ಸೆಪ್ಟಂಬರ್‌ 15ರವರೆಗೆ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ. ಭಾರೀ ವಾಹನದ ಸಂಚಾರದಿಂದ ಮತ್ತಷ್ಟು ರಸ್ತೆ ಕುಸಿದು ಅಪಘಾತ ಸಂಭವಿಸುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ತಕ್ಷಣದಿಂದ ಜಾರಿ ಮಾಡಿದೆ.

Leave A Reply

Your email address will not be published.