10 year old Aadhaar update: ಆಧಾರ್‌ಕಾರ್ಡ್‌ ಅಪ್ಡೇಟ್‌ ಬಗ್ಗೆ ಇಲ್ಲಿದೆ ನಿಮಗೊಂದು ಮುಖ್ಯವಾದ ಮಾಹಿತಿ! ಇಂದೇ ಅಪ್ಡೇಟ್‌ ಮಾಡಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ!!

Latest national news Aadhaar card update 10 year old Aadhaar Card update

10 year old Aadhaar update: ಆಧಾರ್‌ಕಾರ್ಡ್‌ ಈಗ ಪ್ರತಿಯೊಂದು ಕೆಲಸ ಆಗಬೇಕಾದರೆ ಕೇಳುವುದು ಸಹಜವಾಗಿದೆ. ಇತ್ತೀಚೆಗೆ ನಮ್ಮ ಸರಕಾರ ನೀಡಿದ ಗ್ಯಾರಂಟಿ ಯೋಜನೆಗೂ ಆಧಾರ್‌ ಕಾರ್ಡೇ ಬೇಕು. ಅಷ್ಟು ಮಾತ್ರವಲ್ಲದೇ ಇತ್ತೀಚೆಗೆ ಅನೇಕರಿಗೆ ಆಧಾರ್‌ಕಾರ್ಡ್‌ ಅಪ್ಡೇಟ್‌ ಮಾಡಿ ಅಂತ ಸಂದೇಶಗಳು ಬರುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ನೀವೇನಾದರೂ ಹತ್ತುವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ ಪಡೆದು ಸದರಿ ವಿಳಾಸದಲ್ಲಿ ಈಗಲೂ ಇದ್ದರೆ ಕೂಡಾ ಅಂತಹ ಆಧಾರ್‌ ಕಾರ್ಡ್‌ ನಿಷ್ಕ್ರಿಯವಾಗುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ ಆಧಾರ್‌ ಕಾರ್ಡ್‌ ಹತ್ತು ವರ್ಷದಿಂದ ಒಮ್ಮೆಊ ಅಪ್ಡೇಟ್‌ ಆಗದೇ ಇರುವುದು.

ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸ ದಾಖಲೆಗಳೊಂದಿಗೆ ನವೀಕರಣ ಮಾಡಿ, ಹತ್ತು ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೆ ಆಧಾರ್‌ ಕಾರ್ಡ್‌ ನವೀಕರಿಸದೇ ಇರುವವರು ನವೀಕರಣ ಮಾಡುವಂತೆ ಕಲಬುರಗಿ ಜಿಲ್ಲಾಧಿಕಾರಿ (Kalaburagi DC) ಬಿ.ಫೌಜಿಯಾ ತರನ್ನುಮ್‌ ಹೇಳಿದ್ದಾರೆ.

ಸರಕಾರ ವಿವಿಧ ಯೋಜನೆಗಳಿಗೆ ಆಧಾರ್‌ ಕಡ್ಡಾಯಗೊಳಿಸಿರುವುದರಿಂದ ಐದು ವರ್ಷ ಮೇಲ್ಪಟ್ಟು ಏಳು ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್‌ ಮತ್ತು ಮೊಬೈಲ್‌ ಸಂಖ್ಯೆಯನ್ನು ನವೀಕರಣಗೊಳಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.

ಹತ್ತು ವರ್ಷಕ್ಕೂ ಮೇಲ್ಪಟ್ಟ ಆದಾರ್‌ ಕಾರ್ಡ್‌ ಅಪ್ಡೇಟ್‌(10 year old Aadhaar update) ಮಾಡಿದರೆ ದುರಪಯೋಗ ಮಾಡುವುದು ತಪ್ಪಿಸಬಹುದು. ಹೀಗಾಗಿ ಅಪ್ಡೇಟ್‌ ಮಾಡಿ ಎಂಬ ಮೆಸೇಜ್‌ ಬರುತ್ತಿದೆ. ಐದು ವರ್ಷ ಮೇಲ್ಪಟ್ಟು ಏಳು ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್‌ ನವೀಕರಣ ಉಚಿತವಾಗಿರುತ್ತದೆ. ಉಳಿದ ಹಾಗೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ನವೀಕರಣಕ್ಕೆ ಐವತ್ತು ರೂ, ಕಣ್ಣು, ಮುಖ, ಕೈ ಬೆರಳುಗಳ ವಿವರಗಳ ನವೀಕರಣಕ್ಕೆ ರೂ.100 ಸೇವಾ ಶುಲ್ಕ ಇದೆ.

Leave A Reply

Your email address will not be published.