Gang rape: ತಂದೆ ತಾಯಿ ಬೈದರೆಂದು ಕೋಪದಲ್ಲಿ ಮನೆ ಬಿಟ್ಟು ಹೋದ ಬಾಲಕಿ ಮೇಲೆ ಗ್ಯಾಂಗ್‌ರೇಪ್‌!! ಆರೋಪಿಗಳು ಅರೆಸ್ಟ್‌

latest news crime news Rape case Gang-rape of a girl

ಬಿಹಾರದ ಗಯಾದಲ್ಲಿ ನಾಲ್ವರು ಬಾಲಕರು ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆಯೊಂದು ನಡೆದಿದೆ. ಇಲ್ಲಿನ ಬೋಧಗಯಾದಲ್ಲಿ ಪೋಷಕರು ಬೈದರೆಂದು, ಕೋಪದಲ್ಲಿ ವಾರಣಾಸಿಯಿಂದ ಓಡಿಹೋದ ಬಾಲಕಿ ಮೇಲೆ ಆಟೋ ಚಾಲಕ ಸೇರಿ 4 ಮಂದಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ವಿಷಯ ಬಯಲಿಗೆ ಬಂದ ನಂತರ ಕೊತ್ವಾಲಿ ಮತ್ತು ಬೋಧಗಯಾ ಪೊಲೀಸ್ ಠಾಣೆಯ ಪೊಲೀಸ್ ತಂಡವು ತ್ವರಿತ ಕ್ರಮ ಕೈಗೊಂಡು ಅಪ್ರಾಪ್ತ ಸಂತ್ರಸ್ತೆಯ ಸಹಿತ 4 ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಮಗಧ್ ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ ಕುಮಾರ್, ಬೋಧಗಯಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಪುರ ನಿವಾಸಿ ಹರ್ಷಿತ್ ಕುಮಾರ್, ಪಚ್ಚಟ್ಟಿ ನಿವಾಸಿ ಮನೋಜ್ ಸಿಂಗ್ ಮತ್ತು ಜಹೀರ್ ಖಾನ್ ಅಲಿಯಾಸ್ ದೀಪಕ್ ಎಂಬುವವರು ಬಂಧಿತರು.

ಸಂತ್ರಸ್ತೆ ದಾಖಲಿಸಿದ ಎಫ್‌ಐಆರ್ ಪ್ರಕಾರ, ತಂದೆ ತಾಯಿಯರು ಬೈದರೆಂಬ ಕೋಪದಲ್ಲಿ ಮನೆಯಿಂದ ಓಡಿಹೋಗಿದ್ದಳು. ವಾರಣಾಸಿಯಿಂದ ಓಡಿ ಹೋಗಿ ಎರಡು ದಿನಗಳ ಹಿಂದೆ ರೈಲಿನಲ್ಲಿ ಗಯಾ ನಿಲ್ದಾಣಕ್ಕೆ ಬಂದಿದ್ದಳು. ಇದಾದ ಬಳಿಕ ಬಾಲಕಿ ರೈಲ್ವೇ ನಿಲ್ದಾಣದಲ್ಲಿ ಯುವತಿಯೊಬ್ಬಳ ಬಳಿ ಸಹಾಯ ಯಾಚಿಸಿದ್ದಾಳೆ. ಸಹಾಯ ಮಾಡೋ ನೆಪದಲ್ಲಿ ಆಟೋ ಚಾಲಕನಲ್ಲಿ ಬಿಟ್ಟಿದ್ದಾಳೆ ಯುವತಿ. ಆತ ಆಟೋದಲ್ಲಿ ಬಾಲಕಿಯನ್ನು ಕೂರಿಸಿಕೊಂಡು ಬೋಧಗಯಾಗೆ ಬಂದಿದ್ದಾನೆ. ಇಲ್ಲಿ ಆಟೋ ಚಾಲಕ ತನ್ನ ಇನ್ನೂ ಮೂವರು ಸಹಚರರೊಂದಿಗೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಆರೋಪಿಗಳು ಬನಾರಸ್‌ಗೆ ಬಿಡುವುದಾಗಿ ಹೇಳಿ ಭಾನುವಾರ ತಡರಾತ್ರಿ ಗಯಾ ಠಾಣೆಗೆ ಕರೆದೊಯ್ದಿದ್ದಾರೆ.

ಇಲ್ಲಿ ಸಂತ್ರಸ್ತೆ ಹೇಗೋ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಅಲ್ಲಿದ್ದವರಿಗೆ ಎಲ್ಲವನ್ನು ತಿಳಿಸಿದ್ದು, ಬಳಿಕ ಜನರು ಕೊತ್ವಾಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ರಕ್ಷಣೆಯಲ್ಲಿ ಬೋಧಗಯಾ ಪೊಲೀಸ್ ಠಾಣೆಗೆ ಕರೆದೊಯ್ದರು. ಇದಾದ ಬಳಿಕ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು 4 ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಆಟೋ ಡ್ರೈವರ್ ಬಳಿ ಕರೆದೊಯ್ದ ಯುವತಿ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲು ಪೊಲೀಸರು ಪತ್ತೆ ನಡೆಸುತ್ತಿದ್ದಾರೆ.

Leave A Reply

Your email address will not be published.