Udupi News: ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ, ವಿದ್ಯಾರ್ಥಿನಿಯರ ವಿರುದ್ಧ ಕೇಸು ದಾಖಲು

Latest news FIR Registered by malpe police against udupi college students

ನಿನ್ನೆ (ಜುಲೈ25) ರಂದು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಮಚ್ಚೀಂದ್ರ ಅವರು ಸುದ್ದಿಗೋಷ್ಟಿಯೊಂದನ್ನು ಮಾಡಿದ್ದರು. ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜು ವಿಚಾರ ಅಂದರೆ ನೇತ್ರ ಕಾಲೂಜುಗಳಲ್ಲಿ ಆದ ವೀಡಿಯೋ ಚಿತ್ರೀಕರಣ ವಿವಾದದ ಕುರಿತು. ಆದರೆ ಈಗ ಈ ಪ್ರಕರಣದ ಕುರಿತು ಮೂವರು ವಿದ್ಯಾರ್ಥಿನಿಯರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಕುರಿತಂತೆ ವಿದ್ಯಾರ್ಥಿನಿಯರ ವಿರುದ್ಧ ಐಪಿಎಸ್‌ ಸೆಕ್ಷನ್‌ 509, 204, 175, 34 ಐ,ಪಿ,ಸಿ ಮತ್ತು 66(E) IT ACTಅಡಿಯಲ್ಲಿ ಮೂವರು ವಿದ್ಯಾರ್ಥಿನಿಯರ ವಿರುದ್ಧ ಮಲ್ಪೆ ಪೊಲೀಸರು ಸುಮೊಟೋ ಕೇಸ್‌ ದಾಖಲು ಮಾಡಿದ್ದಾರೆ.

ನೇತ್ರಜ್ಯೋತಿ ಕಾಲೇಜು (Nethra Jyothi College) ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು, ತಮಾಷೆಗೆ ಈ ವೀಡಿಯೋ ಮಾಡಿದ್ದಾಗಿ ಹೇಳಿದ್ದಾರೆಂದು ವಿದ್ಯಾರ್ಥಿನಿಯರು ಹೇಳಿದ್ದಾರೆಂದು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಕೂಡಾ ಹೇಳಿದ್ದರು.

ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಮತ್ತು ಹಿಂದೂ ವಿದ್ಯಾರ್ಥಿನಿ ಮಧ್ಯೆ ಜುಲೈ 18ರಂದು ಜಗಳ ನಡೆದಿತ್ತು. ಹಾಗಾಗಿ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯ ವೀಡಿಯೋವನ್ನು ಸೆರೆ ಹಿಡಿಯಲಾಗಿತ್ತು ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಇದು ಆಡಳಿತ ಮಂಡಳಿ ಗಮನಕ್ಕೂ ಬಂದಿದ್ದು, ಕೂಡಲೇ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಸ್ಪೆಂಡ್‌ ಮಾಡಲಾಗಿತ್ತು. ಹಿಂದೂ ಯುವತಿ ನಾವೆಲ್ಲ ಬ್ಯಾಚ್‌ಮೇಟ್‌ ಎಂದು ಹೇಳಿರುವ ಕಾರಣ ಯಾವುದೇ ದೂರು ನೀಡಿರಲಿಲ್ಲ. ಅದೇ ಸಮಯದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜುಲೈ20 ರಂದು ಕಾಲೇಜಿಗೆ ಭೇಟಿ ನೀಡಿದಾಗ, ಅಮಾನತು ಸುದ್ದಿ ತಿಳಿದು ವಾಪಾಸು ಹೋಗಿದ್ದರು.

ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್‌ ಆಗಿ, ಹಿಂದೂ ಯುವತಿಯ ವೀಡಿಯೋ ಮುಸ್ಲಿಂ ಯುವಕರಿಗೆ ಕಳಿಸಲಾಗುತ್ತಿದೆ ಎಂಬ ಆರೋಪದ ಜೊತೆ ಜೊತೆಗೆ ಲಂಡನ್‌ ಆಕ್ಸ್‌ಫರ್ಡ್‌ ವಿವಿಯ ಮಾಜಿ ವಿದ್ಯಾರ್ಥಿ ರಶ್ಮಿ ಸಾಮಂತ್‌ ಟ್ವೀಟ್‌ ಮಾಡಿದ್ದು, ಅದೇನೆಂದರೆ ನೂರಾರು ಹಿಂದೂ ಯುವತಿಯ ವೀಡಿಯೋ ಮಾಡಲಾಗಿದೆ ಎಂದು. ಇದು ಇನ್ನೂ ಹೆಚ್ಚು ಸಿಟ್ಟಿಗೆ ಕಾರಣವಾಗಿ, ಗಂಭೀರ ರೂಪ ಪಡೆದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿರುವುದಕ್ಕೆ ಕಾರಣವಾಗಿದೆ

Leave A Reply

Your email address will not be published.