ಸಮುದ್ರದ ಮಧ್ಯಭಾಗದಲ್ಲಿ ಐಜಿಎಲ್‌ನ ಗ್ಯಾಸ್‌ ಪೈಪ್‌ಲೈನ್‌ ಭೀಕರ ಸ್ಫೋಟ! 40 ಅಡಿ ಏರಿದ ನೀರಿನ ಕಾರಂಜಿ!

Latest news IGL's Gas pipe line explodes in yamuna river

ಯಮುನಾ ನದಿಯಲ್ಲಿ ಐಜಿಎಲ್‌ ಕಂಪನಿಯ ಗ್ಯಾಸ್‌ ಪೈಪ್‌ಲೈನ್‌ ಇದ್ದಕ್ಕಿದ್ದಂತೆ ಒಡೆದಿರುವ ಘಟನೆಯೊಂದು ನಡೆದಿದೆ. ಈ ಘಟನೆ ಬಾಗ್‌ಪತ್‌ನ ಛಪ್ರೌಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗ್ಯಾಸ್‌ ಪೈಪ್‌ಲೈನ್‌ ಒಡೆದಿರುವ ಪರಿಣಾಮ ಯಮುನಾ ನದಿಯಲ್ಲಿ 40ಅಡಿಯಷ್ಟು ನೀರು ಚಿಮ್ಮಿದೆ. ನದಿಯಲ್ಲಿ ಈ ರೀತಿಯ ಸನ್ನಿವೇಶ ನೋಡಿ ಗಾಮಸ್ಥರು ಭಯಗೊಂಡು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಘಟನೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಹರಿಯಾಣದ ಪಾಣಿಪತ್‌ ಮತ್ತು ಬಾಗ್‌ಪತ್‌ನ ದಾದ್ರಿ ಗಡಿಯಲ್ಲಿ ಯಮುನಾ ನದಿಯ ಮೂಲಕ ಹಾದು ಹೋಗುತ್ತಿದ್ದ ಐಜಿಎಲ್‌ ಕಂಪನಿಯ ಪೈಪ್‌ಲೈನ್‌ ಏಕಾ ಏಕಿ ಒಡೆದಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಅಗ್ನಿಶಾಮಕ ದಳ, ನಂತರ ನೀರಾವರಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ.

ಐಜಿಎಲ್ ಕಂಪನಿಯ ಅಧಿಕಾರಿಗಳ ಸೂಚನೆ ಮೇರೆಗೆ ತಕ್ಷಣವೇ ಗ್ಯಾಸ್ ಪೂರೈಕೆ ನಿಲ್ಲಿಸಲಾಯಿತು. ಯಾವುದೇ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ಗ್ಯಾಸ್ ಪೂರೈಕೆ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದು ಜಾಗೋಸ್ ಗ್ರಾಮದ ಬಳಿ ನಡೆದ ಘಟನೆ ಎಂದು ಬಾಗ್‌ಪತ್ ಡಿಎಂ ಜಿತೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ. ಜನಸಂಖ್ಯೆಯಿಂದ ಸ್ವಲ್ಪ ದೂರವಿರುವ ಪ್ರದೇಶವಿದ್ದು, ಅಲ್ಲಿ ಗ್ಯಾಸ್ ಪೈಪ್ ಲೈನ್ ಒಡೆದಿದೆ. ಈ ಗ್ಯಾಸ್ ಪೈಪ್‌ಲೈನ್ ಯಮುನಾ ನದಿಯ ಮಧ್ಯದಲ್ಲಿ ಹರಿದಿದೆ. ಬೆಳಗಿನ ಜಾವ 3ರಿಂದ 5ರ ನಡುವೆ ಘಟನೆ ನಡೆದಿದ್ದು, ಮಾಹಿತಿ ಬಂದ ತಕ್ಷಣ ಗ್ಯಾಸ್ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸದ್ಯ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಡಿಎಂ ಜಿತೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಕಾರ್ಮಿಕರು ಪೈಪ್‌ಲೈನ್ ದುರಸ್ತಿಯಲ್ಲಿ ತೊಡಗಿದ್ದಾರೆ. ಅದನ್ನು ಶೀಘ್ರವೇ ಸರಿಪಡಿಸಲಾಗುವುದು. ಪ್ರಸ್ತುತ, ಮುಂಜಾಗ್ರತಾ ಕ್ರಮವಾಗಿ ಜನರು ಅಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ

Leave A Reply

Your email address will not be published.