Intresting news: ಹಳೆಯ ಮನೆ ತೆರವು ವೇಳೆ ಕಾರ್ಮಿಕರಿಗೆ ದೊರೆತ 240 ಚಿನ್ನದ ನಾಣ್ಯಗಳು! ನಾಲ್ವರು ಪೊಲೀಸರಿಂದ ಕಳ್ಳತನ!

Latest news Intresting news British Era Gold Coins Found in Gujarat

Intresting news: ಪೊಲೀಸರ ಕೆಲಸ ಜನರ ರಕ್ಷಣೆ ಮಾಡುವುದು. ಕಾನೂನು ಪಾಲನೆ ಮಾಡುವುದು. ಆದರೆ ಇಲ್ಲೊಂದು ಕಡೆ ಕಾವಲು ಕಾಯಬೇಕಾದ ಪೊಲೀಸರೇ ಕಳ್ಳತನ ಮಾಡಿದರೆ ಹೇಗಾಗಬೇಡ. ಆದರೆ ಇದು ನಿಜ. ಗುಜರಾತ್‌ನ ಪುರಾತನ ಕಾಲದ ಮನೆಯೊಂದರಲ್ಲಿ ಬ್ರಿಟಿಷರ ಕಾಲದ 240 ಚಿನ್ನದ ನಾಣ್ಯಗಳು ಮಧ್ಯಪ್ರದೇಶದ ಬಡ ಕಾರ್ಮಿಕರಿಗೆ ದೊರಕಿದ್ದವು. ಅವುಗಳನ್ನು ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಆದರೆ ಈ ಪೊಲೀಸರು ಈಗ ಅವುಗಳನ್ನು ಕಳವು ಮಾಡಿದ್ದಾರೆ. ಅಂದ ಹಾಗೆ ಪ್ರತಿ ನಾಣ್ಯದ ಈಗಿನ ಮಾರುಕಟ್ಟೆ ಬೆಲೆ ಸುಮಾರು 3-4ಲಕ್ಷ ಇದೆ. ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯ ಹೊಸ ಕಥೆ ಇದೆ. ಈಗ ಈ ನಾಲ್ವರು ಕಳ್ಳ ಪೊಲೀಸರು ಕಾಣೆಯಾಗಿದ್ದಾರೆ.

ಹಳೆಯ ಕಟ್ಟಡವೊಂದನ್ನು ತೆರವುಗೊಳಿಸುವ ಕಾರ್ಯದಲ್ಲಿ ಈ ಚಿನ್ನದ ನಾಣ್ಯಗಳು ಸಿಕ್ಕಿದೆ. ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ರಾಮ್ಕುಬಾಯಿ ಎಂಬಾಕೆ ತನಗೆ ಹಾಗೂ ತನ್ನ ಕುಟುಂಬಕ್ಕೆ ಈ ಚಿನ್ನದ ನಾಣ್ಯಗಳು ದೊರಕಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಎಲ್ಲಾ ನಾಣ್ಯಗಳನ್ನು ಕದ್ದುಕೊಂಡು ಹೋಗಿದ್ದು, ಒಂದು ನಾಣ್ಯ ಆಕೆಯ ಬಳಿಯೇ ಇತ್ತು. ಅದನ್ನು ಆಕೆ ಪೊಲೀಸರಿಗೆ ಠಾಣೆಯಲ್ಲಿ ನೀಡಿದ್ದಾಳೆ.

ಬ್ರಿಟನ್‌ ರಾಜ ಜಾರ್ಜ್‌ V1 ಅವರ ಚಿತ್ರವಿರುವ ನಾಣ್ಯ ಇದಾಗಿದ್ದು, 1922ರಲ್ಲಿ ಬ್ರಿಟಿಷರು ಈ ನಾಣ್ಯ ಟಂಕಿಸಿದ್ದರು ಎನ್ನಲಾಗಿದೆ.

ರಾಮ್ಕುಬಾಯಿ ಕುಟುಂಬವು ಹಳೆಯ ಕಟ್ಟಡವೊಂದನ್ನು ಕೆಡಹುವ ಕೆಲಸದಲ್ಲಿ ತೊಡಗಿಕೊಂಡಿತ್ತು. ಆ ಸಂದರ್ಭದಲ್ಲಿ ಅವರಿಗೆ ಭರ್ಜರಿ 240ಚಿನ್ನದ ನಾಣ್ಯ ದೊರಕಿದೆ. ನಂತರ ಅವರು ಆ ಚಿನ್ನದ ನಾಣ್ಯಗಳನ್ನು ಅವರ ಗ್ರಾಮಕ್ಕೆ ತಂದು ಮನೆಯ ಒಳಗೆ ಹೂತು ಹಾಕಿತ್ತು. ಈ ಮನೆಯ ಮಾಲೀಕ ಇಮ್ತಿಯಾಜ್‌ ಬಲಿಯಾ, ಲಂಡನ್‌ನಲ್ಲಿದ್ದು, ಈ ಕಟ್ಟಡ ಕೆಡಹುವ ಕೆಲಸವನ್ನು ಗುತ್ತಿಗೆದಾರರೊಬ್ಬರಿಗೆ ನೀಡಿದ್ದರು. ಆತ ಈ ರಾಮ್ಕುಬಾಯಿ ಮತ್ತು ಆಕೆಯ ಕುಟುಂಬಕ್ಕೆ ಈ ಕೆಲಸ ವಹಿಸಿದ್ದ.

ಆದರೆ ಈ ಕುಟುಂಬ ಚಿನ್ನದ ನಾಣ್ಯಗಳನ್ನು ಹೂತು ಹಾಕಿದ್ದರ ಕುರಿತು ಪೊಲೀಸರಿಗೆ ಹೇಗೋ ಮಾಹಿತಿ ದೊರೆಯಿತು.

ಖಾಸಗಿ ವಾಹನದಲ್ಲಿ ಜುಲೈ 19ರಂದು ಸೊಂಡ್ವಾ ಪೊಲೀಸ್‌ ಠಾಣೆಯ ಅಧಿಕಾರಿ ವಿಜಯ್‌ ದೇವ್ಡಾ, ಜೊತೆ ಕಾನ್‌ಸ್ಟೇಬಲ್‌ಗಳಾದ ರಾಕೇಶ್‌, ವೀರೇಂದ್ರ ಮತ್ತು ಸುರೇಂದ್ರ ಅವರು ರಾಮ್ಕುಬಾಯಿ ಮನೆಗೆ ಬಂದು ಕುಟಂಬದವರನ್ನೆಲ್ಲ ಥಳಿಸಿ ನಾಣ್ಯ ಲಪಟಾಯಿಸಿ ಪರಾರಿಯಾಗಿದ್ದಾರೆ. ಈ ಕುರಿತು ರಾಮ್ಕುಬಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇದರ ಮಾಲೀಕರಾದ ಇಮ್ತಿಯಾಜ್‌ ಬಲಿಯಾ ಮತ್ತು ಶಬ್ಬೀರ್‌ ಭಾಯ್‌ ಬಲಿಯಾ. ಮನೆಯು ಎರಡು ಆಸ್ತಿಗಳಲ್ಲಿದ್ದು, ಇಬ್ಬರ ನಡುವೆ ಹಂಚಿಹೋಗಿದೆ. ಲಂಡನ್‌ನಲ್ಲಿರುವ ಇಮ್ತಿಯಾಜ್‌ ತಮ್ಮ ಮನೆಯ ಭಾಗವನ್ನು ಕೆಡಹಿ, ನವೀಕರಿಸಲು ಬಯಸಿದ್ದು, ಆ ಸಂದರ್ಭದಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿದೆ.

Leave A Reply

Your email address will not be published.