AAP ಸಂಸದ ರಾಘವ್‌ ಚಡ್ಡಾ ಅವರ ಮೇಲೆ ಕಾಗೆ ದಾಳಿ! ಬಿಜೆಪಿಯಿಂದ ವ್ಯಂಗ್ಯ

Latest news politics Crow attacked AAP MP Raghav Chadha

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಸಂಸತ್ತಿನಲ್ಲಿ ಕಾಗೆಯೊಂದು ದಾಳಿ ಮಾಡಿದೆ. ಈ ವೇಳೆ ಅವರು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಂಗಳವಾರ ನಡೆದ ಈ ಘಟನೆಯ ಚಿತ್ರಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ರಾಘವ್‌ ಚಡ್ಡಾ ಅವರ ಫೋಟೋವೊಂದು ಸಖತ್ ವೈರಲ್ ಆಗುತ್ತಿವೆ. ರಾಘವ್ ಚಡ್ಡಾ ಅವರ ಈ ಫೋಟೋವನ್ನು ದೆಹಲಿ ಬಿಜೆಪಿ ಲೇವಡಿ ಮಾಡಿದೆ. ಭಾರತೀಯ ಜನತಾ ಪಕ್ಷವು, ‘ಜೂಟ್‌ ಬೋಲೇ ಕೌವಾ ಕಾಟೇ..ʼ ಎಂಬ ಪದ್ಯ ಇವತ್ತಿನವರೆಗೂ ಕೇಳಿದ್ದೆ, ಈಗ ನಿಜವಾಗಲೂ ಕಾಗೆ ಸುಳ್ಳು ಹೇಳುವವರ ಕಚ್ಚುವುದನ್ನು ನೋಡಿದೆ!’ ಎದು ಟ್ವೀಟ್‌ ಮಾಡಿದೆ.

ಈ ಟ್ವೀಟ್‌ಗೆ 7000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಇದಲ್ಲದೇ 2000ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ. ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸಿದ ನಂತರ, ರಾಘವ್ ಚಡ್ಡಾ ಅವರು ಮೋದಿ ಸರ್ಕಾರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಮಂಗಳವಾರ ಅವರು ಮಣಿಪುರದ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯನ್ನು ನೇರವಾಗಿ ಗುರಿಯಾಗಿಸಿದ್ದಾರೆ.

ಮಣಿಪುರದ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಘವ್‌ ಚಡ್ಡಾ ಅವರು, ಈ ಘಟನೆ ಸಾಮಾನ್ಯ ಘಟನೆಯಲ್ಲ. ವಿಶ್ವದಲ್ಲಿ ಚರ್ಚೆಯಾಗುತ್ತಿದೆ ಆದರೆ ದೇಶದ ಸರ್ಕಾರ ಅದನ್ನು ಚರ್ಚಿಸಲು ಬಯಸುವುದಿಲ್ಲ. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಹೇಳಿದ್ದರು. ಇನ್ನು ಮನ್‌ ಕಿ ಬಾತ್ ಸಾಕು, ಮಣಿಪುರದ ಬಗ್ಗೆ ಮಾತನಾಡೋಣ ಎಂದು ಹೇಳಿದರು. ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಮಾತನಾಡಬೇಕು. ಇದು ಮಹಿಳೆಯರ ಸುರಕ್ಷತೆಯ ಸಮಸ್ಯೆ. ಇದು ರಾಷ್ಟ್ರೀಯ ಭದ್ರತೆಯ ಸಮಸ್ಯೆ. ಮಣಿಪುರದ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದರು.

 

Leave A Reply

Your email address will not be published.