Bellare: ಪೆರುವಾಜೆಯಲ್ಲಿ ದಿ.ಪ್ರವೀಣ್ ನೆಟ್ಟಾರು ಸ್ಮೃತಿದಿನ ಹಾಗೂ ರಕ್ತದಾನ ಶಿಬಿರ

Latest news Praveen Nettaru Commemoration Day and Blood Donation Camp in Peruvaje

ಬೆಳ್ಳಾರೆ : 2022ನೇ ಜು.26ರಂದು ಹತ್ಯೆಗೀಡಾದ ಬಿಜೆಪಿಯ ಯುವ ಮುಖಂಡ ದಿ| ಪ್ರವೀಣ್ ನೆಟ್ಟಾರು ಅವರ ಸ್ಮೃತಿದಿನ ಹಾಗೂ ರಕ್ತದಾನ ಶಿಬಿರ ಪೆರುವಾಜೆ ಜೆ ಡಿ ಆಡಿಟೋರಿಯಂನಲ್ಲಿ ಜು.26ರಂದು ನಡೆಯಿತು.

ರಕ್ತದಾನ ಶಿಬಿರ ಹಾಗೂ ಸ್ಮೃತಿದಿನವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಹಿಸಿದ್ದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ,ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಗುರುದತ್ ನಾಯಕ್,ಯುವ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷ ಕೃಷ್ಣ ಎಂ.ಆರ್.,ಪ್ರವೀಣ್ ನೆಟ್ಟಾರು ಅವರ ತಂದೆ ಶೇಖರ್ ಪೂಜಾರಿ,ತಾಯಿ ರತ್ನಾವತಿ,ಪತ್ನಿ ನೂತನಾ ಪ್ರವೀಣ್ ಉಪಸ್ಥಿತರಿದ್ದರು.

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.

Leave A Reply

Your email address will not be published.