Dating App: ಡೇಟಿಂಗ್‌ ಆಪ್‌ ಮೂಲಕ ಯುವಕನ ಭೇಟಿಯಾಗಲು ಹೋಟೆಲ್‌ಗೆ ಹೋದ ಯುವತಿ! ಊಟದಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ತಪ್ಪಿಸಿದ ಯುವಕ ನಂತರ ಮಾಡಿದ್ದೇನು?

Latest news women raped by a man met with dating app

ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್‌ ಆಪ್‌ಗಳ ಮೂಲಕ, ಇದರಲ್ಲಿ ಪರಿಚಯರಾದವರನ್ನು ಭೇಟಿ ಮಾಡುವುದು ಇತ್ತೀಚಿನ ಕಾಲದಲ್ಲಿ ಬಹಳ ಸಾಮಾನ್ಯವೆನ್ನಬಹುದು. ಆದರೆ ಈ ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾದ ಯುವಕನೋರ್ವನನ್ನು ಭೇಟಿ ಮಾಡಲೆಂದು ಹೋದ ಯುವತಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿದ ಘಟನೆಯೊಂದು ನಡೆದಿದೆ.

ಡೇಟಿಂಗ್‌ ಆಪ್‌ ಮೂಲಕ ಯುವಕ ಯುವತಿ ಪರಿಚಯವಾಗಿದ್ದು, ನಂತರ ಇವರಿಬ್ಬರ ಮಧ್ಯೆ ಸಲುಗೆ ಬೆಳೆದಿದೆ. ಕೆಲವೇ ದಿನದಲ್ಲಿ ಆತ ಯುವತಿಯನ್ನು ಹೋಟೆಲ್‌ವೊಂದಕ್ಕೆ ಕರೆದಿದ್ದಾನೆ. ಜೂನ್‌ 29ರಂದು ಸೆಕ್ಟರ್‌ 50ರಲ್ಲಿರುವ ಹೋಟೆಲ್‌ಗೆ ಯುವತಿ ಹೋಗಿದ್ದಾರೆ. ಯುವಕನ ಬಗ್ಗೆ ಕುರುಡು ನಂಬಿಕೆ ಇಟ್ಟು, ಆತನ ಬಗ್ಗೆ ಏನೂ ತಿಳಿಯದೆ ಕೇವಲ ಚಾಟಿಂಗ್‌ ಮೂಲಕ ಮಾತ್ರ ಆತ ಒಳ್ಳೆಯವನೆಂದು ನಂಬಿ ಹೋದ ಯುವತಿಯನ್ನು ಯುವಕ ಹಾಗೂ ಆತನ ಗೆಳೆಯ ಸೇರಿ ಅತ್ಯಾಚಾರ ಮಾಡಿದ್ದಾರೆ.

ಈ ಘಟನೆ ನಡೆದಿರುವುದು ಚಂಡೀಗಢದ ಗುರುಗ್ರಾಮ್ ಎಂಬಲ್ಲಿ

ಹೋಟೆಲ್‌ಗೆ ಹೋದ ಯುವತಿಗೆ ಮೊದಲಿಗೆ ಯುವಕ ಊಟ ತರಿಸಿದ್ದಾನೆ. ಊಟ ಮಾಡಿದ ಯುವತಿ ಕೂಡಲೇ ಪ್ರಜ್ಞೆ ತಪ್ಪಿದ್ದಾಳೆ. ಇದಾದ ಬಳಿಕ ಆಕೆಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಅತ್ಯಾಚಾರದ ವೀಡಿಯೋ ರೆಕಾರ್ಡ್‌ ಮಾಡಿ ಯಾರಿಗಾದರೂ ಹೇಳಿದರೆ, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುವುದಾಗಿ ಬೆದರಿಕೆ ಬೇರೆ ಹಾಕಿದ್ದಾರೆ. ಹಾಗಾಗಿ ಯುವತಿ ಹೆದರಿ ಕೂಡಲೇ ಪ್ರಕರಣ ದಾಖಲು ಮಾಡಿರಲಿಲ್ಲ. ಆದರೂ ಮನಸ್ಸು ತಡೆಯದೇ ಈಗ ದೂರು ನೀಡಿದ್ದೇನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ

Leave A Reply

Your email address will not be published.