ಹ್ಯಾಪಿ ಎಂಡಿಂಗ್‌! ಬಾಂಗ್ಲಾದೇಶದ ಜೂಲಿಯನ್ನು ಭೇಟಿ ಮಾಡಿ ಭಾರತಕ್ಕೆ ಬಂದ ಅಜಯ್‌! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

moradabad-man-ajay-return-home-after-he-met-his-wife-julie-at-bangladesh-latest-news

ಪಬ್‌ಜಿ ಗೇಮ್‌ ಆಡುತ್ತಾ ಪ್ರೀತಿಯಲ್ಲಿ ಮುಳುಗಿದ ಎರಡು ಜೋಡಿಗಳೆಂದರೆ ಅದು ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಸೀಆ ಹೈದರ್‌ ಮತ್ತು ಭಾರತದ ಸಚಿನ್.‌ ಇವರ ಪ್ರೇಮ ಕಥೆ ಇನ್ನೂ ತನಿಖಾ ಹಂತದಲ್ಲಿರುವಾಗಲೇ ನಡೆದಿತ್ತು ಇನ್ನೊಂದು ಗಡಿದಾಟಿದ ಲವ್.‌ ಅದುವೇ ಬಾಂಗ್ಲಾದೇಶದ ಜೂಲಿ ಮತ್ತು ಮೊರಾದಾಬಾದ್‌ ನಿವಾಸಿ ಅಜಯ್‌ ನ ಲವ್‌ಸ್ಟೋರಿ. ಅಜಯ್‌ ಅವರ ತಾಯಿ ತನ್ನ ಮಗ ಆತನ ಪತ್ನಿಯನ್ನು ಭೇಟಿಯಾಗಲು ಬಾಂಗ್ಲಾದೇಶಕ್ಕೆ ಹೋಗಿದ್ದು ಇನ್ನೂ ಬಂದಿಲ್ಲ ಎಂದು ದೂರು ದಾಖಲು ಮಾಡಿದ್ದರು. ಆದರೆ ಇದೀಗ ಬಂದಿರುವ ಸುದ್ದಿ ಪ್ರಕಾರ ಅಜಯ್‌ ಬಾಂಗ್ಲಾದೇಶದ ತನ್ನ ಪತ್ನಿ ಜೂಲಿಯನ್ನು ಭೇಟಿಯಾಗಿ ಮನೆಗೆ ಮರಳಿದ್ದಾರೆ.

ಮೊರಾದಾಬಾದ್‌ಗೆ ಹಿಂದಿರುಗಿದ ನಂತರ ಅಜಯ್‌ ತನ್ನ ಸ್ವಂತ ಇಚ್ಛೆಯ ಮೇರೆಗೆ ಬಾಂಗ್ಲಾದೇಶಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅವರ ಪತ್ನಿ ಜೂಲಿ ಕೂಡ ವೀಸಾದೊಂದಿಗೆ ಹಿಂತಿರುಗುತ್ತಾರೆ ಮತ್ತು ನಾವೆಲ್ಲರೂ ಒಟ್ಟಿಗೆ ಇರುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಜೂಲಿ ಭಾರತಕ್ಕೆ ಬಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿ ನಂತರ ಬಾಂಗ್ಲಾದೇಶಕ್ಕೆ ಹೋಗಿದ್ದಳು. ತಾಯಿ ನೀಡಿರುವ ದೂರಿನ ಪ್ರಕಾರ ಅಜಯ್‌ ತನ್ನ ಪತ್ನಿ ಜೊತೆ ಬಾಂಗ್ಲಾದೇಶಕ್ಕೆ ಹೋಗಿದ್ದು, ಅಲ್ಲಿ ಆತನನ್ನು ಒತ್ತೆಯಾಳಾಗಿ ಇರಿಸಲಾಗಿದೆ ಎಂದು ಆರೋಪ ಮಾಡಿದ್ದರು.

ದೂರು ದಾಖಲು ಮಾಡಿದ ನಂತರ, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಈ ಘಟನೆಯ ಕುರಿತು ಸಂಪೂರ್ಣ ವಿಷಯದ ಬಗ್ಗೆ ಎಸ್‌ಎಸ್‌ಪಿ ತಂಡವನ್ನು ರಚನೆ ಮಾಡಿ, ಸಿವಿಲ್‌ ಲೈನ್ಸ್‌ ಮತ್ತು ಇಂಟೆಲಿಜೆನ್ಸ್‌ ಟೀಮ್‌ ಮೊರಾದಬಾದ್‌ಗೆ ಹಸ್ತಾಂತರ ಮಾಡಿದ್ದರು. ಮೊರಾದಾಬಾದ್ ಪೊಲೀಸರು ಅಜಯ್ ಜೊತೆ ಮಾತುಕತೆ ನಡೆಸಿದ್ದು, ತನ್ನನ್ನು ಒತ್ತೆಯಾಳಾಗಿಸಿಕೊಂಡಿರುವ ಸತ್ಯವನ್ನು ನಿರಾಕರಿಸಿದ ಅಜಯ್ ತನ್ನ ಸ್ವಂತ ತಾಯಿಯ ಆರೋಪವನ್ನು ನಿರಾಕರಿಸಿದ್ದಾನೆ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಕುಟುಂಬದಲ್ಲಿನ ವೈಮನಸ್ಯದಿಂದಾಗಿ ಅಜಯ್ ಸ್ವಯಂಪ್ರೇರಣೆಯಿಂದ ತನ್ನ ಪತ್ನಿ ಜೂಲಿಯ ಬಳಿಗೆ ಹೋಗಿದ್ದು, ಕೆಲವು ದಿನಗಳ ನಂತರ ಹಿಂತಿರುದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Leave A Reply

Your email address will not be published.