Udupi: ಕಾಲೇಜು ಶೌಚಾಲಯದಲ್ಲಿ ಮೊಬೈಲ್ ಇಟ್ಟ ಪ್ರಕರಣ; ಶಾಕಿಂಗ್ ಮಾಹಿತಿ ಬಹಿರಂಗ!!!

case of keeping a mobile phone in the toilet of Udupi Nethra College

Udupi : ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ (Netra Jyothi College) ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ವಿಚಾರ ಹೊರಬಿದ್ದಿದೆ.

 

ಉಡುಪಿ (Udupi)ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್(Mobile )ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ವಿದ್ಯಾರ್ಥಿನಿಯರ (Muslim) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳು ಸ್ಫೋಟಕ ಮಾಹಿತಿ ನೀಡಿದ್ದು, ಒಂದು ವರ್ಷದಿಂದ ಇಂತಹ ಕೃತ್ಯ ಎಸಗುತ್ತಿದ್ದರೂ ಕೂಡ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಒಂದು ವರ್ಷದಿಂದಲೇ ಕಾಲೇಜಿನ ಶೌಚಾಲಯದಲ್ಲಿ(Toilet )ಮೊಬೈಲ್ ಇಡುತ್ತಿದ್ದರು. ಮೊಬೈಲ್ ಚಿತ್ರೀಕರಣವಾದ ಬಳಿಕ ಆ ಮೊಬೈಲ್ ಅನ್ನು ಮಧ್ಯಾಹ್ನದ ಸಮಯದಲ್ಲಿ ಕಾರಿನಲ್ಲಿ ಮತ್ತು ಬೈಕಿನಲ್ಲಿ ಬರುತ್ತಿದ್ದ ಯುವಕರಿಗೆ ನೀಡುತ್ತಿದ್ದರಂತೆ. ಒಂದು ವರ್ಷದಿಂದ ಈ ಕೃತ್ಯ ಎಸಗುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ಕಾಲೇಜಿನ ವಿದ್ಯಾರ್ಥಿಗಳು ಟಿವಿ 9 ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

 

ಉಡುಪಿ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ್ದ ಪ್ರಕರಣ ಮೊದಲ ಬಾರಿ ನಡೆದದ್ದಲ್ಲ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಒಂದು ವರ್ಷದಿಂದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ವಿದ್ಯಾರ್ಥಿನಿಯರು ಯುವಕರೊಂದಿಗೆ ಮೊಬೈಲ್ ಬದಲಾವಣೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಆರೋಪಿಸಿದ್ದಾರೆ. ಹೀಗಿದ್ದರೂ ಕೂಡ ಆರೋಪಿತ ವಿದ್ಯಾರ್ಥಿನಿಯರ ಮೇಲೆ ಅಡಳಿತ ಮಂಡಳಿ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ ಎಂಬುದು ವಿಪರ್ಯಾಸ. ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ಈ ಎಲ್ಲ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆಯೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

ಜುಲೈ 18 ರಂದು ನಡೆದ ಘಟನೆಯನ್ನು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಎನ್ನಲಾಗಿದೆ.ಒಂದು ವೇಳೆ ನಾವು ಪ್ರತಿಭಟಿಸದಿದ್ದರೆ ನಮ್ಮ ವಿಡಿಯೋ ಕೂಡ ಆರು ತಿಂಗಳ ಬಳಿಕ ವೈರಲ್ ಆಗುತ್ತಿತ್ತೇನೋ ಎಂದು ನೊಂದ ವಿದ್ಯಾರ್ಥಿಗಳು ತಮ್ಮ ಅಳಲನ್ನು ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.

 

ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಕಾಲೇಜು ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ತಮ್ಮದೇ ಸಮುದಾಯದ ಯುವಕರಿಗೆ ನೀಡುತ್ತಿದ್ದರು ಎನ್ನಲಾಗಿದೆ. ಎಬಿವಿಪಿ ವತಿಯಿಂದ ಈ ವಿದ್ಯಾರ್ಥಿನಿಯರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

 

ರಾಜ್ಯದ ಹಲವೆಡೆ ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧ ಭಾಗದಲ್ಲಿ ಬಿಜೆಪಿ ಪ್ರತಿಭಟನೆ ನಡೆಯುತ್ತಿದೆ.  ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ಕೂಡ ಪ್ರತಿಭಟನಾಕಾರರು ಲಗ್ಗೆ ಇಟ್ಟಿದ್ದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಎಬಿವಿಪಿ ನಾಯಕಿ  ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.

 

ಈ ವಿದ್ಯಾರ್ಥಿಗಳ ಹಿಂದೆ ಇರುವವರು ಯಾರು? ಯಾರ ಕೈವಾಡ ದಿಂದ ಈ ಕೃತ್ಯ ನಡೆಯುತ್ತಿದೆ ಎಂಬ ಕುರಿತಂತೆ ವಿವರವಾದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ನಡೆದ ಬಳಿಕ ಎಫ್‌ಐಆರ್ (FIR)ದಾಖಲಿಸಲು ತೆಗೆದುಕೊಂಡ ಕಾಲಾವಧಿ ಗಮನಿಸಿದಾಗ ಅನುಮಾನ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ .ಈ ಪ್ರಕರಣದ ಕುರಿತಂತೆ ಸರಿಯಾಗಿ ತನಿಖೆ ನಡೆಸಲು ತನಿಖಾಧಿಕಾರಿಗಳನ್ನು ಬದಲಾಯಿಸಬೇಕು. ಇದರ ಜೊತೆಗೆ ಘಟನೆಯ ತನಿಖೆಗೆ ಹೊಸ ತಂಡವನ್ನ ರಚನೆ ಮಾಡಬೇಕು. ಈ ರೀತಿಯ ಘಟನೆ ಬೇರೆ ಕಾಲೇಜುಗಳಲ್ಲಿ ಕೂಡ ನಡೆದಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹಾಯವಾಣಿ ತೆರೆಯಬೇಕು” ಎಂದು ಎಬಿವಿಪಿ (ABVP) ಸಂಘಟನೆಗಳು ಆಗ್ರಹಿಸಿದ್ದಾರೆ.

Leave A Reply

Your email address will not be published.