Cash Limit at Home: ಮನೆಯಲ್ಲಿ ಎಷ್ಟು ನಗದು ಇಡಬಹುದು? ಮಿತಿ ಹೆಚ್ಚಾದರೆ ತೆರಬೇಕೇ ದಂಡ? ಆದಾಯ ತೆರಿಗೆ ನಿಯಮ ಏನು ಹೇಳುತ್ತೆ ಗೊತ್ತಾ?

cash limit at home as per income tax department details

Cash Limit at Home: ಆನ್‌ಲೈನ್‌ ಮತ್ತು ಡಿಜಿಟಲ್‌ ತಂತ್ರಜ್ಞಾನ ಇತ್ತೀಚೆಗೆ ಹೆಚ್ಚಾಗಿದೆ. ಆದರೂ ಮನೆಯಲ್ಲಿ ಸ್ವಲ್ಪ ಹಣವನ್ನು ಇಟ್ಟು ಕೊಂಡಿರುತ್ತಾರೆ. ಆದರೆ ನಿಮಗಿದು ಗೊತ್ತೇ? ಮನೆಯಲ್ಲಿ ನಗದು ಇಡಲು ಎಷ್ಟು ಮಿತಿ ಇದೆ ಎಂದು? ಆದಾಯ ತೆರಿಗೆ ಇಲಾಖೆ ಏನು ಹೇಳುತ್ತದೆ? ಮನೆಯಲ್ಲಿ ಹೆಚ್ಚಿನ ಹಣ ಇಟ್ಟರೆ ದಂಡ ವಿಧಿಸಬಹುದೇ? ಅಷ್ಟಕ್ಕೂ ಮನೆಯಲ್ಲಿ ನಗದು ಇಡಲು ಆದಾಯ ತೆರಿಗೆ ನಿಯಮವೇನು? ಬನ್ನಿ ತಿಳಿಯೋಣ.

 

ಮನೆಯಲ್ಲಿ ನೀವು ಇಷ್ಟೇ ಹಣ ಇಡಬೇಖು ಎಂಬುವುದಕ್ಕೆ ಯಾವುದೇ ಮಿತಿಯಿಲ್ಲ. ಆದಾಯ ತೆರಿಗೆಯ ನಿಯಮಗಳ ಪ್ರಕಾರ, ಮನೆಯಲ್ಲಿ ನೀವು ಎಷ್ಟೇ ಹಣ ಇಟ್ಟುಕೊಳ್ಳಬಹುದು. ಆದರೆ ತನಿಖಾ ಸಂಸ್ಥೆ ಕೇಳಿದರೆ ಅದರ ಮೂಲವನ್ನು ನೀವು ಹೇಳಬೇಕಾಗುತ್ತದೆ. ನೀವು ಆ ಹಣವನ್ನು ಕಾನೂನುಬದ್ಧವಾಗಿ ಗಳಿಸಿದ್ದರೆ ಅದಕ್ಕೆ ಸಂಪೂರ್ಣ ದಾಖಲೆಯನ್ನು ಹೊಂದಿದ್ದರೆ ಅಥವಾ ಆದಾಯ ತೆರಿಕೆ ರಿಟರ್ನ್‌ ಸಲ್ಲಿಸಿದ್ದರೆ ಭಯ ಪಡುವ ಅಗತ್ಯವಿಲ್ಲ. ಆದರೆ ನೀವು ಅದರ ಮೂಲ ಹೇಳದಿದ್ದರೆ ನಿಮಗೆ ಕಷ್ಟವಾಗಬಹುದು.

 

ನಿಮ್ಮ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಏನಾದರೂ ದಾಳಿ ನಡೆಸಿದರೆ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡರೆ, ಅದಕ್ಕೆ ಸರಿಯಾದ ಮಾಹಿತಿ ನೀಡಲು ನಿಮಗೆ ಸಾಧ್ಯವಾಗದಿದ್ದರೆ ನೀವು ಭಾರೀ ದಂಡ ತೆರಬೇಕಾಗುತ್ತದೆ. ನಿಮ್ಮಲ್ಲಿರುವ ಮೊತ್ತಕ್ಕೆ ಆ ಮೊತ್ತದ 137%ವರೆಗೆ ತೆರಿಗೆ ವಿಧಿಸಬಹುದು. ಇದರರ್ಥ ನಿಮ್ಮತ್ರ ಇರುವ ಅಷ್ಟೂ ಹಣ ಅಧಿಕಾರಿಗಳ ಪಾಲಾಗುತ್ತದೆ. ಜೊತೆಗೆ ನೀವು ಅದರ ಮೇಲೆ ಇನ್ನೂ 37% ಪಾವತಿ ಮಾಡಬೇಕಾಗುತ್ತದೆ.

 

ನೀವೇನಾದರೂ ಬ್ಯಾಂಕ್‌ನಲ್ಲಿ ರೂ.50,000 ಕ್ಕಿಂತ ಹೆಚ್ಚಿನ ಹಣ ಪಡೆಯಲು ಅಥವಾ ಠೇವಣಿ ಇಡಬೇಕಾದರೂ ಪ್ಯಾನ್‌ ಕಾರ್ಡ್‌ ಬೇಕಾಗುತ್ತದೆ. ಒಂದು ವರ್ಷದಲ್ಲಿ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ 20ಲಕ್ಷಕ್ಕಿಂತ ಹೆಚ್ಚು ನಗದು ಠೇವಣಿ ಮಾಡಿದರೆ, ನೀವು ಪ್ಯಾನ್‌ ಮತ್ತು ಆಧಾರ್‌ ಎರಡೂ ತೋರಿಸಬೇಕಾಗುತ್ತದೆ.

Leave A Reply

Your email address will not be published.