Gyanvapi Case: ಜ್ಞಾನವಾಪಿ ಸಮೀಕ್ಷೆ: ತೀರ್ಪು ಆಗಸ್ಟ್ ಮೂರಕ್ಕೆ ಮುಂದೂಡಿಕೆ-ಅಲಹಾಬಾದ್ ಹೈಕೋರ್ಟ್!

gyanavapi campus survey case verdict released by allahabad high court

Gyanvapi Case: ಅಂಜುಮನ್ ಮಸೀದಿ ಸಮಿತಿಯು( Gyanvapi  Case) ವಾರಣಾಸಿ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ ಹಿನ್ನೆಲೆ ಈ ಕುರಿತಂತೆ  ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪನ್ನು ಅಗಸ್ಟ್  ಮೂರ ರಂದು ಪ್ರಕಟಿಸಲಿದೆ.

ಮಂಗಳವಾರ ಅಂಜುಮನ್ ಮಸೀದಿ ಸಮಿತಿಯು ವಾರಣಾಸಿ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್‌ ನಲ್ಲಿ  ಪ್ರಶ್ನೆ ಮಾಡಿದೆ. ಸದ್ಯ, ಈ  ಕುರಿತು ಮಸೀದಿ ಆವರಣದ (ವುಜುಖಾನಾ ಹೊರತುಪಡಿಸಿ)(Gyanvapi Campus Survey Case) ಸಮೀಕ್ಷೆಯನ್ನ ನಡೆಸಲು ಎಎಸ್‌ಐಗೆ ಸೂಚಿಸಲಾಗಿತ್ತು.4 ಹಿಂದೂ ಮಹಿಳೆಯರು ಜಿಲ್ಲಾ ನ್ಯಾಯಾಲಯದಲ್ಲಿ ಮಸೀದಿ ಆವರಣದಲ್ಲಿ ವರ್ಷಪೂರ್ತಿ ಪೂಜೆ ಸಲ್ಲಿಸುವಂತೆ ಮನವಿ ಸಲ್ಲಿಸಿ  ಮೊಕದ್ದಮೆ ಹೂಡಿದ್ದರು. ಈ ಅರ್ಜಿಯ  ಅನುಸಾರ ಈ ಆದೇಶ ನೀಡಲಾಗಿದೆ. ಜುಲೈ 24 ರಂದು ಸುಪ್ರೀಂ ಕೋರ್ಟ್ ಎಎಸ್‌ಐ ಸಮೀಕ್ಷೆಯನ್ನು ಜುಲೈ 26 ರವರೆಗೆ ತಡೆಹಿಡಿದಿತ್ತು.

 

ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಸರ್ವೆ ಕೈಗೊಳ್ಳಲು ವಾರಣಾಸಿ ಕೋರ್ಟ್‌ (Varanasi Court) ಅನುಮತಿ ಕೊಟ್ಟಿತ್ತು. ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ವಿವಾದಿತ ಶಿವಲಿಂಗದ ರಚನೆಯನ್ನು ಹೊರತುಪಡಿಸಿ ಸಂಕೀರ್ಣದಲ್ಲಿ ಕಾರ್ಬನ್ ಡೇಟಿಂಗ್ ನಡೆಸಲು ಅನುವು ಮಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವೈಜ್ಞಾನಿಕ ಸರ್ವೆ ಪ್ರಾರಂಭಿಸಿತ್ತು. ಇದೇ ತಿಂಗಳ ಜುಲೈ 24ರಂದು ಬೆಳಗ್ಗೆ 7 ಗಂಟೆಗೆ ಸರ್ವೆ ಕೂಡ ಶುರುವಾಗಿತ್ತು. ಈ ನಡುವೆ ಮಸೀದಿ ಪರಿಶೀಲನೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

 

ಅಲಹಾಬಾದ್ ಹೈಕೋರ್ಟ್ ಜ್ಞಾನವಾಪಿ ಕ್ಯಾಂಪಸ್‌ ನಲ್ಲಿ ಎಎಸ್‌ಐ ಸಮೀಕ್ಷೆಯ ತಡೆಯನ್ನು (Gyanvapi Campus Survey Case Latest Updates in Allahabad High Court)ಇಂದಿನವರೆಗೆ ಅಂದರೆ ಗುರುವಾರದವರೆಗೆ ವಿಸ್ತರಣೆ ಮಾಡಲಾಗಿದೆ. ಜ್ಞಾನವಾಪಿ ಕ್ಯಾಂಪಸ್‌ ನ ಎಎಸ್‌ಐ ಸಮೀಕ್ಷೆ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಅವರ ಪೀಠ ಈ ಆದೇಶ ನೀಡಿದೆ. ಈ ನಿಟ್ಟಿನಲ್ಲಿ, ಜುಲೈ 21 ರ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದು, ಈ ಕುರಿತು ಅಂಜುಮನ್ ಸಮಿತಿ ಮಂಗಳವಾರ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿತ್ತು. ಇದೀಗ ಈ ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿ  ಅಲಹಾಬಾದ್ ಹೈಕೋರ್ಟ್ ಇಂದು ಮಧ್ಯಾಹ್ನ 3.30ಕ್ಕೆ ತೀರ್ಪನ್ನು ನೀಡಲಿದೆ ಎಂದು ಹೇಳಲಾಗಿತ್ತು.ಸದ್ಯ, ಈ ತೀರ್ಪನ್ನು ಆಗಸ್ಟ್ ಮೂರಕ್ಕೆ ಮುಂದೂಡಿಕೆ ಮಾಡಲಾಗಿದೆ.

1947ರಲ್ಲಿ ಇದ್ದಂತಹ ದೇಗುಲದ ಸ್ವರೂಪ ಅದೇ ರೀತಿ ಇರುತ್ತದೆ. ಅಷ್ಟೆ ಅಲ್ಲದೇ, ಇದರ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಲು ಆಗದು ಎಂಬುದನ್ನು ಈ ಕಾಯಿದೆ ಹೇಳುತ್ತದೆ. ಈ ಕಾಯ್ದೆಯನ್ನು ಹಿಂದೂ ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ  ಮಾಡಿದೆ. ವಾರಣಾಸಿಯಲ್ಲಿ 1993 ರವರೆಗೆ ಜ್ಞಾನವಾಪಿ ಸಂಕೀರ್ಣದಲ್ಲಿ ಭಕ್ತರು ಪೂಜೆ ಸಲ್ಲಿಸುತ್ತಿದ್ದರು ಎಂಬುದು ಹಿಂದೂ ಧರ್ಮದವರು  ಹೇಳುತ್ತಿದ್ದಾರೆ.

ಬುಧವಾರ ಈ ಪ್ರಕರಣದ ವಿಚಾರಣೆ ವೇಳೆ, ಅಲಹಾಬಾದ್ ಹೈಕೋರ್ಟ್ ಎಎಸ್ಐ ನಡೆಸಿದ ಜ್ಞಾನವಾಪಿ ಕ್ಯಾಂಪಸ್ ಸಮೀಕ್ಷೆಯ ಬಗ್ಗೆ  ಅನೇಕ ಅನುಮಾನಗಳನ್ನು ವ್ಯಕ್ತ ಪಡಿಸಿದ್ದಾರೆ. ಎಎಸ್‌ಐ ಪರವಾಗಿ ಹಾಜರಾದ ಎಎಸ್‌ಜಿ, ಉದ್ದೇಶಿತ ಸಮೀಕ್ಷೆಯ ಸ್ಪಷ್ಟವಾದ ಮಾಹಿತಿ ನೀಡುವಲ್ಲಿ ಜೊತೆಗೆ ನ್ಯಾಯಾಲಯಕ್ಕೆ ಸಮಂಜಸ ಮಾಹಿತಿ ನೀಡಿಲ್ಲ ಎನ್ನಲಾಗಿದೆ.  ಇದರ ಜೊತೆಗೆ ಹಿಂದೂಗಳ ಈ ಬೇಡಿಕೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಜೊತೆಗೆ ಆರಾಧನಾ ಕಾಯ್ದೆ 1992ರ ಉಲ್ಲಂಘನೆಯಾಗುವುದೆಂದು ಮುಸ್ಲಿಂ ಸಮುದಾಯದ ಕೆಲವರು ಹೇಳಿಕೆ ನೀಡಿ ಈ ಬೇಡಿಕೆಯನ್ನು ವಿರೋಧಿಸಿದ್ದಾರೆ.

ದೇವಸ್ಥಾನವನ್ನು ಯಾವಾಗ ನಿರ್ಮಿಸಲಾಯಿತು ಎಂದು ಹಿಂದೂಗಳ ಕಡೆಯವರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿಯವರ ಪ್ರಶ್ನೆಗೆ ವಿಷ್ಣು ಶಂಕರ್ ಜೈನ್ ಅವರು, “ಹೊಸ ದೇವಾಲಯವನ್ನು ಅಹಲ್ಯಾಬಾಯಿ ಹೋಳ್ಕರ್ ಅವರು ನಿರ್ಮಿಸಿದ್ದಾರೆ. ಔರಂಗಜೇಬ್ ಅವರು ಹಳೆಯ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದರು” ಎಂದು ಹೇಳಿಕೆ ನೀಡಿದ್ದಾರೆ.

 

ಇಂದು ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಿದ ಎಎಸ್‌ಐ, ಆಗಸ್ಟ್ 4 ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವುದಾಗಿ ಮತ್ತು ಜ್ಞಾನವಾಪಿ ಆವರಣಕ್ಕೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಪೀಠಕ್ಕೆ ಮನವಿ ಮಾಡಿದ್ದಾರೆ. ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕುರಿತು ಆಗಸ್ಟ್ 3 ರಂದು ತೀರ್ಪು ನೀಡುವುದಾಗಿ ಅಲಹಾಬಾದ್ ಹೈಕೋರ್ಟ್ ಗುರುವಾರ ತಿಳಿಸಿದ್ದು, ಅಲ್ಲಿಯವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಸಮೀಕ್ಷೆಯನ್ನು ನಿಲ್ಲಿಸಲು ಸೂಚನೆ ನೀಡಿದೆ.

Leave A Reply

Your email address will not be published.