Amitabh Bachchan: ‘Bra’ ಏಕವಚನ, ‘ಪ್ಯಾಂಟೀಸ್’ ಏಕೆ ಬಹುವಚನ ಎಂದು ಟ್ವೀಟ್ ಮಾಡಿದ ಬಚ್ಚನ್!!!

Latest news Bachchan tweeted why 'Bra' is singular, 'Panties' is plural

Amitabh Bachchan: ಬಾಲಿವುಡ್(Bollywood) ನಟ ಅಮಿತಾಬ್ ಬಚ್ಚನ್ (Amitabh Bachchan)ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ನಟನೆಯ ಮೂಲಕ ಜನಮಾನಸದಲ್ಲಿ ಹೆಸರು ಪಡೆದಿರುವ ಬಿಗ್ ಬಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ (Amitabh Bachchan) ತಮ್ಮ ಪ್ರಭುತ್ವ ನಟನೆಯ ಮೂಲಕ ಕೂಡ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗಿರುವ ನಟನ ಮೇಲೆ ನೆಟ್ಟಿಗರು ಯಾಕೋ ಮುನಿಸಿಕೊಂಡಿದ್ದಾರೆ.

ಸೆಲೆಬ್ರಿಟಿ ಎಂದರೆ ಸಾಕು! ಅವರು ಕುಂತರೂ ನಿಂತರೂ ಸುದ್ದಿಯಾಗುವುದು ಮಾಮೂಲಿ. ಅದರಲ್ಲಿಯೂ ಅವರು ಮಾಡುವ ಪೋಸ್ಟ್, ಬರಹಗಳಲ್ಲಿ ಸಣ್ಣ ತಪ್ಪು ಸಿಕ್ಕರೂ ಸಾಕು. ಉಳಿದವರ ಪಾಲಿನ ಆಹಾರವಾದಂತೆ. ಸೋಶಿಯಲ್ ಮೀಡಿಯಾದಲ್ಲಿ ಅಮಿತಾಬ್ ಬಚ್ಚನ್ ಎಂದೋ ಬರೆದುಕೊಂಡಿದ್ದ ಸಾಲುಗಳು ಮತ್ತೆ ವೈರಲ್ ಆಗಿ ಸಂಚಲನ ಮೂಡಿಸಿದೆ.ಯಾವುದೋ ಸಂದರ್ಭದಲ್ಲಿ ಹಾಕಿದ ಟ್ವೀಟ್ಗಳನ್ನು ಇಟ್ಟುಕೊಂಡು ದಶಕಗಳ ಬಳಿಕ ಅದನ್ನು ಟ್ರೋಲ್ ಮಾಡುವ ಪ್ರಕ್ರಿಯೆ ನಡೆಯುವುದು ಕಾಮನ್ . ಈಗ ನಟ ಅಮಿತಾಭ್ ಬಚ್ಚನ್ (Amitabh Bacchan) ಅವರ ಸರತಿ.

ಟ್ವಿಟರ್ ಖಾತೆ ತೆರೆದ ಸಂದರ್ಭದಲ್ಲಿ ಅವರು ಮಾಡಿದ್ದ ಟ್ವೀಟ್ ವೈರಲ್ ಆಗಿದ್ದು, ಸದ್ಯ, ಈ ಟ್ವೀಟ್ ಮಾಡಿದ್ದು ದಶಕಗಳ ಹಿಂದೆ. ಹೀಗಿದ್ದರೂ ಕೂಡ ನೆಟ್ಟಿಗರು ಮಾತ್ರ ಬಿಗ್ ಬಿ ಅವರ ಕಾಲೆಳೆಯುವ ಸಣ್ಣ ಅವಕಾಶ ಸಿಕ್ಕರೂ ಮಿಸ್ ಮಾಡೋಲ್ಲ ಎಂಬುದಕ್ಕೆ ಇದೇ ಸಣ್ಣ ನಿದರ್ಶನ. ಅಮಿತಾಭ್‌ ಬಚ್ಚನ್‌ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ ಆಗುತ್ತಿದ್ದು, 2010ರಲ್ಲಿ ಅಮಿತಾಬ್ ಬಚ್ಚನ್ ರವರು ಮಾಡಿರುವ ಟ್ವೀಟ್‌ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲ, ಈ ಟ್ವೀಟ್ ವಿರುದ್ದ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಷ್ಟಕ್ಕೂ ಯಾವುದು ಈ ಟ್ವೀಟ್ ಎಂದು ಗಮನಿಸಿದರೆ, 2010ರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ” ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ” ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದರು. ಪದಗಳ ಸಂಬೋಧನೆ ಕುರಿತು ಅವರು ತಮಾಷೆಯಾಗಿ ಬರೆದುಕೊಂಡಿದ್ದರು. ಇದೇ ವಿಚಾರದ ಕುರಿತಾಗಿ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ.
ಅದರಲ್ಲಿ ಒಬ್ಬರಂತು, “ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. “ಕೊನೆಗೂ ಒಬ್ಬರಾದರೂ ತುಂಬ ಪ್ರಮುಖ ಪ್ರಶ್ನೆ ಕೇಳಿದರು” ಎಂದು ನೆಟ್ಟಿಗರೊಬ್ಬರುಅಮಿತಾಬ್ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಇದೇ ರೀತಿ ಮತ್ತೊಬ್ಬರು “ತುಂಬ ಒಳ್ಳೆಯ ಪ್ರಶ್ನೆ. ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮುಂದಿನ ಸೀಸನ್‌ನಲ್ಲಿ ಈ ಪ್ರಶ್ನೆ ಕೇಳಿ” ಎಂದು ವ್ಯಕ್ತಿಯೊಬ್ಬ ವ್ಯಂಗ್ಯವಾಗಿ ಅಸಮಾಧಾನ ಹೊರ ಹಾಕಿದ್ದಾರೆ

Leave A Reply

Your email address will not be published.