Excitel Plans: ಕೇವಲ 592 ರೂ.ಗಳಲ್ಲಿ 1 ವರ್ಷಕ್ಕೆ ಇಂಟರ್ನೆಟ್‌, ಒಟಿಟಿ ಮತ್ತು ಲೈವ್‌ ಟಿವಿ ಆನಂದಿಸಿ, ಈ ಯೋಜನೆಯ ಅದ್ಭುತ ಪ್ರಯೋಜನ ನಿಮಗಾಗಿ!

Latest news Excitel Plans excitel cable cutter plan super speed and live tv

Excitel Plans: ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸುವ ಕಂಪನಿಯಾದ ಎಕ್ಸಿಟೆಲ್ ಬಳಕೆದಾರರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಹೆಸರು ಎಕ್ಸಿಟೆಲ್ ಕೇಬಲ್ ಕಟರ್ ಪ್ಲಾನ್(Excitel Cable Cutter Plan Price). ಈ ಯೋಜನೆಯ ಮುಖ್ಯ ಉದ್ದೇಶ, ಜನರು ಮನರಂಜನೆಯನ್ನು ಅನುಭವಿಸುವುದು, ಜೊತೆಗೆ ಜನರು ಟಿವಿ ವೀಕ್ಷಿಸಲು ಮಾಡುವ ವೆಚ್ಚವನ್ನು ಕಡಿಮೆ ಮಾಡುವುದು. ಮನರಂಜನೆಯ ಅನುಭವವನ್ನು ಸುಧಾರಿಸುವುದು ಇದರ ಮುಖ್ಯ ಉದ್ದೇಶ. ಹಾಗಾಗೆ ಈ ಯೋಜನೆಯ ವೆಚ್ಚ ಎಷ್ಟು ಮತ್ತು ಈ ಯೋಜನೆಯಿಂದ ನೀವು ಪಡೆಯುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಎಕ್ಸಿಟೆಲ್ ಕೇಬಲ್ ಕಟ್ಟರ್ ಯೋಜನೆ ಬೆಲೆ: ವೆಚ್ಚ ಎಷ್ಟು?
ಈ ಯೋಜನೆ 592 ರೂಪಾಯಿಂದ ಪ್ರಾರಂಭವಾಗುತ್ತದೆ. ಇದು 12 ತಿಂಗಳ ಚಂದಾದಾರಿಕೆಯೊಂದಿಗೆ ಈ ಹೊಸ ಪ್ಲ್ಯಾನ್‌ ಶುರುವಾಗಲಿದೆ. ಈ ಯೋಜನೆಯೊಂದಿಗೆ ಲಭ್ಯವಿರುವ OTT ಅಪ್ಲಿಕೇಶನ್‌ಗಳ ಕುರಿತು ಇಲ್ಲಿದೆ ಮಾಹಿತಿ.

ಕಂಪನಿಯ ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಬಳಕೆದಾರರು 3 ತಿಂಗಳವರೆಗೆ ಈ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದರ ವೆಚ್ಚ 847 ರೂ. ಆದರೆ 12 ತಿಂಗಳ ಯೋಜನೆಯನ್ನು ಒಟ್ಟಿಗೆ ಖರೀದಿಸಿದರೆ ಅದೇ ಪ್ಲಾನ್ 592 ರೂಗಳಿಗೆ ಲಭ್ಯವಿರುತ್ತದೆ. ಕಂಪನಿಯು 6 ತಿಂಗಳ ಯೋಜನೆಯನ್ನು ತರಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈ ಯೋಜನೆಯ ಮೂಲಕ ನೀವು 12 ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳು ಮತ್ತು 550ಕ್ಕೂ ಹೆಚ್ಚು ಲೈವ್‌ ಟಿವಿ ಚಾನೆಲ್‌ಗಳನ್ನು ಪಡೆಯುತ್ತೀರಿ. ಇಲ್ಲಿ ಗ್ರಾಹಕರಿಗೆ 400Mbps ವರೆಗೆ ಇಂಟರ್ನೆಟ್‌ ವೇಗವಿರುತ್ತದೆ.

ಎಕ್ಸಿಟೆಲ್ ಕೇಬಲ್ ಕಟ್ಟರ್ ಯೋಜನೆ OTT: ಈ OTT ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಪಡೆಯುತ್ತದೆ. ನೀವೇನಾದರೂ ರೀಚಾರ್ಜ್‌ ಮಾಡಿದರೆ, Disney+ Hotstar ಹೊರತುಪಡಿಸಿ, ನೀವು SonyLIV ಮತ್ತು ZEE5 ಸೇರಿದಂತೆ ಇತರ OTT ಅಪ್ಲಿಕೇಶನ್‌ಗಳ ಪ್ರಯೋಜನವನ್ನು ಪಡೆಯುತ್ತೀರಿ. ಈ OTT ಅಪ್ಲಿಕೇಶನ್‌ಗಳ ಹೊರತಾಗಿ, ಈ ಯೋಜನೆಯೊಂದಿಗೆ ನಿಮಗೆ Hungama Play, ALT ಬಾಲಾಜಿ, Hungama Music, Shemaroo, Hubhopper, DistroTV, Fancode, PlayboxTV ಮತ್ತು Epicon ನಂತಹ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ

Leave A Reply

Your email address will not be published.