The Hunt for Veerappan Trailer: ದಂತಚೋರ ವೀರಪ್ಪನ್‌ ಕುರಿತ ಕಥೆ ಸರಣಿ ರೂಪದಲ್ಲಿ ಬಿಡುಗಡೆ! ನೆಟ್‌ಫ್ಲಿಕ್ಸ್‌ನಲ್ಲಿ ಟ್ರೈಲರ್‌ ಬಿಡುಗಡೆ

Latest news film of The Hunt for Veerappan Trailer released on Netflix

ನೆಟ್‌ಫ್ಲಿಕ್ಸ್‌ ನಲ್ಲಿ ದಂತಚೋರ ವೀರಪ್ಪನ್‌ ಕುರಿತು ಹೊಸ ಸಾಕ್ಷ್ಯಚಿತ್ರವೊಂದನ್ನು ಸರಣಿ ರೂಪದಲ್ಲಿ ಬರಲು ರೆಡಿಯಾಗಿದೆ. ಈ ಕುರಿತು ಟ್ರೇಲರೊಂದು ಬಂದಿದೆ. ಇದರಲ್ಲಿ ವೀರಪ್ಪನ್‌ ಅಪರಾಧಗಳನ್ನು ಉಲ್ಲೇಖಿಸಲಾಗಿದೆ.
ವೀರಪ್ಪನ್ 119 ಜನರನ್ನು ಕೊಂದಿದ್ದಾನೆ ಎಂದು ಈ ಟ್ರೈಲರ್‌ನಲ್ಲಿ ಹೇಳಲಾಗಿದೆ. ಈ ಟ್ರೇಲರ್ ಅನ್ನು ಹಂಚಿಕೊಂಡ ನೆಟ್‌ಫ್ಲಿಕ್ಸ್, “ದಿ ಹಂಟ್‌ ಫಾರ್‌ ವೀರಪ್ಪನ್‌” ಎಂದು ಬರೆದಿದೆ.

ಈ ಸರಣಿಯ ಬಗ್ಗೆ ಹೇಳುವುದಾದರೆ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದರ ಬಿಡುಗಡೆ ದಿನಾಂಕ ಆಗಸ್ಟ್ 4. ವೀರಪ್ಪನ್‌ ಕುರಿತಾದ ಸಿನಿಮಾ ಇದೇ ಮೊದಲಲ್ಲ ತೆರೆ ಮೇಲೆ ಬರ್ತಾ ಇರೋದು. 2016 ರಲ್ಲಿ, ವೀರಪ್ಪನ್ ಹೆಸರಿನ ಚಲನಚಿತ್ರ ಮಾಡಲಾಗಿತ್ತು. ಅದರಲ್ಲಿ ನಟ ಸಂದೀಪ್ ಭಾರದ್ವಾಜ್ ಅವರು ವೀರಪ್ಪನ್‌ ಪಾತ್ರವನ್ನು ಮಾಡಿದ್ದರು. ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಶಿವರಾಜ್‌ಕುಮಾರ್, ಸಚಿನ್ ಜೆ ಜೋಶಿ, ಲೈಸ್ ರೇ ಮತ್ತು ಜರೀನ್ ಖಾನ್ ಮುಂತಾದ ತಾರೆಯರು ನಟಿಸಿದ್ದರು.

ಈ ಚಲನಚಿತ್ರವು OTT ಪ್ಲಾಟ್‌ಫಾರ್ಮ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಆದರೆ, ದಿ ಹಂಟ್ ಫಾರ್ ವೀರಪ್ಪನ್ ಎಂಬ ವೆಬ್ ಸೀರಿಸ್ ಬಗ್ಗೆ ಹೇಳಲಾಗುತ್ತಿದ್ದು, ಇದು ನಾಲ್ಕು ಕಂತುಗಳ ಸರಣಿಯಲ್ಲಿ ಪ್ರಸಾರವಾಗಲಿದೆ.

Leave A Reply

Your email address will not be published.