Bank Holiday list August 2023: ಆಗಸ್ಟ್‌ನಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಇಟ್ಟುಕೊಂಡಿದ್ದೀರಾ? ಹಾಗಾದರೆ ಈ ದಿನ ಖಂಡಿತ ಹೋಗಬೇಡಿ, ಬ್ಯಾಂಕ್‌ ರಜಾ ಲಿಸ್ಟ್‌ ಬಿಡುಗಡೆ!

Latest news holidays news Bank Holiday list August 2023

Bank Holidays in August 2023: ಈಗ ಮುಂಚಿನಂತೆ ಗಂಟೆಗಟ್ಟಲೆ ಬ್ಯಾಂಕ್ ನಲ್ಲಿ ಕ್ಯೂ(Que) ನಿಂತು ಹಣ ಪಡೆಯಬೇಕಾಗಿಲ್ಲ ಆದರೂ ಕೂಡಾ ಕೆಲವೊಮ್ಮೆ ಬ್ಯಾಂಕ್ ಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾದಾಗ ರಜೆಯ ಬಗ್ಗೆ ಮಾಹಿತಿ ತಿಳಿಯದೆ ಭೇಟಿ ಕೊಟ್ಟರೆ ಕಾಲಹರಣ ಆಗುವ ಜೊತೆಗೆ ಅಂದುಕೊಂಡ ಕೆಲಸ ಕೂಡ ಆಗುವುದಿಲ್ಲ. ಹೀಗಿದ್ದಾಗ ಬ್ಯಾಂಕ್ ರಜೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಮಾಡಲು ಬಾಕಿ ಉಳಿದಿದ್ದರೆ ಈಗಲೇ ಮಾಡಿಕೊಳ್ಳುವುದು ಉತ್ತಮ. ಯಾಕೆ ಗೊತ್ತಾ?ಅಲ್ಲದೆ, ಆಗಸ್ಟ್ ತಿಂಗಳಲ್ಲಿ 14 ದಿನ ಬ್ಯಾಂಕ್‌ಗಳು ರಜೆ,(Bank Holiday) ಇರುವ ಹಿನ್ನೆಲೆ ಮುಚ್ಚಿರುತ್ತದೆ.2023 ರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ರಾಜ್ಯವಾರು ನಿರ್ದಿಷ್ಟ ಬ್ಯಾಂಕ್ ರಜಾದಿನಗಳ (Bank Holidays) ಜೊತೆಗೆ ಇತರ ರಜಾದಿನಗಳಿವೆ.

ದೇಶದ ಹೆಚ್ಚಿನ ಬ್ಯಾಂಕ್ಗಳ ಕೆಲಸವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುವುದು ಗೊತ್ತಿರುವ ವಿಚಾರವೇ!! ಬ್ಯಾಂಕ್ ರಜೆಯ ಕುರಿತಾಗಿ, ಆರ್ ಬಿಐ(RBI) ಪ್ರತಿ ತಿಂಗಳ ಬಿಐ ಪ್ರತಿ ತಿಂಗಳು ರಜಾಪಟ್ಟಿ( Bank Holidays List)ಬಿಡುಗಡೆ ಮಾಡಲಿದ್ದು, ರಿಸರ್ವ್ ಬ್ಯಾಂಕ್ ಒಪ್ಪಿಗೆಯ ಬಳಿಕ ಬ್ಯಾಂಕ್ ರಜಾದಿನಗಳ ತೀರ್ಮಾನ ಕೈಗೊಳ್ಳಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು(Private Banks )ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಭಾನುವಾರದಂದು ಕಾರ್ಯನಿರ್ವಹಿಸುವುದಿಲ್ಲ. ಅದರ ಅನ್ವಯ, ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಬ್ಯಾಂಕ್ ಗಳ ರಜಾ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಲಿದ್ದು, ಇದೀಗ ಮುಂದಿನ ತಿಂಗಳು ಆಗಸ್ಟ್ ತಿಂಗಳ ರಜಾ ದಿನಗಳ (Bank Holidays in August 2023)ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು 14 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ.

ಆಗಸ್ಟ್ ತಿಂಗಳಲ್ಲಿ ಯಾವೆಲ್ಲ ದಿನ ರಜೆ ಇರಲಿದೆ?

ಆಗಸ್ಟ್ 6 : (ಭಾನುವಾರ)
ಆಗಸ್ಟ್ 8 : (ಮಂಗಳವಾರ): ಟೆಂಡಾಂಗ್‌ನಲ್ಲಿ ರಮ್ ಫಟ್- ಸಿಕ್ಕಿಂನಲ್ಲಿ ಬ್ಯಾಂಕುಗಳಲ್ಲಿ ಮಾತ್ರ ರಜೆ.
ಆಗಸ್ಟ್ 12 : (ಎರಡನೇ ಶನಿವಾರ)
ಆಗಸ್ಟ್ 13 : (ಭಾನುವಾರ)
ಆಗಸ್ಟ್ 15: (ಮಂಗಳವಾರ), ಸ್ವಾತಂತ್ರ್ಯ ದಿನದ ಹಿನ್ನೆಲೆ ಬ್ಯಾಂಕ್ ರಜೆ .
ಆಗಸ್ಟ್ 16 : (ಬುಧವಾರ) ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ) ,ಮಹಾರಾಷ್ಟ್ರದಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 18 : (ಶುಕ್ರವಾರ): ಶ್ರೀಮಂತ್ ಶಂಕರದೇವ್ ದಿನಾಂಕ- ಅಸ್ಸಾಂನಲ್ಲಿ ಬ್ಯಾಂಕುಗಳಿಗೆ ರಜೆ
ಆಗಸ್ಟ್ 20: (ಭಾನುವಾರ)
ಆಗಸ್ಟ್ 26: ( ನಾಲ್ಕನೇ ಶನಿವಾರ).
ಆಗಸ್ಟ್ 27 : (ಭಾನುವಾರ)
ಆಗಸ್ಟ್ 28 : (ಸೋಮವಾರ)ಮೊದಲ ಓಣಂ ಹಿನ್ನೆಲೆ ಕೇರಳದಲ್ಲಿ ಬ್ಯಾಂಕುಗಳಿಗೆ ರಜೆ.
ಆಗಸ್ಟ್ 29 : (ಮಂಗಳವಾರ) ಕೇರಳದ ತಿರುವೋಣಂನಲ್ಲಿ ಬ್ಯಾಂಕುಗಳಿಗೆ ರಜೆ.
ಆಗಸ್ಟ್ 30: (ಬುಧವಾರ)ರಕ್ಷಾ ಬಂಧನದ ಹಿನ್ನಲೆ ರಾಜಸ್ಥಾನ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬ್ಯಾಂಕುಗಳಿಗೆ ರಜೆ .
ಆಗಸ್ಟ್ 31: (ಗುರುವಾರ)ರಕ್ಷಾ ಬಂಧನ/ಶ್ರೀ ನಾರಾಯಣ ಗುರು ಜಯಂತಿ/ಪಾಂಗ್-ಲಬೋಲ್- ಉತ್ತರಾಖಂಡ, ಅಸ್ಸಾಂ, ಕೇರಳ, ಉತ್ತರ ಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ.

ಆಗಸ್ಟ್ ನಲ್ಲಿ ಬ್ಯಾಂಕುಗಳಿಗೆ ರಜೆಯಿರುವ ದಿನ ಆನ್ ಲೈನ್ ವಹಿವಾಟಿಗೆ (Online transaction) ಹಾಗೂ ಎಟಿಎಂ ವ್ಯವಹಾರಗಳಿಗೆ (ATM transaction) ಯಾವುದೇ ಸಮಸ್ಯೆ ತಲೆದೋರದು. ಆದರೆ, (Bank) ಬ್ಯಾಂಕ್ ಗಳಿಗೆ ಭೇಟಿ ನೀಡ ಬೇಕಾದ ಅನಿವಾರ್ಯತೆ ಇದ್ದರೆ ರಜೆ ದಿನ ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಮಾಡಿಕೊಳ್ಳಬಹುದು

Leave A Reply

Your email address will not be published.