Ration Card: BPL ಕಾರ್ಡ್ ಹೊಂದಿರುವವರೇ ಬಂತು ನೋಡಿ ಹೊಸ ರೂಲ್ಸ್! ಅಕ್ಕಿ, ಹಣ ವಿತರಣೆ ಈ ಕಾರಣದಿಂದ ಖಂಡಿತ ಸ್ಟಾಪ್ ಆಗುತ್ತೆ, ಗಮನಿಸಿ!!!

Latest news Important announcement for bpl card holders and your ration card may be cancelled

Ration Card: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಬದಲಾಗಿ ಹಣ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ನಡುವೆ ಅನ್ನ ಭಾಗ್ಯ ಯೋಜನೆಯ(Annabhagya Scheme) ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ (Ration Card)ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ 5 ಕೆಜಿ ಅಕ್ಕಿಯ (Rice)ಬದಲಿಗೆ ಕೆಜಿಗೆ 34 ರೂಪಾಯಿಯ ಹಾಗೆ ಕುಟುಂಬದ ಸದಸ್ಯರೊಬ್ಬರಿಗೆ 170 ರೂ. ಯಂತೆ ಸರ್ಕಾರ ಈಗಾಗಲೇ ಬ್ಯಾಂಕ್ ಖಾತೆಗೆ(Bank Account)ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ನಡುವೆ ಪಡಿತರ ಹಣ ನೀಡುವುದು ತಾತ್ಕಾಲಿಕ ಕ್ರಮವಾಗಿದ್ದು, ಅಕ್ಕಿ ಕೊರತೆ ಸಮಸ್ಯೆ ನೀಗಿದ ನಂತರ 10 ಕೆಜಿ ಅಕ್ಕಿ ನೀಡಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ರಾಜ್ಯದಲ್ಲಿರುವ 1.28 ಕೋಟಿ ಬಿಪಿಎಲ್ ಕಾರ್ಡ (BPL Card)ಗಳ ಪೈಕಿ ಅಂದಾಜು 8 ಲಕ್ಷ ಕಾರ್ಡ್ ದಾರರು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ (Ration Shop)ಅಕ್ಕಿ ಪಡೆಯುತ್ತಿಲ್ಲ. ಅನೇಕ ತಿಂಗಳಿನಿಂದ ಹಲವು ಬಿಪಿಎಲ್ ಕಾರ್ಡ್ದಾರರು ಅಕ್ಕಿ ಪಡೆದುಕೊಂಡಿಲ್ಲ. ಕೇವಲ ಆಯುಷ್ಮಾನ್ ಭಾರತ್ ಆರೋಗ್ಯ (Ayushman Bharat Health Card)ಸೇವೆ ಮತ್ತಿತರ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವ ಸಲುವಾಗಿ ಬಿಪಿಎಲ್ ಕಾರ್ಡ್ ಉಪಯೋಗಿಸುತ್ತಿದ್ದಾರೆ.

ನಿಜವಾಗಿಯೂ ಯಾರಿಗೆ ಈ ಯೋಜನೆಯ ಪ್ರಯೋಜನ ಸಿಗಬೇಕೋ ಅವರಿಗೆ ಸಿಗದೇ ಅಗತ್ಯವಿಲ್ಲದವರ ಹೆಸರಿನಲ್ಲಿ ಅಕ್ಕಿ ದುರ್ಬಳಕೆ ಆಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.ಅಕ್ಕಿ ಪಡೆಯದ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಹಚ್ಚಿ ಅಂತವರನ್ನು ಉಚಿತ ಅಕ್ಕಿ ವಿತರಣೆಯಿಂದ ಹೊರಗಿಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮನೆಮನೆ ಸಮೀಕ್ಷೆ ಕೈಗೊಳ್ಳಲಾಗುವ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದ ಬಿಪಿಎಲ್ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ನೀಡುವ ನಗದು ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಸಚಿವರಾದ ಕೆ.ಹೆಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ. ಹೊಸ ಬಿಪಿಎಲ್ ಕಾರ್ಡ್ ಗಾಗಿ ಮೂರು ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಸದ್ಯದಲ್ಲೇ ಎಲ್ಲಾ ಅರ್ಜಿ ಪರಿಶೀಲಿಸಿ ಅರ್ಹರಿಗೆ ಕಾರ್ಡ್ ವಿತರಣೆ ಮಾಡುವ ಕುರಿತು ಸಚಿವರು ಮಾಹಿತಿ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ದಾರರಿಗೆ ನೆರವಾಗುವ ನಿಟ್ಟಿನಲ್ಲಿ ಉಚಿತವಾಗಿ ಸರ್ಕಾರ ಅಕ್ಕಿ ನೀಡುತ್ತಿದ್ದರು ಕೂಡ ಕೆಲವರು ಈ ಯೋಜನೆಯ ದುರ್ಬಳಕೆ ಮಾಡುತ್ತಿದ್ದು, ಅಕ್ಕಿ ಪಡೆದು ಮಾರಾಟ ಮಾಡುವ ಇಲ್ಲವೇ ಬೇರೆಯವರಿಗೆ ನೀಡುವುದು ಮಾಡುತ್ತಿದ್ದಾರೆ. ಈ ರೀತಿ ದುರ್ಬಳಕೆ ಆಗುವುದನ್ನು ತಪ್ಪಿಸಲು ಅಕ್ಕಿ ವಿತರಿಸಲು ಸಚಿವರಾದ ಮುನಿಯಪ್ಪರವರು ಸಮೀಕ್ಷೆ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.ಆಂಧ್ರಪ್ರದೇಶ ಮಾದರಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಎಷ್ಟು ಮಂದಿ ಅಕ್ಕಿ ಪಡೆಯುವವರು ಎಷ್ಟು ? ವೈದ್ಯಕೀಯ ಸೌಲಭ್ಯ ಪಡೆಯುವವರು ಎಷ್ಟು ಮಂದಿ? ಎಂಬುದನ್ನು ಪರಿಶೀಲಿಸಿ ಎರಡು ಮಾದರಿಯ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸುವ ಚಿಂತನೆ ನಡೆಸಲಾಗುತ್ತಿದೆ.

Leave A Reply

Your email address will not be published.