8th Pay Commission: ಸರಕಾರಿ ನೌಕರರಿಗೆ ಮುಖ್ಯ ಮಾಹಿತಿ! 8ನೇ ವೇತನ ಆಯೋಗ ರಚನೆ ಕುರಿತು ಕೇಂದ್ರ ನಿರಾಕರಣೆ!!!

latest news politics important information regarding 8th pay commission

8th Pay Commission : ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ. ಡಿಎ ಮಾತ್ರವಲ್ಲದೇ ಭತ್ಯೆಯಲ್ಲಿ ಕೂಡ ಭಾರೀ ಹೆಚ್ಚಳವಾಗಲಿದ್ದು, ಸರಕಾರಿ ನೌಕರರ ವೇತನ ದುಪ್ಪಟ್ಟು ಆಗುವ ಸಾಧ್ಯತೆ ದಟ್ಟವಾಗಿದೆ.

 

ಕೇಂದ್ರ ಸರ್ಕಾರ ಕೇಂದ್ರ ನೌಕರರ ವೇತನದಲ್ಲಿ ಮತ್ತೊಮ್ಮೆ ತುಟ್ಟಿಭತ್ಯೆ(ಡಿಎ) ಹೆಚ್ಚಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದು, ಹೀಗಾಗಿ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರ (Central Government) ತನ್ನ ಉದ್ಯೋಗಿಗಳಿಗೆ (Central Government Employees) ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಕೇಂದ್ರ ಸರ್ಕಾರವು ತನ್ನ ಸರ್ಕಾರಿ ಉದ್ಯೋಗಿಗಳ(Central Govt Employees) ತುಟ್ಟಿಭತ್ಯೆಯನ್ನು (DA) ಶೇ.4 ರಷ್ಟು 2023ರ ಮಾರ್ಚ್‌ನಲ್ಲಿ ಹೆಚ್ಚಳ ಮಾಡಿದ್ದು, ನೌಕರರು (Government Workers) ತಮ್ಮ ಮೂಲ ವೇತನದ ಮೇಲೆ 4 ಪ್ರತಿಶತ ಡಿಎ ಪಡೆಯಬಹುದಾಗಿದ್ದು ಈ ಹೆಚ್ಚಳ ಜನವರಿಯಿಂದಲೇ ಅನ್ವಯವಾಗಲಿದೆ.

 

8ನೇ ವೇತನ ಆಯೋಗಕ್ಕೆ( 8th Pay Commission)ಸಂಬಂಧಿಸಿದಂತೆ ಸರ್ಕಾರದಿಂದ ಮುಖ್ಯ ಮಾಹಿತಿ ಪ್ರಕಟವಾಗಿದೆ. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ 2014ರಲ್ಲಿ 7ನೇ ವೇತನ ಆಯೋಗವನ್ನು ಹೊರಡಿಸಿದ್ದಾರೆ. ಪ್ರಸ್ತುತ ನೌಕರರು ಇದರನ್ವಯ ವೇತನ ಪಡೆಯುತ್ತಿದ್ದು, ಇದರೊಂದಿಗೆ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಏರಿಕೆ ಮಾಡಲಾಗುವ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯ ನೌಕರರು ಏಳನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಪ್ರಸ್ತುತ 8ನೇ ವೇತನ ಆಯೋಗ ರಚನೆಯ ಕುರಿತಂತೆ ಯಾವುದೇ ಪ್ರಸ್ತಾಪವಿಲ್ಲ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದ್ದಾರೆ.

 

ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ವೇತನ, ಭತ್ಯೆ ಮತ್ತು ಪಿಂಚಣಿ ರಚನೆಯನ್ನು ಬದಲಾವಣೆ ಮಾಡುವ ಬದಲಿಗೆ ಹೊಸ ಆಯೋಗವನ್ನು ಸ್ಥಾಪಿಸುವ ಅವಶ್ಯಕತೆಯಿಲ್ಲ. ಎಲ್ಲಾ ಭತ್ಯೆಗಳು ಮತ್ತು ವೇತನಗಳನ್ನು ಐಕ್ರಾಯ್ಡ್ ಸೂತ್ರದ ಆಧಾರದ ಮೇಲೆ ಪರಿಶೀಲನೆ ಮಾಡಬಹುದು ಎಂದು ಹೇಳಿದೆ.ಈ ನಡುವೆ, ಕೇಂದ್ರ ನೌಕರರ ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯ ಅನುಸಾರ ಕೆಲಸಕ್ಕೆ ಅನುಗುಣವಾಗಿ ರೇಟಿಂಗ್ ಪಾಯಿಂಟ್ ಗಳಿಸುತ್ತಾರೆ. ಇದರ ಆಧಾರದ ಮೇಲೆ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೆ. ಸಾಮಾನ್ಯವಾಗಿ ವೇತನ ಆಯೋಗವನ್ನು 10 ವರ್ಷಗಳಿಗೆ ಜಾರಿಗೆ ಕಳುಹಿಸಲಾಗುತ್ತದೆ. 10 ವರ್ಷಗಳ ಮೊದಲು ಅದನ್ನು ಯಾವುದೇ ರೀತಿಯಲ್ಲಿ ಪರಿಗಣಿಸುವ ಯೋಜನೆಯಿಲ್ಲ ಎನ್ನಲಾಗಿದೆ. ಪ್ರಸ್ತುತ, ಕಾರ್ಯಕ್ಷಮತೆ ಆಧಾರಿತ ವ್ಯವಸ್ಥೆಯನ್ನು ತರಲು ಯೋಜನೆ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ.

Leave A Reply

Your email address will not be published.