UNESCO: ಜಗತ್ತಿನಾದ್ಯಂತ ಶಾಲೆಗಳಲ್ಲಿ ಸ್ಮಾರ್ಟ್‌ಫೋನ್‌ ಬಳಸದಂತೆ ಕರೆ! ಏನಿದು ಹೊಸ ರೂಲ್ಸ್‌?

UNESCO calls for global ban on smartphone in schools

UNESCO: ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ.ಮಕ್ಕಳಿಂದ ಹಿಡಿದು ವಯಸ್ಸಾದವರವರೆಗು ಎಲ್ಲರೂ ಮೊಬೈಲ್( Mobile)ಬಳಕೆ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಈ ಮೊಬೈಲ್ ಬಳಕೆಯಿಂದ ಮಕ್ಕಳ ಶೈಕ್ಷಣಿಕ ಕಲಿಕೆ ಮತ್ತು ಸಾಮಾಜಿಕ ಸಂವಹನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆ ಯುನೆಸ್ಕೋದ(Unesco) ವಿಶೇಷ ಕ್ರಮ ಕೈಗೊಳ್ಳಲು ಮುಂದಾಗಿದೆ.
ಯುನೆಸ್ಕೋ (UNESCO) ಎಲ್ಲರಿಗೂ ಗೊತ್ತಿರುವ ಹಾಗೆ, ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ.ಈ ನಡುವೆ ಸ್ಮಾರ್ಟ್ಫೋನ್ ಗಳು (Smart Phones)ವಿದ್ಯಾರ್ಥಿಗಳ ಕಲಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಹಿನ್ನೆಲೆ ಶಾಲೆಗಳಲ್ಲಿ ಸ್ಮಾರ್ಟ್ಫೋನ್ಗಳ (Smart Phones) ಮೇಲೆ ಜಾಗತಿಕ ನಿಷೇಧ (Globally Ban) ಮಾಡಲು ಯುನೆಸ್ಕೋ ಕರೆ ನೀಡಿದೆ.

ಡಿಜಿಟಲ್ ಯುಗದಲ್ಲಿ ಕೇಂದ್ರೀಕೃತ ಕಲಿಕೆ ಮತ್ತು ಅರ್ಥಪೂರ್ಣ ಮಾನವ ಸಂವಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.ಜುಲೈ 26 ರಂದು ಬಿಡುಗಡೆಯಾದ 435 ಪುಟಗಳ ಸಮಗ್ರ ವರದಿಯ ಅನುಸಾರ, ಮೊಬೈಲ್ ಸಾಧನಗಳ ಬಳಕೆಯಿಂದ 14 ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಪರಿಣಾಮ ಬೀರಿದೆ.ಸ್ಮಾರ್ಟ್ಫೋನ್ಗಳು ತರಗತಿಯಲ್ಲಿ ವಿದ್ಯಾರ್ಥಿಗಳ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಸ್ಮಾರ್ಟ್ಫೋನ್ ಬಳಕೆಯಿಂದ ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಗೆ ಅಡಚಣೆ ಉಂಟಾಗುತ್ತದೆ. ಡಿಜಿಟಲ್ ಸಾಧನಗಳನ್ನು ದಿನನಿತ್ಯ ಹೆಚ್ಚು ಬಳಕೆ ಮಾಡುವ ಹಿನ್ನೆಲೆ ವಿದ್ಯಾರ್ಥಿಯನ್ನು ಅಂತರ್ಮುಖಿ ವ್ಯಕ್ತಿತ್ವ ಬೆಳೆಯಲು ಪ್ರೇರೇಪಿಸುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಮಾತುಕತೆ ಕಡಿಮೆ ಮಾಡಿ ಅರ್ಥಪೂರ್ಣ ಸಂವಾದವನ್ನು ಬೆಳೆಸುವ ಅನುಕೂಲಕರ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಯುನೆಸ್ಕೊ ಒಳಗೊಂಡಿದೆ.

ಸ್ಮಾರ್ಟ್ ಫೋನ್ ಬಳಕೆ ಸಂವಹನಗಳನ್ನು ಕಡಿಮೆ ಮಾಡುವ ಜೊತೆಗೆ ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಯುನೆಸ್ಕೋ ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್ಫೋನ್ ಬಳಕೆಯ ಮೇಲೆ ನಿಷೇಧ ಹೇರಿದೆ. ಈ ಪ್ರಸ್ತಾಪ ಶಾಲೆಗಳಲ್ಲಿ ಸ್ಮಾರ್ಟ್ಫೋನ್ ಬಳಕೆಯ ಮರುಮೌಲ್ಯಮಾಪನವನ್ನು ಉತ್ತೇಜಿಸುವ ಉದ್ದೇಶವನ್ನು ಒಳಗೊಂಡಿದೆ. ತಂತ್ರಜ್ಞಾನ ಅಳವಡಿಕೆಯು ವೇಗವಾಗಿ ಹೆಚ್ಚುತ್ತಿರುವ ಭಾರತದ ಸಂದರ್ಭದಲ್ಲಿ, ಯುನೆಸ್ಕೋದ ಶಿಫಾರಸಿಗೆ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಹೆಚ್ಚು ಕುತೂಹಲಕಾರಿಯಾಗಿದೆ. ಚಾಟ್ಜಿಪಿಟಿಯಂತಹ ಬುದ್ಧಿಮತ್ತೆ (AI) ಚಾಟ್ಬಾಟ್ಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವುಗಳ ಬಳಕೆಯನ್ನು ನಿರ್ಬಂಧ ಹೇರಬೇಕಾದ ಅನಿವಾರ್ಯತೆ ಕುರಿತು UNESCO ಮತ್ತೆ ಮತ್ತೆ ಪ್ರಸ್ತಾಪ ಮಾಡುತ್ತಿದೆ.

Leave A Reply

Your email address will not be published.