Moringa Leaves:ಈ ಮಹಾರೋಗಗಳಿಗೆ ರಾಮಬಾಣ ನುಗ್ಗೆಸೊಪ್ಪು!!

Health news Health benefits of moringa leaves details in kannada

Moringa leaves : ಆರೋಗ್ಯವೇ ಭಾಗ್ಯ(Health) ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಇಂದಿನ ಒತ್ತಡಯುತ ಜೀವನ ಶೈಲಿಯಲ್ಲಿ ನಿದ್ರಾ ಹೀನತೆ, ಅಪೌಷ್ಠಿಕತೆ, ಜಂಕ್ ಫುಡ್ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ನಡುವೆ ನಮ್ಮ ಮನೆಯ ಸುತ್ತಮತ್ತಲಿನಲ್ಲೇ ಸಿಗುವ ಕೆಲವು ಗಿಡ, ಎಲೆಗಳ ಮೂಲಕ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ನುಗ್ಗೆ ಸೊಪ್ಪಿನಿಂದ(Moringa leaves) ಏನೆಲ್ಲ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಕಣ್ಣಿನ (Eye) ಆರೋಗ್ಯ ಕಾಪಾಡುವಲ್ಲಿ ನುಗ್ಗೆ ಸೊಪ್ಪು ವಿಶೇಷ ಕಾರ್ಯ ನಿರ್ವಹಿಸುತ್ತದೆ. ಅಧಿಕ ಪ್ರಮಾಣದ ವಿಟಮಿನ್ ಎ ನುಗ್ಗೆ ಸೊಪ್ಪಿನಲ್ಲಿ ದೊರೆಯುವ ಹಿನ್ನೆಲೆ ನುಗ್ಗೆ ಸೊಪ್ಪು ಸೇವನೆ ಮಾಡುವುದು ತುಂಬಾ ಒಳ್ಳೆಯದು.ನುಗ್ಗೆ ಸೊಪ್ಪಿಗೆ ಒಂದು ಚಮಚ ಅರಿಶಿಣ, ಲಿಂಬೆರಸ, ಗಂಧದ ಪುಡಿ ಸೇರಿಸಿ, ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ನಂತೆ ಬಳಸಿಕೊಳ್ಳುವ ಮೂಲಕ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ನುಗ್ಗೆ ಸೊಪ್ಪು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ. ನುಗ್ಗೆ ಸೊಪ್ಪಿನಲ್ಲಿ ಪೈಥೋಕೆಮಿಕಲ್ ಅಂಶ ಇದೆ. ಇದು ರಕ್ತದೊತ್ತಡ (Blood pressure) ನಿವಾರಿಸುತ್ತದೆ.ನುಗ್ಗೆ ಸೊಪ್ಪಿನ ಎರಡು ಚಮಚ ರಸವನ್ನು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಅಂಟಿ ಒಕ್ಸಿಡೆಂಟ್ ಗಳಿರುವ ಜೊತೆಗೆ ಪೋಷಕಾಂಶಗಳೂ ಚೆನ್ನಾಗಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಪ್ರೀ ರಾಡಿಕಲ್ಸ್ ಗಳ ವಿರುದ್ಧ ಮೂಲದಲ್ಲೇ ಹೋರಾಡುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಕೋಶಗಳನ್ನು ಬೆಳೆಯದಂತೆ ತಡೆದು ಕ್ಯಾನ್ಸರ್ ವಿರುದ್ಧ ರಕ್ಷಣಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ.

ನುಗ್ಗೆ ಸೊಪ್ಪು ಚರ್ಮದ ವೃದ್ಧಾಪ್ಯವನ್ನು ತಡೆಯಲು ನೆರವಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು, ಮುಖದ ಚರ್ಮ ಸುಕ್ಕುಗಟ್ಟಲು ಕಾರಣವಾಗುವ ಪ್ರಿರ್ಯಾಡಿಕಲ್ ಅಂಶವನ್ನು ತಡೆಗಟ್ಟಿ ಸುಕ್ಕುಗಟ್ಟದ ರೀತಿ ಸಹಾಯ ಮಾಡುತ್ತದೆ.ಹೆಚ್ಚಿನವರನ್ನು ಕಾಡುವ ಮೊಡವೆ ಸಮಸ್ಯೆಗೂ ನುಗ್ಗೆ ಸೊಪ್ಪು ರಾಮಬಾಣವಾಗಿದೆ. ನುಗ್ಗೆ ಸೊಪ್ಪನ್ನು ಲಿಂಬೆಹಣ್ಣಿನ ರಸದೊಂದಿಗೆ ಅರೆದು ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಪಡೆಯಬಹುದು

ಮಧುಮೇಹ (Diabetic) ಇದ್ದಾಗ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಆದರೆ, ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಡಿ (Vitamin D)ಅಂಶ ಹೇರಳವಾಗಿರುತ್ತದೆ. ಇದರಿಂದ ಮನುಷ್ಯನ ದೇಹದಲ್ಲಿ ಹೇರಳವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ. ನುಗ್ಗೆಕಾಯಿ ಸೊಪ್ಪನ್ನು ನುಣ್ಣಗೆ ರುಬ್ಬಿ ಮುಖ, ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು ಕೆಲ ಸಮಯ ಬಿಟ್ಟು ತಣ್ಣೀರಿನಲ್ಲ ತೊಳೆದುಕೊಂಡರೆ ಮುಖದ ಕಾಂತಿ ಹೆಚ್ಚಾಗುವ ಜೊತೆಗೆ ಮುಖವನ್ನು ಬ್ಯಾಕ್ಟಿರೀಯಾದಿಂದ ರಕ್ಷಿಸುತ್ತದೆ.

ಇದನ್ನೂ ಓದಿ: ಮನೆಯ ಸದಸ್ಯರ ಆರೋಗ್ಯ ಸುಧಾರಣೆಗೆ ಕಿಟಕಿ, ಬಾಗಿಲಿಗೆ ಈ ಬಣ್ಣದ ಪರದೆ ಹಾಕಿ! ರಿಸಲ್ಟ್ ನಿಮ್ಮ ಕಣ್ಣ ಮುಂದೆ!

Leave A Reply

Your email address will not be published.