Karnataka Rain: ಮತ್ತೆ ಬಿರುಸುಗೊಂಡ ಮಳೆ; ಇಂದು ಈ ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಣೆ!!!

Heavy rain in karnataka school and college holidays in these Karnataka district

Karnataka Rain: ರಾಜ್ಯದ ವಿವಿಧ ಕಡೆಗಳಲ್ಲಿ ಮಳೆ(Karnataka Rain) ಮತ್ತೆ ತೀವ್ರಗೊಂಡಿದ್ದು,  ಕಳೆದ ನಾಲ್ಕೈದು ದಿನಗಳಿಂದ ಮಳೆಯ ಆರ್ಭಟ ಭೀತಿ ಮುಂದುವರಿದ ಹಿನ್ನೆಲೆ ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೆಲವೆಡೆ ಮಳೆಯ ಆರ್ಭಟ ಕೊಂಚ ಮಟ್ಟಿಗೆ ತಗ್ಗಿದ್ದು, ಇನ್ನೂ ಕೆಲವೆಡೆ ವರುಣನ ಆರ್ಭಟ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ವರುಣಾರ್ಭಟ ಮುಂದುವರೆದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವಿಜಯಪುರ ಮತ್ತು  ಬಾಗಲಕೋಟೆ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ.ಈ ಕುರಿತು ಜಿಲ್ಲಾಧಿಕಾರಿ ಭೂ ಭಾಲನ್ ವಿಜಯಪುರ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಪಿಯು ಕಾಲೇಜಿಗೆ ರಜೆ ನೀಡಿ  ಆದೇಶ ಹೊರಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಎಲ್ಲಾ ಅಂಗನವಾಡಿ ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಎಂ ಜಾನಕಿ ಆದೇಶ ನೀಡಿದ್ದಾರೆ. ಎಡೆ ಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಮಳೆಯಿಂದ ಶಾಲೆಗಳ ಕಟ್ಟಡಗಳು ಸೋರಿಕೆಯಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಶಾಲಾ ಕಟ್ಟಡಗಳಲ್ಲಿ ಸೋರಿಕೆಯಾಗುತ್ತಿರುವ ಕುರಿತಂತೆ ಡಿಡಿಪಿಐರಿಂದ ಪತ್ರ ಬರೆದ ಕಾರಣ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ,ಇಂದು ಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: LPG ಸಿಲಿಂಡರ್ ಕುರಿತು ಸಾರ್ವಜನಿಕರಿಗೆ ಕೇಂದ್ರದಿಂದ ಮಹತ್ವದ ಘೋಷಣೆ!

Leave A Reply

Your email address will not be published.