Kalburgi News: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹೊಸ ರೂಲ್ಸ್! ಬುರ್ಖಾ ಇಲ್ಲದೆ ಬಸ್ ಹತ್ತುವಂತಿಲ್ಲ!!! ಈ ಮಾತನ್ನು ಯಾರು ಹೇಳಿದ್ದು?

Kalaburgi news KSRTC Bus Driver Denies Entry To Muslim Students Without Burqa in Kamalapur

Kalaburagi News: ಕೆಕೆಎಸ್‌ಆರ್‌ಟಿಸಿ(KKSRTC) ಬಸ್ ಚಾಲಕರೊಬ್ಬರು ಕಲಬುರಗಿ ಜಿಲ್ಲೆಯ (Kalaburagi News)ಕಮಲಾಪುರ ತಾಲೂಕು ಬಸ್ ನಿಲ್ದಾಣದಲ್ಲಿ ಬುರ್ಖಾ ಇಲ್ಲದೆ ಬಸ್ ಹತ್ತುವಂತಿಲ್ಲವೆಂದು ಮುಸ್ಲಿಂ ವಿದ್ಯಾರ್ಥಿಗಳಿಗೆ(Muslim Students) ತಾಕೀತು ಮಾಡಿ ವಿದ್ಯಾರ್ಥಿನಿಯರನ್ನು ಬಸ್‌ಗೆ ಹತ್ತಿಸಿಕೊಳ್ಳಲು ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ.

ಕಲಬುರಗಿಯ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KKSRTC) ಬಸ್ ಚಾಲಕನೊಬ್ಬ ಜುಲೈ 27 ರಂದು ಗುರುವಾರ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಬಸ್ ನಿಲ್ದಾಣದಲ್ಲಿ ಬುರ್ಖಾ ರಹಿತ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಸ್‌ಗೆ ಹತ್ತಿಸಲು ನಿರಾಕರಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ(Social Media)ವೈರಲ್ ಆಗಿ, ಚಾಲಕನ ನಡೆದೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತ್ಯಕ್ಷದರ್ಶಿಗಳು ಮಾಧ್ಯಮವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನೊಳಗೊಂಡ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಗುಂಪು ಓಕಲಿ ಗ್ರಾಮಕ್ಕೆ ತೆರಳುವ ಸಲುವಾಗಿ ಬಸ್ಸಿಗಾಗಿ (Bus)ಕಾಯುತ್ತಿದ್ದರು ಎನ್ನಲಾಗಿದೆ. ಆದರೆ, ಬಸ್ ಹತ್ತಲು ವಿದ್ಯಾರ್ಥಿನಿಯರು ಮುಂದಾದಾಗ ಬಸ್ ಚಾಲಕ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಬುರ್ಖಾ ಧರಿಸಬೇಕು(Burqa )ಎಂದು ಬಸ್ ಚಾಲಕ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ.

ವೈರಲ್ ಆಗುತ್ತಿರುವ( Viral Video)ವಿಡಿಯೋ ಕ್ಲಿಪ್‌ನ ಅನುಸಾರ , ಬಸ್ ಚಾಲಕ(Bus Driver)ವಿದ್ಯಾರ್ಥಿನಿಯ ಹೆಸರನ್ನು ಕೇಳಿ, “ನೀನು ಮುಸ್ಲಿಂ ಆಗಿದ್ದರೆ ಬುರ್ಖಾವನ್ನು ಧರಿಸಬೇಕು. ಆಗ ಮಾತ್ರವೇ ಬಸ್ ಹತ್ತಲು ಅವಕಾಶ ನೀಡುತ್ತೇನೆ.” ಎಂದು ಚಾಲಕ ಹೇಳಿರುವ ಮಾತುಗಳು ವೈರಲ್ ಆಗಿದೆ. ಈ ವೇಳೆ, ಮುಸ್ಲಿಂ ವಿದ್ಯಾರ್ಥಿನಿಯರು ನಾವು ನಮ್ಮ ಗ್ರಾಮಕ್ಕೆ ಹೋಗಬೇಕೆಂದು ಮನವಿ ಮಾಡಿದರು ಕೂಡ ಬಸ್ ಚಾಲಕ ವಿದ್ಯಾರ್ಥಿನಿಯರ ಮಾತನ್ನು ಕೇಳುವ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ. ಚಾಲಕನ ಈ ರೀತಿಯ ವರ್ತನೆಯಿಂದ ಬೇಸರಗೊಂಡ ವಿದ್ಯಾರ್ಥಿಗಳು ಓಕಲಿ ಗ್ರಾಮಕ್ಕೆ ತೆರಳುವ ಬೇರೆ ಬಸ್‌ ಮೂಲಕ ತಮ್ಮ ಗ್ರಾಮಕ್ಕೆ ತೆರಳಲು ಮುಂದಾಗಿದ್ದಾರೆ. ಈ ಘಟನೆ ನಡೆದ ಬಳಿಕ 14 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿನಿಯರು ತಮ್ಮ ಶಿಕ್ಷಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಈ ವಿಚಾರ ತಿಳಿದು ಶಿಕ್ಷಕರು ಕೂಡ ಬಸ್ ಚಾಲಕನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದಾಗ, ಚಾಲಕ ಶಿಕ್ಷಕರೊಂದಿಗೆ ಕೂಡ ಕೂಗಾಡಿದ್ದಾನೆ ಎನ್ನಲಾಗಿದೆ. ಧಾರ್ಮಿಕ ಉಡುಪಿನ ಆಧಾರದ ಮೇಲೆ ತಾರತಮ್ಯ ಸೃಷ್ಟಿಸುವ ಚಾಲಕನ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ನಡುವೆ, ಬೀದರ್ ಜಿಲ್ಲಾ ಕೆಕೆಎಸ್‌ಆರ್‌ಟಿಸಿ ವಿಭಾಗೀಯ ಭದ್ರತಾ ನಿರೀಕ್ಷಕ (ಡಿಎಸ್‌ಐ) ಎಚ್‌ಕೆ ಮಲ್ಲಿಕಾರ್ಜುನ ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಈ ಘಟನೆಯನ್ನು ಗಮನಿಸಿದರೆ ಚಾಲಕನದ್ದೇ ತಪ್ಪು ಎಂಬುದು ತಿಳಿಯುತ್ತದೆ. ಚಾಲಕನನ್ನು ಬಸವಕಲ್ಯಾಣ ಬಸ್ ಡಿಪೋದ ಮೆಹಬೂಬ್ ಎಂದು ಗುರುತಿಸಲಾಗಿದೆ. ಈ ಕುರಿತು ತನಿಖೆ ನಡೆಸಲು(Investigation )ಕಮಲಾಪುರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಕಂಡಕ್ಟರ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮಾಹಿತಿ ಮತ್ತು ಹೇಳಿಕೆಗಳನ್ನು ದಾಖಲಿಸಲು ಸೂಚಿಸಲಾಗಿದೆ. ಕೆಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ವರದಿ ಸಲ್ಲಿಸಿ ಚಾಲನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಎಚ್‌ಕೆ ಮಲ್ಲಿಕಾರ್ಜುನ ಅವರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.