LPG ಸಿಲಿಂಡರ್ ಕುರಿತು ಸಾರ್ವಜನಿಕರಿಗೆ ಕೇಂದ್ರದಿಂದ ಮಹತ್ವದ ಘೋಷಣೆ!

Latest national news An important announcement from the central government about LPG cylinders

LPG Gas Cylinder: ಸಾಮಾನ್ಯ ಜನತೆಗೆ ದಿನಂಪ್ರತಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಈ ನಡುವೆ ಕೇಂದ್ರ ಸರಕಾರ ಜನರಿಗೆ ಗುಡ್ ನ್ಯೂಸ್(Good News)ನೀಡಿದೆ.ಕೇಂದ್ರ ಸರ್ಕಾರ (Central Government)ಎಲ್ಪಿಜಿ ಗ್ಯಾಸ್ ಸಿಲಿಂಡರ್( LPG Gas Cylinder)ಸಬ್ಸಿಡಿ ಕುರಿತು ಮಹತ್ವದ ಘೋಷಣೆ ಮಾಡಿದೆ.

ಈ ನಡುವೆ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಮಂದಿಗೆ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು (Good News)ನೀಡಿದೆ. ಹೌದು!!ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ ಅನಿಲ(ಗ್ಯಾಸ್) ಸಂಪರ್ಕ ಪಡೆದವರು ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆಯಬಹುದಾಗಿದ್ದು, ಈ ಯೋಜನೆಯಡಿ ಬಡ ಮಹಿಳೆಯರಿಗೆ ಮಾತ್ರ ಗ್ಯಾಸ್ ಸಂಪರ್ಕ ಒದಗಿಸಲಾಗುತ್ತದೆ.

ಭಾರತದಲ್ಲಿ ವಿಶೇಷವಾಗಿ ಬಡವರಿಗೆ ಸಹಾಯಧನ ಯೋಜನೆಯನ್ನ ಆರಂಭಿಸಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆಯಡಿ, 21 ಮೇ 2022 ರಿಂದ, ಕೇಂದ್ರ ಸರ್ಕಾರವು ಪ್ರತಿ ಸಿಲಿಂಡರ್ಗೆ ರೂ.200 ಸಬ್ಸಿಡಿಯನ್ನು ಘೋಷಣೆ ಮಾಡಿದೆ. ಈ ಸಬ್ಸಿಡಿ ವರ್ಷಕ್ಕೆ 12 ಸಿಲಿಂಡರ್ಗಳಿಗೆ ಅನ್ವಯವಾಗುತ್ತದೆ.ಕೇಂದ್ರ ಸರ್ಕಾರ ಎಲ್ಪಿಜಿಗೆ ನೇರ ಲಾಭ ವರ್ಗಾವಣೆ (DBTL) ಯೋಜನೆಯಡಿ, ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿಯನ್ನು ಜಮೆ ಮಾಡಲಾಗುವ ಕುರಿತು ಮಾಹಿತಿಯನ್ನು ಘೋಷಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವಾಲಯ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಹಲವು ವಿವರ ನೀಡಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು PMUY ಕುಟುಂಬಗಳಿಗೆ ಸುಮಾರು 14.17 ಕೋಟಿ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನ ಒದಗಿಸಿದೆ. ಈ ನಡುವೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆಯಡಿ 2022-23 ಮತ್ತು 2023-24ರ ಆರ್ಥಿಕ ವರ್ಷಗಳಲ್ಲಿ 200 ರೂಪಾಯಿ ಸಬ್ಸಿಡಿಯೊಂದಿಗೆ ಗ್ಯಾಸ್ ಸಿಲಿಂಡರ್ಗಳನ್ನ ಒದಗಿದುವುದಕ್ಕೆ ಕೇಂದ್ರ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಈ ಯೋಜನೆಯಲ್ಲಿ 9 ಕೋಟಿಗೂ ಹೆಚ್ಚು ಫಲಾನುಭವಿಗಳಿದ್ದಾರೆ. ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್ ಬೆಲೆಯನ್ನ ನಿಯಂತ್ರಣದಲ್ಲಿರಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡವರು ವರ್ಷಕ್ಕೆ 12 ಗ್ಯಾಸ್ ಸಿಲಿಂಡರ್ಗಳ ಮೇಲೆ ರೂ.2,400 ಸಬ್ಸಿಡಿ ಪಡೆಯಲು ಅನುವು ಮಾಡಿಕೊಡುತ್ತದೆ.ಉಜ್ವಲ 2.0 ಯೋಜನೆಯ ಪ್ರಯೋಜನ ಪಡೆಯಲು ಕೆಲವು ಅರ್ಹತಾ ಮಾನದಂಡಗಳು ಇವೆ ಎಂಬುದನ್ನು ಗಮನಿಸಬೇಕು. ಅರ್ಜಿದಾರರು ಮಹಿಳೆಯರಾಗಿದ್ದು 18 ವರ್ಷ ವಯಸ್ಸಾಗಿರಬೇಕು. ಅಷ್ಟೇ ಅಲ್ಲದೆ,ಅದೇ ಮನೆಯಲ್ಲಿ ಇತರ ತೈಲ ಮಾರುಕಟ್ಟೆ ಕಂಪನಿಯಿಂದ ಯಾವುದೇ LPG ಸಂಪರ್ಕ ಪಡೆದಿರಬಾರದು.

ಗ್ಯಾಸ್ ಸಿಲಿಂಡರ್ ಸೇವೆ ಉಚಿತವಾಗಿದ್ದು ಆದರೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯೋಜನೆಗೆ ಅರ್ಜಿ ಸಲ್ಲಿಸಲು ID ಪುರಾವೆ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಪಡಿತರ ಚೀಟಿ ಮುಂತಾದ ದಾಖಲೆಗಳು ನೀಡಬೇಕಾದ ಅಗತ್ಯವಿದೆ.ಈ ವಿವರಗಳೊಂದಿಗೆ https://pmuy.gov.in/ujjwala2.html ಪೋರ್ಟಲ್ ಮೂಲಕ ಅನ್ವಯಿಸಬೇಕು.ಈ ಯೋಜನೆಯ ಫಲಾನುಭವಿಗಳಿಗೆ ಒಂದು ವರ್ಷದವರೆಗಿದ್ದ ಸೇವೆಯನ್ನು ಸದ್ಯ, ಕೇಂದ್ರವು ಇತ್ತೀಚೆಗೆ ಪ್ರಯೋಜನವನ್ನ ವಿಸ್ತರಣೆ ಮಾಡಿದೆ.

2020-21 ರಿಂದ 2022-23 ರ ತನಕ ಎಲ್ಪಿಜಿ ಬೆಲೆಗಳಿಗೆ ಅಂತರಾಷ್ಟ್ರೀಯ ಮಾನದಂಡವಾದ ಸೌದಿ ಸಿಪಿ ಪ್ರತಿ MT ಗೆ $415 ರಿಂದ $712 ಕ್ಕೆ ಹೆಚ್ಚಳ ಮಾಡಿದೆ. ಹೀಗಾಗಿ, ಅಂತರಾಷ್ಟ್ರೀಯ ಬೆಲೆಗಳು ಏರಿಕೆ ಕಾಣುತ್ತಿರುವ ಕುರಿತು ಕೂಡ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವಾಲಯ ಮಾಹಿತಿ ನೀಡಿದೆ.ಈ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ತೈಲ ಮಾರುಕಟ್ಟೆ ಕಂಪನಿಗಳಿಗೆ 22,000 ಕೋಟಿ ರೂಪಾಯಿಗಳ ಒಂದು ಬಾರಿ ಪರಿಹಾರವನ್ನ ಸರ್ಕಾರ ಅನುಮೋದನೆ ಮಾಡಿದೆ.

Leave A Reply

Your email address will not be published.