Film Piracy: ರಾಜ್ಯಸಭೆ, ಲೋಕಸಭೆಯಲ್ಲಿ ಯಾವೆಲ್ಲ ಮಸೂದೆಗೆ ಅಂಗೀಕಾರ? ಜನನ ಪ್ರಮಾಣ ಪತ್ರ, ಸಿನಿಮಾ ಪೈರಸಿಗೆ ಶಿಕ್ಷೆ ಸಂಬಂಧ ಪಟ್ಟಂತೆ ಬಿಗ್ ಅಪ್ಡೇಟ್ ಇಲ್ಲಿದೆ!!!

Latest news cinema news Big update on punishment for movie piracy

Film Piracy: ರಾಜ್ಯಸಭೆ, ಲೋಕಸಭೆಯಲ್ಲಿ ಕೆಲ ಮಸೂದೆಗೆ ಅಂಗೀಕಾರ ಮಾಡಲಾಗಿದೆ. ರಾಜ್ಯ ಸಭೆಯಲ್ಲಿ ಸಿನಿಮಾ ಪೈರಸಿಗೆ ಶಿಕ್ಷೆ ಸಂಬಂಧ ಪಟ್ಟಂತೆ ಬಿಗ್ ಅಪ್ಡೇಟ್ ಇಲ್ಲಿದೆ!! ಹೌದು!! ರಾಜ್ಯಸಭೆಯಲ್ಲಿ ಸಿನಿಮಾಟೋಗ್ರಾಫ್ ಕಾಯ್ದೆ 1952ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು(Cinematograph Amendment Bill) ಒಮ್ಮತದಿಂದ ಗುರುವಾರ ಅಂಗೀಕರಿಸಲಾಗಿದೆ.

ಮಣಿಪುರದ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದ ಘಟನೆಯ ಬಳಿಕ ಚಿತ್ರೋದ್ಯಮಕ್ಕೆ ಸಹಾಯ ಮಾಡಲು ಪರವಾನಗಿ ಪ್ರಕ್ರಿಯೆ ಸರಳಗೊಳಿಸಲಾಗುತ್ತಿದೆ. ಪೈರಸಿಗೆ 3 ವರ್ಷ ಜೈಲು ಶಿಕ್ಷೆ, ಸಿನಿಮಾ ನಿರ್ಮಾಣದ ಶೇ 4ರಷ್ಟು ದಂಡ ವಿಧಿಸುವ ಕುರಿತು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಮಾಡಲಾಗಿದೆ. ಸಿನಿಮಾ ಪೈರಸಿ ತಡೆಯುವ(Film Piracy) ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ 2023 ಅನ್ನು ಗುರುವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.ಈ ಮಸೂದೆಯಡಿ ನಕಲು ಮಾಡಿರುವ ಆರೋಪ ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡಾ 5ರಷ್ಟು ದಂಡ ವಿಧಿಸಲು ಸರ್ಕಾರ ಅವಕಾಶ ಕಲ್ಪಿಸಲಾಗಿದೆ.

ಲೋಕಸಭೆಯಲ್ಲಿ ಮಹತ್ವದ ಮಸೂದೆ ಮಂಡನೆ:
ಇನ್ಮುಂದೆ ಎಲ್ಲಾ ದಾಖಲಾತಿಗೂ `ಜನನ ಪ್ರಮಾಣ ಪತ್ರ’ ಕಡ್ಡಾಯ ಮಾಡಿ ಲೋಕಸಭೆಯಲ್ಲಿ ಮಹತ್ವದ ಮಸೂದೆ ಮಂಡನೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಅನ್ನು 54 ವರ್ಷಗಳಲ್ಲಿ ಮೊದಲ ಬಾರಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದೆ.ಹೀಗಾಗಿ, ಶಾಲಾ – ಕಾಲೇಜುಗಳಲ್ಲಿ ಪ್ರವೇಶ, ಚಾಲನಾ ಪರವಾನಗಿ ವಿತರಣೆ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿ ಹೀಗೆ ಎಲ್ಲ ಪ್ರಕ್ರಿಯೆಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.

ತಂತ್ರಜ್ಞಾನ ಮತ್ತು ಡಿಜಿಟಲೀಕರಣವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ, ಸರ್ಕಾರವು ಎಲೆಕ್ಟ್ರಾನಿಕ್ ನೋಂದಣಿ ಮತ್ತು ಜನನ ಮತ್ತು ಮರಣ ಪ್ರಮಾಣಪತ್ರಗಳ ವಿತರಣೆಗಾಗಿ ಮಸೂದೆಯಲ್ಲಿ ಷರತ್ತುಗಳನ್ನು ಕೂಡ ವಿಧಿಸಿದೆ . ಶಾಲಾ ಪ್ರವೇಶಗಳು, ಚಾಲನಾ ಪರವಾನಗಿ ನೀಡಿಕೆ, ಮತದಾರರ ಪಟ್ಟಿ ತಯಾರಿಕೆ, ವಿವಾಹ ನೋಂದಣಿ, ಸರ್ಕಾರಿ ಉದ್ಯೋಗ, ಸಾರ್ವಜನಿಕ ವಲಯದ ಉದ್ಯಮಗಳು, ಪಾಸ್ಪೋರ್ಟ್ ವಿತರಣೆ, ಆಧಾರ್ ಸಂಖ್ಯೆ ನೀಡುವಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ಪ್ರಮಾಣಪತ್ರವು ಅತ್ಯವಶ್ಯಕವಾಗಿದೆ.

ರಾಜ್ಯ ಸರ್ಕಾರ, ಸಾರ್ವಜನಿಕರು ಮತ್ತು ಇತರ ಪಾಲುದಾರರೊಂದಿಗೆ ನಡೆಸಿದ ಸಮಾಲೋಚನೆಗಳ ಅನುಸಾರ, ಮಸೂದೆಯ ರೂಪದಲ್ಲಿ ಕಾಯ್ದೆಯ ಕೆಲವು ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಪ್ರಸ್ತಾಪ ಮಾಡಲಾಗಿದೆ. ನೋಂದಾಯಿತ ಜನನ ಮತ್ತು ಮರಣಗಳಿಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ಗಳನ್ನು ಸ್ಥಾಪಿಸುವುದು ಮಸೂದೆಯ ಮುಖ್ಯ ಗುರಿಯಾಗಿದೆ

Leave A Reply

Your email address will not be published.